ತುಮಕೂರು/ಶಿವಮೊಗ್ಗ: ತುಮಕೂರಿನ ಇತಿಹಾಸ ಸಂಶೋಧಕರ ತಂಡ ಶಿವಮೊಗ್ಗ ತಾಲೂಕಿನ ಬಿದಿರಿ ಗ್ರಾಮದಲ್ಲಿ ವಿಜಯನಗರ ಕಾಲದ ಅತ್ಯಂತ ಮಹತ್ವದ ಹಾಗೂ ಇಂದಿನವರೆಗೂ ಅಪ್ರಕಟಿತವಾಗಿದ್ದ ಹೊಸ ಶಾಸನವೊಂದನ್ನು ಪತ್ತೆಹಚ್ಚಿದೆ. ಪ್ರೊ. ಎಂ. ಕೊಟ್ರೇಶ್ ಅವರ ನೇತೃತ್ವದ ತಂಡವು ಬಿದಿರಿ ಗ್ರಾಮದ ಸತೀಶ್ ಎಂಬುವವರ ಅಡಿಕೆ ತೋಟದಲ್ಲಿ ಈ ಅಪರೂಪದ ಇತಿಹಾಸದ ದಾಖಲೆಯನ್ನು ಶೋಧಿಸಿದೆ.
ಶಾಸನದ ಸ್ವರೂಪ ಮತ್ತು ವೈಶಿಷ್ಟ÷್ಯಗಳು : ಸುಮಾರು ಆರು ಅಡಿ ಎತ್ತರ, ಎರಡೂವರೆ ಅಡಿ ಅಗಲ ಹಾಗೂ ಅರ್ಧ ಅಡಿ ದಪ್ಪನಾಗಿರುವ ಈ ಶಾಸನವನ್ನು ಕಪುö್ಪ ಮಿಶ್ರಿತ ನೀಲಿ ಛಾಯೆಯ ಬಳಪದ ಕಲ್ಲಿನಲ್ಲಿ ಕೆತ್ತಲಾಗಿದೆ. ಕನ್ನಡ ಲಿಪಿ ಮತ್ತು ಸಂಸ್ಕöÈತ ಭಾಷೆಯನ್ನು ಹೊಂದಿರುವ ಈ ಶಾಸನದಲ್ಲಿ ಒಟ್ಟು ೪೬ ಸಾಲುಗಳನ್ನು ಕಡೆಯಲಾಗಿದೆ. ವಿಜಯನಗರ ಸಾಮ್ರಾಜ್ಯದ ಇತಿಹಾಸ ಅಧ್ಯಯನ ಮಾಡುವವರಿಗೆ, ಅಧ್ಯಾಪಕರಿಗೆ, ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಹೊಸ ಶಾಸನವು ಅತ್ಯಂತ ಉಪಯುಕ್ತ ಮಾಹಿತಿಗಳನ್ನು ಒದಗಿಸಲಿದೆ.
ಈ ಶಾಸನವು ಐತಿಹಾಸಿಕವಾಗಿ ಅತ್ಯಂತ ಮಹತ್ವದ್ದಾಗಿದ್ದು, ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ರಾಜಗುರುಗಳಾದ ಮಾಧವಾರ್ಯ (ಶ್ರೀ ವಿದ್ಯಾರಣ್ಯರು), ಅವರ ಸಹೋದರ ಸಾಯಣರ ಹಾಗೂ ಅವರ ವಂಶಾವಳಿಯ ಅಪರೂಪದ ಉಲ್ಲೇಖಗಳನ್ನು ಒಳಗೊಂಡಿದೆ. ಇದರೊಂದಿಗೆ ವಿಜಯನಗರದ ಆರಂಭದ ದೊರೆಗಳಾದ ಹರಿಹರ, ಬುಕ್ಕ ಮತ್ತು ಹರಿಯಪ್ಪ ಒಡೆಯರ ಕುರಿತಾದ ಪ್ರಮುಖ ಮಾಹಿತಿಗಳು ಇದರಲ್ಲಿ ಕಂಡುಬರುತ್ತವೆ. ಶಾಸನದ ಕಾಲವನ್ನು ನೇರವಾಗಿ ಸಂಖ್ಯೆಗಳಲ್ಲಿ ನೀಡದೆ, ಭಾರತೀಯ ಕಾಲಮಾನದ ಪ್ರಕಾರ “ಶಕ ವರುಷ ಸಾವಿರದ ಮುನ್ನೂರ ಮೂರು ದುರ್ಮತಿ ಸಂವತ್ಸರ ಬಾದ್ರಪದ ಬಹುಳ ಷಷ್ಟಿ ಆದಿವಾರ ಕಪಿಲ ಷಷ್ಟಿ ಪುಣ್ಯಕಾಲದಲು” ಎಂದು ದಾಖಲಿಸಲಾಗಿದೆ. ಇದರ ಆಧಾರದ ಮೇಲೆ ಶಾಸನದ ಕಾಲ ಸಾಮಾನ್ಯ ಶಕ ೧೩೮೧ ಆಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಂದಿನ ಕಾಲದಲ್ಲಿ ಇಲ್ಲೊಂದು ಅಗ್ರಹಾರವಿದ್ದು, ಅದರಲ್ಲಿದ್ದ ೧೦೮ ಬ್ರಾಹ್ಮಣರ ಅನ್ನ ಸತ್ರಕ್ಕಾಗಿ ಎಲವಟ್ಟಿ ಮತ್ತು ಬಿದಿರೆ ಗ್ರಾಮಗಳನ್ನು ದಾನವಾಗಿ ನೀಡಿರುವುದನ್ನು ಈ ಶಾಸನ ಉಲ್ಲೇಖಿಸುತ್ತದೆ. ವಿಶೇಷವೆಂದರೆ ಈ ಗ್ರಾಮಗಳು ಇಂದಿಗೂ ಅಸ್ತಿತ್ವದಲ್ಲಿದ್ದು, ಪ್ರಸ್ತುತ ಸ್ಥಳೀಯರು ಭೂಮಿಯನ್ನು ಉಳುವಾಗ ಇಲ್ಲಿ ಬೂದಿ ಮತ್ತು ಯಜ್ಞ ಕುಂಡಗಳು ಪತ್ತೆಯಾಗಿರುವ ಮಾಹಿತಿಯನ್ನು ಹಂಚಿಕೊAಡಿದ್ದಾರೆ. ಇದು ಶಾಸನದ ಹಿನ್ನೆಲೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ.
ತುಮಕೂರಿನ ಸಂಶೋಧನ ತಂಡದ ಶಶಿಧರ್ ಡಿ. ಎ., ಡಾ. ಮಹೇಶ್ ಕುಮಾರ ಡಿ. ಎಚ್., ಶಶಿಕುಮಾರ ನಾಯ್ಕ ಕೆ. ಸಿ., ಡಾ. ರೇಣುಕಾ ಸ್ವಾಮಿ ಒಡೆಯರ್ ಮತ್ತು ರಂಗನಾಥ ಬಿ. ಆರ್. ಅವರು ಪಾಲ್ಗೊಂಡಿದ್ದರು.

(Visited 1 times, 1 visits today)