
ಕೊರಟಗೆರೆ: ತೀತಾ ಜಲಾಶಯದ ಬೊಟೀಂಗ್ ಟೆಂಡರ್ ಸ್ಥಳೀಯರಿಗೆ ನೀಡದೇ ಹೊರಜಿಲ್ಲೆಯ ಖಾಸಗಿ ವ್ಯಕ್ತಿಗೆ ನೀಡಿ ಕಾಮಗಾರಿಯನ್ನ ಏರಿಯ ಮೇಲೆ ಪ್ರಾರಭಿಸಿದ್ದಾರೆ ಎಂದು ಆರೋಪಿಸಿ ಗೊರವನಹಳ್ಳಿ, ತೀತಾ ಮತ್ತು ಕೆಂಗನಪಾಳ್ಯದ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿ ನಿಲ್ಲಿಸುವಂತೆ ಭಾನುವಾರ ಆಗ್ರಹಿಸಿದ್ದಾರೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಗೊರವನಹಳ್ಳಿ ಸಮೀಪದ ತೀತಾ ಜಲಾಶಯದಲ್ಲಿ ಹೇಮಾವತಿ ನಾಲಾ ವಲಯ, ಪ್ರವಾಸೋಧ್ಯಮ ಮತ್ತು ಜಿಲ್ಲಾಧಿಕಾರಿ ಅನುಮತಿ ಪಡೆದು ಖಾಸಗಿ ಕಂಪನಿಯೊAದು ಆರಂಭ ಮಾಡಿರುವ ಬೋಟಿಂಗ್ ಕಾಮಗಾರಿಗೆ ಸ್ಥಳೀಯರು ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ರೈತರ ಮನವಿ: ತೀತಾ ಜಲಾಶಯ ನಿರ್ಮಾಣ ಆದಾಗ ಅಕ್ಕಪಕ್ಕದ ನೂರಾರು ರೈತರು ಜಮೀನು ಕಳೆದುಕೊಂಡಿದ್ದಾರೆ. ಬೋಟಿಂಗ್ ಟೆಂಡರ್ ಪ್ರಕ್ರಿಯೆ ಮಾಹಿತಿ ಸ್ಥಳೀಯರಿಗೆ ನೀಡುವಲ್ಲಿ ಪ್ರವಾಸೋಧ್ಯಮ ಇಲಾಖೆ ವಿಫಲವಾಗಿದೆ. ಸ್ಥಳೀಯ ನಿರುದ್ಯೋಗಿ ಯುವಕರಿಗೆ ಬೋಟಿಂಗ್ ಗುತ್ತಿಗೆ ನೀಡಿದರೇ ಉದ್ಯೋಗ ಸೃಷ್ಟಿ ಆಗಲಿದೆ. ಜಿಲ್ಲಾಧಿಕಾರಿ ನಮ್ಮ ಮನವಿ ಆಲಿಸಬೇಕಿದೆ ಎಂದು ಸ್ಥಳೀಯ ಮನವಿಯಾಗಿದೆ.
ಬೋಟಿಂಗ್ ಗುತ್ತಿಗೆದಾರನ ಅಳಲು: ತೀತಾ ಜಲಾಶಯದಲ್ಲಿ ಜಲಕ್ರೀಡೆ ಮತ್ತು ಜಲಸಾಹಸ ಕ್ರೀಡೆ ಆಯೋಜನೆಗೆ ಪ್ರವಾಸೋದ್ಯಮ ಇಲಾಖೆ ಟೆಂಡರ್ ಕರೆದಾಗ ಗುತ್ತಿಗೆ ಪಡೆದಿದ್ದೇನೆ. ಟೆಂಡರ್ ಹಣವನ್ನು ಸರಕಾರಕ್ಕೆ ಪಾವತಿಸಿ ಕೋಟ್ಯಾಂತರ ರೂ ಮೌಲ್ಯದ ಬೋಟಿಂಗ್ ಖರೀದಿಸಿ ಕಾಮಗಾರಿ ಆರಂಭಿಸಿದ್ದೇನೆ. ಬೋಟಿಂಗ್ ಡ್ರೆöÊವರ್ ಅನುಭವ ಮತ್ತು ಇತರೇ ಯಾವುದೇ ಕೆಲಸದಲ್ಲಿ ಆಸಕ್ತಿ ಇದ್ದರೇ ಖಂಡಿತ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುತ್ತೇನೆ ಎಂಬುದು ಗುತ್ತಿಗೆದಾರನ ಅಳಲಾಗಿದೆ.
ಹೇಮಾವತಿ ಅಧಿಕಾರಿಗಳು ಬೇಟಿ: ತೀತಾ ಜಲಾಶಯಕ್ಕೆ ತುಮಕೂರು ಹೇಮಾವತಿ ನಾಲಾ ವಲಯ ಎಇಇ ಪದ್ಮಶ್ರೀ ಮತ್ತು ಎಇ ನವೀನಕುಮಾರ್ ಶನಿವಾರ ಬೇಟಿನೀಡಿ ಬೋಟಿಂಗ್ ಕಾಮಗಾರಿ ಪರಿಶೀಲನೆ ನಡೆಸಿದರು. ಗುತ್ತಿಗೆದಾರ ಹಾಗೂ ಸ್ಥಳೀಯರ ಬಳಿ ಚರ್ಚಿಸಿದ ನಂತರ ಪ್ರವಾಸೋಧ್ಯಮ ಮತ್ತು ಜಿಲ್ಲಾಧಿಕಾರಿ ಕಮಿಟಿಗೆ ಕಾಮಗಾರಿಯ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿದರು.


