
ಕೊರಟಗೆರೆ: ೨೫೦೦ಕೋಟಿ ಅನುಧಾನದ ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿಗೆ ೨೦ವರ್ಷ ಆದ್ಮೇಲೆ ಮತ್ತೇ ಚಾಲನೆ ಸಿಕ್ಕಿದೆ. ೨೦೨೭ರ ಮುಕ್ತಾಯಕ್ಕೆ ಕೊರಟಗೆರೆ-ಮಧುಗಿರಿ ಮೂಲಕ ಪಾವಗಡಕ್ಕೆ ರೈಲ್ವೆ ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ರೈಲ್ವೆ ಇಲಾಖೆಯಿಂದ ಏರ್ಪಡಿಸಲಾಗಿದ್ದ ರೈಲ್ವೆ ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಚಿಕ್ಕಬಳ್ಳಾಪುರದಿಂದ ಬೈರೇನಹಳ್ಳಿ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಮುಕ್ತಾಯವಾಗಿ ಸಂಚಾರಕ್ಕೆ ಸಿದ್ದವಾಗಿದೆ. ಶಿರಾ-ಬಡವನಹಳ್ಳಿ-ಮಧುಗಿರಿ-ಬೈರೇನಹಳ್ಳಿಯ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಗುದ್ದಲಿ ಪೂಜೆಗೆ ಸಿದ್ದತೆ ನಡೆದಿದೆ. ಕೊರಟಗೆರೆ, ಮಧುಗಿರಿ, ಶಿರಾ ಮತ್ತು ಪಾವಗಡ ಕ್ಷೇತ್ರಗಳು ತುಮಕೂರಿನ ಅಂಗವಾಗಿ ಅಭಿವೃದ್ದಿ ಆಗಲಿವೆ ಎಂದರು.
ದಾಬಸ್‌ಪೇಟೆ, ಕೊರಟಗೆರೆ, ಮಧುಗಿರಿ, ಪಾವಗಡ ಮಾರ್ಗ ಕಲ್ಯಾಣ ದುರ್ಗಕ್ಕೆ ಕೇಂದ್ರ ಸರಕಾರದಿಂದ ರಾಷ್ಟಿçÃಯ ಹೆದ್ದಾರಿಯ ರೂಪುರೇಷು ಸಿದ್ದವಾಗಿದೆ. ಇದು ನಿಮ್ಮ ಮತದ ಶಕ್ತಿಯಾಗಿದ್ದು ಸೋವಣ್ಣನ ಕೂಡುಗೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಒಂದಾಗಿ ಕೆಲಸ ಮಾಡಿದರೇ ಮಾತ್ರ ಅಭಿವೃದ್ದಿ ತಾನಾಗಿಯೇ ಆಗಲಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷನಿಗೆ ತರಾಟೆ: ರೈಲ್ವೆ ನಿಲ್ದಾಣದ ೨ನೇ ಬಾರಿಯ ಗುದ್ದಲಿ ಪೂಜೆ ಕಾರ್ಯಕ್ರಮವು ೧೨.೧೦ಕ್ಕೆ ಆರಂಭವಾಗಿ ಜನರಿಲ್ಲದೇ ೧೨.೪೫ಕ್ಕೆ ಮುಕ್ತಾಯವಾಯಿತು. ವೇದಿಕೆಯ ಮುಂಭಾಗ ಜನರಿಲ್ಲದ ಗಮನಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್‌ಗೆ ನನ್ನ ಕಾರಿನಲ್ಲಿ ಸಂಚಾರ ಮಾಡೋದನ್ನ ಬಿಟ್ಟು ಕಾರ್ಯಕರ್ತರ ಸೇರಿಸುವ ಕೆಲಸ ಮಾಡಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಆಹ್ವಾನ ಇಲ್ಲದ ರೈಲ್ವೆ ಕಾರ್ಯಕ್ರಮ: ಬೈಪಾಸ್ ರಸ್ತೆಯ ಸಮೀಪ ಉದ್ಘಾಟನೆ ಆದ ರೈಲ್ವೆ ನಿಲ್ದಾಣ ಕಾಮಗಾರಿಯು ಆಹ್ವಾನ ಪತ್ರಿಕೆಯು ಇಲ್ಲ. ಸರಕಾರಿ ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ಪತ್ರಕರ್ತರಿಗೆ ಆಹ್ವಾನ ನೀಡಿಲ್ಲ. ರಾಜ್ಯದ ಡಿಸಿಎಂ ಉಪಸ್ಥಿತಿ ಇಲ್ಲದೆ ಗುದ್ದಲಿ ಪೂಜೆ ನೇರವೇರಿದ ಕೊರಟಗೆರೆಯ ಮೊದಲ ಕಾರ್ಯಕ್ರಮ ಇದಾಗಿದೆ.ಕೊರಟಗೆರೆಯ ತಹಶೀಲ್ದಾರ್ ಮತ್ತು ತಾಪಂ ಇಓ ಅವರಿಗೂ ಸಹ ವೇದಿಕೆಯ ಹೊರಗಡೆ ನಿಂತು ವಿಕ್ಷಣೆ ಮಾಡುವ ಸ್ಥಿತಿಯಿತ್ತು.
ರೈಲ್ವೆ ಅಧಿಕಾರಿಗಳ ಉಡಾಫೆ ಉತ್ತರ: ಕಾರ್ಯಕ್ರಮ ಆಯೋಜನೆ ಮಾಡಿದ್ದ ರೈಲ್ವೆ ಅಧಿಕಾರಿಗಳಿಗೆ ಪರ್ತಕರ್ತರು ಪ್ರಶ್ನಿಸಿದರೇ ನಾವು ಯಾರಿಗೂ ಕರಿದಿಲ್ಲ. ಕೇಂದ್ರ ಸಚಿವರು ಅನಧಿಕೃತ ಕಾರ್ಯಕ್ರಮ ಮಾಡಿಕೋಡಿ ಎಂದ ಹಿನ್ನಲೇ ನಾವು ಆಯೋಜನೆ ಮಾಡಿದ್ದೇವೆ. ಕಾರ್ಯಕ್ರಮಕ್ಕೆ ರೈಲ್ವೆ ಅಧಿಕಾರಿಗಳೇ ಸಾಕು ಬೇರಯವರ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡಿದ್ದಾರೆ.


