
ತುಮಕೂರು: ಜೆಡಿಎಸ್‌ನ ಮಹಿಳಾ ಕಾರ್ಯಕರ್ತೆಯರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪಕ್ಷ ಸಂಘಟನೆಗೆ ಕೆಲಸ ಮಾಡಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಿ ನಾಯಕತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿ ಮಾತನಾಡಿದರು. ಹೆಣ್ಣುಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸಿ ತಮ್ಮ ಸಂಘಟನಾಶಕ್ತಿ ಪ್ರದರ್ಶಿಸಬೇಕು. ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವುದರಿಂದ ಸಾಮಾಜಿಕವಾಗಿಯೂ ಗುರುತಿಸಿಕೊಳ್ಳಲು ಅವಕಾಶವಿದೆ ಎಂದರು.
ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡ ೫೦ರಷ್ಟು ಸ್ಥಾನ ಮೀಸಲಾತಿ ಇದೆ. ಅವಕಾಶ ದೊರೆಯುವ ಅರ್ಹ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಪಡೆದು ರಾಜಕೀಯ ಸ್ಥಾನ ಪಡೆಯಬೇಕು. ಅಂತಹ ಅರ್ಹತೆ ಪಡೆಯಲು ಪಕ್ಷ ಸಂಘಟನೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಬೇಕು. ಈ ಮೂಲಕ ಪಕ್ಷವನ್ನೂ ಬೆಳೆಸಿ ತಾವೂ ಬೆಳೆಯಲು ಅವಕಾಶವಿದೆ. ಮುಂಬರುವ ೨೦೨೮ರ ವಿಧಾನಸಭಾ ಚುನಾವಣೆ ನಮ್ಮೆಲ್ಲರ ಗುರಿಯಾಗಬೇಕು, ಆ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚು ಸ್ಥಾನ ದೊರಕಿಸಲು ಎಲ್ಲರೂ ಕೆಲಸ ಮಾಡಿ, ಮತ್ತೊಮ್ಮೆ ಹೆಚ್.ಡಿ. ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಗುರಿ ನಮ್ಮದಾಗಬೇಕು ಎಂದು ಹೆಚ್. ನಿಂಗಪ್ಪ ಹೇಳಿದರು.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಖಾ ರಾಜ್‌ಗೌಡ ಹಾಗೂ ನಗರ ಅಧ್ಯಕ್ಷೆ ಲಕ್ಷಿö್ಮÃ ನಾಯಕ್ ಅವರು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು. ನಂತರ ಮಾತನಾಡಿದರು.
ನಗರ ಜೆಡಿಎಸ್ ಅಧ್ಯಕ್ಷ ಟಿ.ಹೆಚ್. ಜಯರಾಮ್ ಮಾತನಾಡಿದರು.
ಈ ವೇಳೆ ನಗರ ಮಹಿಳಾ ಘಟಕ ಉಪಾಧ್ಯಕ್ಷರಾಗಿ ದೀನಾಮಣಿ, ನೀಲಮ್ಮ, ಮೌನಿನಾ ಬಾನು, ಮಂಜುಳಾ ರಾವ್, ಮಹಾ ಪ್ರಧಾನ ಕಾರ್ಯದರ್ಶಿ ಸುವರ್ಣ, ಪ್ರಧಾನ ಕಾರ್ಯದರ್ಶಿ ರೇಖಾ, ಲಕ್ಷಿö್ಮÃದೇವಿ, ಆಶಾಜಾನ್, ಕಾರ್ಯದರ್ಶಿ ಮಂಜುಳಾ, ಸಹಕಾರ್ಯದರ್ಶಿಗಳಾದ ಯಶೋಧ, ಮಮತಾರಾಣಿ, ವಾಣಿ, ಸದಸ್ಯೆ ತ್ರಿವೇಣಿ ಅವರು ಅಧಿಕಾರ ಸ್ವೀಕರಿಸಿದರು.
ನಗರ ಕಾರ್ಯದರ್ಶಿ ಟಿ.ಎಸ್. ಮೋಹನ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಟಿ.ಜಿ. ನರಸಿಂಹರಾಜು, ನಗರ ಮಹಾ ಪ್ರಧಾನ ಕಾರ್ಯದರ್ಶಿ ಟಿ.ಸಿ. ಪ್ರಭಾಕರ್, ಮುಖಂಡರಾದ ಗಂಗಣ್ಣ, ರಾಹೇರಾ ಕುಲ್ಸಂ, ರಾಧಾಗೌಡ, ಲಕ್ಷö್ಮಮ್ಮ ವೀರಣ್ಣಗೌಡ ಮೊದಲಾದವರು ಭಾಗವಹಿಸಿದ್ದರು.


