ಕೊರಟಗೆರೆ: ಮೀಸಲಾತಿ ಆರಿಗುವ ಕೊರಟಗೆರೆ ವಿಧಾನಸಭಾ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾದರೇ ೨೦೨೮ಕ್ಕೆ ಮತದಾರರು ಸೂಚಿಸುವ ಪಕ್ಷದಿಂದ ನಾನೇ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಕೋಳಾಲ ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಮಾವತ್ತೂರು ಗ್ರಾಪಂ ವ್ಯಾಪ್ತಿಯ ವಿಶ್ವಜ್ಞಾನ ಭಾರತಿ ಪ್ರೌಢ ಶಾಲೆಯಲ್ಲಿ ಪಿಎನ್‌ಕೆ ಅಭಿಮಾನಿ ಬಳಗದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸಮವಸ್ತç ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ರಾಜಕೀಯ ಜನ್ಮ ಭೂಮಿ ಕೊರಟಗೆರೆ ಕ್ಷೇತ್ರ. ೨೦೦೮ರಲ್ಲಿ ಮೀಸಲಾತಿ ಬರದೇ ಇದ್ದಿದ್ದರೇ ನಾನು ಶಾಸಕನಾಗಿ ಆಯ್ಕೆ ಆಗ್ತಿದ್ದೆ. ಯಾರೇ ಬಂದರೂ ಚುನಾವಣೆಗೆ ನಿಲ್ಲೂದು ಖಚಿತ.ಕೊರಟಗೆರೆ ಕ್ಷೇತ್ರದ ಜನತೆ ನನ್ನ ಕೈ ಹಿಡಿತಾರೆ ಎಂಬ ಭರವಸೆ ನನಗಿದೆ. ಜಿಪಂ ಸದಸ್ಯನಾಗಿ ೫ವರ್ಷ ಮತ್ತು ೨೦ವರ್ಷ ಕೊರಟಗೆರೆ ಕ್ಷೇತ್ರದಲ್ಲಿ ನನ್ನ ಕೈಲಾದ ಬಡವರ ಪರವಾಗಿ ಜನಸೇವೆ ಮಾಡಿದ್ದೇನೆ ಎಂದರು.
ಬೆAಗಳೂರಿನ ಉದ್ಯಮಿ ಪರಮೇಶ್ ಮಾತನಾಡಿ ಪಿಎನ್‌ಕೆ ಅವರ ಜೊತೆ ನನಗೇ ೪ ದಶಕಗಳ ಒಡನಾಟವಿದೆ. ಕೋವಿಡ್ ವೇಳೆ ನಿರಾಶ್ರಿತರಿಗೆ ನಿತ್ಯ ಅನ್ನಧಾನ, ಸರಕಾರಿ ಶಾಲೆ, ದೇವಾಲಯ ಮತ್ತು ಸಮುದಾಯ ಭವನಗಳ ಅಭಿವೃದ್ದಿಗೆ ಆಧ್ಯತೆ. ಈಗ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯಹಸ್ತ ಕಾರ್ಯಕ್ರಮಗಳು ಜನ ಸೇವೆಗೆ ಮತ್ತೊಂದು ಸಾಕ್ಷಿಯಾಗಿದೆ ಎಂದರು.
ಮಾವತ್ತೂರು ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಪಿ.ಎನ್.ಕೃಷ್ಣಮೂರ್ತಿ ಸದಾ ನೆರವಿನ ಸಹಾಯ ಹಸ್ತ ನೀಡ್ತಿದಾರೆ. ಅರಸೇಶ್ವರಿ ಸಮುದಾಯ ಭವನ ಅಭಿವೃದ್ದಿಯಾಗಿದ್ದ ಶೀರ್ಘವಾಗಿ ಲೋಕಾರ್ಪಣೆ ಆಗಲಿದೆ. ಕೊರಟಗೆರೆ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದರೇ ನಮಗೂ ಹೆಚ್ಚಿನ ಬಲ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಎಸ್.ಆರ್.ರಾಜಣ್ಣ, ಮಾವತ್ತೂರು ಗ್ರಾಪಂ ಮಾಜಿ ಉಪಾಧ್ಯಕ್ಷ ನವೀನ್, ಮುಖ್ಯ ಶಿಕ್ಷಕಿ ಮಂಜುಳಾ, ಗ್ರಾಪಂ ಮಾಜಿ ಸದಸ್ಯ ಮಹಾಲಿಂಗಪ್ಪ, ಮಂಜಣ್ಣ, ಮುಖಂಡರಾದ ಕುಮಾರ್, ಮುತ್ತಯ್ಯ, ರಂಗನಾಥ, ರಾಜಣ್ಣ, ಶಂಕರ್, ಮೂರ್ತಿ, ಹನುಮಂತರಾಜು, ರಾಜುರೆಡ್ಡಿ, ಕರಿಬಸವಯ್ಯ, ನರಸಿಂಹರಾಜು ಸೇರಿದಂತೆ ಇತರರು ಇದ್ದರು.

(Visited 1 times, 1 visits today)