ತುಮಕೂರು: ದೇಶದಲ್ಲಿ ೧,೫೦೦ಕ್ಕೂ ಹೆಚ್ಚು ಕಾನೂನು ಕಾಲೇಜುಗಳಿದ್ದು, ಪ್ರತಿವರ್ಷ ಸಾವಿರಾರು ಕಾನೂನು ಪದವೀಧರರು ಹೊರಬರುತ್ತಿದ್ದಾರೆ.ಆದರೂ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿರುವುದು ಕಳವಳಕಾರಿ. ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಂಗದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಶೆಟ್ಟಿಹಳ್ಳಿಯ ಸುಫಿಯಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,
ಭಾರತ ಇಂದು ಅಂತರರಾಷ್ಟಿçÃಯ ಮಟ್ಟದಲ್ಲಿ ಕಾನೂನು ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಭಾರತೀಯ ಕಾನೂನು ತಜ್ಞರು ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ವೇಳೆ, ದೇಶದಲ್ಲಿ ಸೈಬರ್ ಅಪರಾಧ ದೊಡ್ಡ ಸವಾಲಾಗಿದ್ದು,ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದರು.
ಸAವಿಧಾನದ ಪೂರ್ವ ಪೀಠಿಕೆಯಲ್ಲಿ ಸಮಾನತೆಗೆ ಮಹತ್ವ ನೀಡಲಾಗಿದ್ದರೂ, ಕಾನೂನು ಮತ್ತು ಸಮಾಜದ ದೃಷ್ಟಿಯಲ್ಲಿ ಅದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬ ಬಗ್ಗೆ ಗಂಭೀರ ವಿಶ್ಲೇಷಣೆ ಅಗತ್ಯವಿದೆ. ಸ್ವಾತಂತ್ರ?ಯದ ಸಮಯದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಕೇವಲ ೧೨ ಶೇಕಡಾ ಇದ್ದರೆ, ಈಗ ಅದು ಸುಮಾರು ಶೇ. ೮೦ಕ್ಕೆ ಏರಿಕೆಯಾಗಿದೆ. ಕಾನೂನು ಪದವಿ ಪಡೆದವರು ಕೇವಲ ವೃತ್ತಿ ದೃಷ್ಟಿಯಿಂದಲ್ಲ,ಕಾನೂನಿನ ರಕ್ಷಣೆ ಮತ್ತು ನ್ಯಾಯ ಸೇವೆಯ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವ ಹಿಸಬೇಕು ಎಂದು ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ಸಂವಿಧಾನದ ವಿಧಿ ೫೧(ಎ) ಹಾಗೂ ವಿಧಿ ೧೨ ರಿಂದ ೩೫ರವರೆಗೆ ನಾಗರಿಕರ ಕರ್ತವ್ಯಗಳು ಹಾಗೂ ಮೂಲಭೂತ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಸರಿಯಾಗಿ ಅರ್ಥಮಾಡಿ ಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳನ್ನು ಪರಿಣಾಮಕಾರಿಯಾಗಿ ಎತ್ತಿಹಿಡಿಯಲು ಸಾಧ್ಯ ಎಂದರು.
ಮಾಜಿ ಸಚಿವ ಹಾಗೂ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ,ನಾನು ಕೂಡು ರಾಜಕಾರಣಿಯಾಗುವ ಮೊದಲು ವಕೀಲರಾಗಿ ೧೯೮೪ರಿಂದ ೯೪ವರೆಗೆ ಕ್ರಿಮಿನಲ್ ಲಾಯರ್ ಆಗಿ ಪ್ರಾಕ್ಟಿಸ್ ಮಾಡುತ್ತಿದೆ.ಕಾನೂನಿನ ಸರಳ ವ್ಯಾಖ್ಯಾನವೆಂದರೆ, ಸಾಮಾಜಿಕ ಜ್ಞಾನ.ಇಂದು ಕಾನೂನು ಪದವಿ ಪಡೆದಿರುವ ನಿಮ್ಮ ಮುಂದೆ ಗುರುತರ ಜವಾಬ್ದಾರಿಗಳಿವೆ. ಅಸಹಾಯಕರು,ದ್ವನಿಯಿಲ್ಲದವರ ಪರ ಕೆಲಸ ಮಾಡಿದರೆ ನಿಮ್ಮ ಪದವಿಗೆ ಗೌರವ ಸಿಗುತ್ತದೆ.ಎಲ್ಲಾ ಕ್ಷೇತ್ರಗಳಲ್ಲಿ ಇದ್ದಂತೆ ಕಾನೂನು ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆ ಇದೆ. ಅದಕ್ಕೆ ತಕ್ಕಂತೆ ತಾವು ಸಹ ಸಿದ್ದರಾಗಬೇಕು.ಕೋರ್ಟ್ ಕಲಾಪದ ವೇಳೆ ಹಿರಿಯ ನ್ಯಾಯವಾದಿಗಳು ವಾದ ಮಂಡಿಸುವ ವೇಳೆ ಅವುಗಳನ್ನು ಶ್ರದ್ಧೆಯಿಂದ ಆಲಿಸಿ, ಅಲ್ಲಿ ಪ್ರಸ್ತಾಪಿಸುವ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೇ, ನೀವು ವಾದ ಮಂಡಿಸುವ ವೇಳೆ ಅನುಕೂಲಕ್ಕೆ ಬರಲಿದೆ.ಪ್ರಾಮಾಣಿಕತೆ ಮತ್ತು ಸತತ ಪರಿಶ್ರಮದಿಂದ ಮಾತ್ರ ವಕೀಲರಾಗಿ ಮೇಲೆ ಬರಲು ಸಾಧ್ಯ ಎಂದರು.
ಇAದು ಕ್ರಿಮಿನಲ್ ಕೇಸುಗಳಲ್ಲಿ ಅಪರಾಧಿಗಳಾಗುತ್ತಿರುವವ ಸಂಖ್ಯೆಯಲ್ಲಿ ಹೆಚ್ಚಿನವರು ಬಡವರೇ ಆಗಿರುತ್ತಾರೆ. ಈ ಲೋಪದೋಷಕ್ಕೆ ಕಾರಣ ಎನು ಎಂಬುದು ನಿಜಕ್ಕೂ ದುಖಃದ ವಿಷಯ.ಎಲ್ಲಾ ಕ್ಷೇತ್ರಗಳಂತೆ ನ್ಯಾಯಾಂಗ ಕ್ಷೇತ್ರವೂ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಮಾತುಗಳು ಇತ್ತೀಚಗೆ ಹೆಚ್ಚಾಗಿವೆ.ಹಾಗಾಗಿ ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಕೀಲರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ನುಡಿದರು.
ವಿಜ್ಞಾನಿ ಡಾ.ಪ್ರಶಾಂತ ಕಾಳಪ್ಪ ಪ್ರಧಾನ ಭಾಷಣ ಮಾಡಿ,ವಿಜ್ಞಾನಕ್ಕೆ ಬಡವರು, ಶ್ರೀಮಂತರು ಎಂಬ ಭೇಧ ಭಾವವಿಲ್ಲ. ಆದರೆ ಸಮಾಜ ವಿಜ್ಞಾನದ ತಳಹದಿಯೇ ಬಡತನ, ಸಿರಿತನ,ವಿಜ್ಞಾನ ಮತ್ತು ಕಾನೂನು ಎರಡು ಕೂಡ ಸತ್ಯವನ್ನೇ ಹುಡುಕುವ ಕೆಲಸ ಮಾಡುತ್ತೇವೆ.ಪದವಿಯಂಬುದು ಜೀವನದ ಆರಂಭ.ಗಾAಧಿ ಮತ್ತು ಅಂಬೇಡ್ಕರ್ ಕೋರ್ಟುಗಳಿಗಿಂತ, ಜನಸಾಮಾನ್ಯರ ನಡುವೆ ಇದ್ದೇ ಪ್ರಖ್ಯಾತರಾದರು. ಕಾನೂನು ಪದವಿಧರರು ಕಾನೂನಿನ ರಕ್ಷಕರಾಗಿ, ನ್ಯಾಯಾಂಗವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡಬೇಕು.ಸೋಲೆ ಗೆಲುವಿನ ಮೆಟ್ಟಿಲು ಎಂಬುದು ನಿಮಗೆ ಪಾಠವಾ ಗಬೇಕು.ತಂತ್ರಜ್ಞಾನವನ್ನು ತಮ್ಮ ವೃತ್ತಿ ನೈಪುಣ್ಯತೆ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್.ಎಂ.ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿ ಅಹಮದ್ ಮಾತನಾಡಿ, ೧೯೮೦ ರಿಂದಲೂ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆ ಬಡವರು, ಶೋಷಿತರಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ೧೨ ವರ್ಷಗಳಿಂದ ಸೂಫಿಯಾ ಲಾ ಕಾಲೇಜು ನಡೆಯುತ್ತಿದ್ದು,ಕಾಲೇಜನ್ನು ಅನುದಾನಕ್ಕೆ ಒಳಪಡಿಸಬೇಕು,ಉಪನ್ಯಾಸಕರ ನೇಮಕಕ್ಕೆ ಅವಕಾಶ ಕಲ್ಪಿಸಬೇಕು. ಹೊಸದಾಗಿ ತುಮಕೂರಿನಲ್ಲಿ ನಿರ್ಮಾಣವಾಗುವ ನ್ಯಾಯಾಲಯ ಸಮುಚ್ಚಯದಲ್ಲಿ ಜುಡಿಷಿಯಲ್ ಹೆರಿಟೇಜ್ ಮ್ಯೂಸಿಯಂ ಸ್ಥಾಪಿಸುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿದರು.
ಸಮಾರಂಭದಲ್ಲಿ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಅಫ್ತಾಬ್ ಅಹಮದ್,ಸಿಇಓ ಮಹಮದ್ ಜುನೈದ್,ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಸ್,ಕಾನೂನು ವಿವಿಯ ಸಿಂಡಿಕೇಟ್ ಸದಸ್ಯ ರಾಜಣ್ಣ, ಹೆಚ್.ಎಂ.ಎಸ್. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅದೀಬ್ ಅಹಮದ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಗೌಡ ಮುಂತಾದವರು ಇದ್ದರು.

(Visited 1 times, 1 visits today)