ತುಮಕೂರು: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ೪೫ ದಿನಗಳಾದರೂ ಶಾಲೆಯಲ್ಲಿ ಕ್ರೀಡಾ ಚಟುವಟಿಕೆ ಆರಂಭವಾಗಿಲ್ಲ, ೧೪ ವಯೋಮಾನ ಹಾಗೂ ೧೭ ವಯೋಮಾನದ ಕ್ರೀಡಾಕೂಟ ನಡೆಸಲು ಸಾರ್ವಜನಿಕ ಇಲಾಖೆ ಮೀನಾಮೇಷ ಎಣಿಸುತ್ತಿರುವುದು ಮಕ್ಕಳ ಬಾಲ್ಯವನ್ನೇ ಮಸುಕಾಗಿಸಿದೆ.
ಜೂನ್ ತಿಂಗಳಲ್ಲಿಯೇ ಹೊರಬೀಳಬೇಕಿರುವ ಸುತ್ತೋಮೆ ಜುಲೈ ಅರ್ಧ ಮುಗಿದರೂ ಪ್ರಕಟವಾಗಿಲ್ಲ, ರಾಜ್ಯಾದ್ಯಂತ ೪೮೫೨೭ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆ ಇನ್ನೂ ಆರಂಭವಾಗದ ಪರಿಣಾಮ ವಿದ್ಯಾರ್ಥಿಗಳಲ್ಲಿದ್ದ ಕ್ರೀಡಾ ಆಸಕ್ತಿ ಹಾಗೂ ಉತ್ಸಾಹ ಕುಗ್ಗುವಂತಾಗಿದೆ. ಕ್ರೀಡಾಕೂಟ ಆಯೋಜಿಸಲು ಬೇಗಾದ ಪೂರ್ವಸಿದ್ಧತೆಯೂ ಇಲ್ಲದಂತಾಗಿದೆ.
ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಉಸ್ತುವಾರಿ ಹೊಣೆ ಹೊತ್ತಿರುವ ಅಧಿಕಾರಿಗಳ ಜತೆ ಕಳೆದ ಜೂ.೧೧ರಂದು ದೈಹಿಕ ಶಿಕ್ಷಣ ವಿಭಾಗದ ಜಂಟಿ
ನಿರ್ದೇಶಕ ನರಸಿಂಹಯ್ಯ ಅವರು ಸಭೆ ನಡೆಸಿದ್ದಾರೆ ಆದರೂ, ಒಂದು ತಿಂಗಳಾದರೂ ಮಾರ್ಗಸೂಚಿ ಹೊರಡಿಸದಿರುವುದು ಮಕ್ಕಳ ನವಿರಾದ ಬಾಲ್ಯ ಕಿತ್ತುಕೊಳ್ಳುವಂತಾಗಿದೆ.
ಪ್ರತಿ ಶೈಕ್ಷಣಿಕ ವರ್ಷದ ಆರಂಭದಿAದಲೇ ಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡುವುದು ವಾಡಿಕೆ ಆದರೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ತಾಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲು ಶಾಲಾಮಟ್ಟದ ಕ್ರೀಡಾಕೂಟ ಪ್ರಮುಖ ವೇದಿಕೆಯಾಗಿದೆ ಆದರೆ, ಪ್ರಸ್ತ ಶೈಕ್ಷಣಿಕ ವರ್ಷದಲ್ಲಿ ಕ್ರೀಡಾಕೂಟದ ವೇಳಾಪಟ್ಟಿ ಮಾರ್ಗಸೂಚಿ ಹಾಗೂ ಅನುದಾನದ ಕುರಿತು ಶಿಕ್ಷಣ ಇಲಾಖೆ ಯಾವುದೇ ಮಾಹಿತಿ ನೀಡದಿರುವುದು ಅಚ್ಚರಿ ಮೂಡಿಸಿದೆ.
ಎಲ್ಲವೂ ಸರಿಯಾದ ಸಮಯಕ್ಕೆ ನಡೆದಿದ್ದರೆ ಜುಲೈ ಅಂತ್ಯದೊಳಗೆ “ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ಮುಗಿದು, ವಲಯ ಮಟ್ಟದ ಕ್ರೀಡಾಕೂಟಗಳು ನಡೆಯುತ್ತಿದ್ದವು. ಆದರೆ, ಈ ಬಾರಿ ಇನ್ನೂ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳೇ ಆರಂಭವಾಗುವ ಲಕ್ಷಣ ಕಾಣಿಸಿಲ್ಲ. ಸಾಮಾನ್ಯವಾಗಿ ಬೆಳಗಿನ ಅವಧಿ ಹಾಗೂ ಸಂe.ೆ ವೇಳೆಯಲ್ಲಿ ಚಟುವಟಿಕೆಗಳಿಂದ ಕೂಡಿರುತ್ತಿದ್ದ ಶಾಲಾ ಮೈದಾನಗಳು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಲ್ಲದೆ ಕಳಹೀನವಾಗಿವೆ. ಕ್ರೀಡಾಕೂಟದ ಬಗ್ಗೆ ಯಾವುದೇ ಸ್ಪಷ್ಟತೆ ಸಿಗದೆ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಮೌನಿಗಳಾಗಿದ್ದಾರೆ.
ವೈಯಕ್ತಿಕ ಓಟಗಳು, ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್ ಬಾಲ್ ಸೇರಿದಂತೆ ನಾನಾ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಅವಕಾಶವಿದ್ದು ಒಬ್ಬ ವಿದ್ಯಾರ್ಥಿ ಮೂರು ಕ್ರೀಡೆಯಲ್ಲಿ ರಾಜ್ಯ, ರಾಷ್ಟಿçÃಯ ಮಟ್ಟದವರೆಗೂ ಸ್ಫರ್ಧಿಸಲು ಅವಕಾಶವಿದೆ ಆದರೆ, ಶೈಕ್ಷಣಿಕ ಬದುಕಿನಲ್ಲಿ ಮಹತ್ವ ಪಡೆದುಕೊಂಡಿರುವ ಕ್ರೀಡಾಕೂಟಕ್ಕೆ ಸಂಬAಧಿಸಿದ ಯಾವುದೇ ಸೂಚನೆ ಇಲ್ಲದ ಕಾರಣ ಬಹುತೇಕ ಶಾಲೆಗಳಲ್ಲಿ ನಿತ್ಯ ಅಭ್ಯಾಸ ಕೂಡ ನಡೆಸದೇ ಮಕ್ಕಳಿಗೆ ಪಠ್ಯಕ್ಕೆ ಸೀಮಿತಗೊಳಿಸಲಾಗಿದೆ.
ಕ್ರೀಡಾ ಸಾಮಗ್ರಿಗಳ ಖರೀದಿ, ವಿದ್ಯಾರ್ಥಿಗಳ ಪ್ರಯಾಣ ವೆಚ್ಚ, ಸ್ಪರ್ಧೆಗಳ ಆಯೋಜನೆ ಸೇರಿದಂತೆ ಹಲವು ವಿಚಾರಗಳಿಗೆ ಶಿಕ್ಷಣಿ ಇಲಾಖೆಯ ಮಾರ್ಗಸೂಚಿ ಅಗತ್ಯವಿದೆ. ಸುತ್ತೋಲೆ ಬಿಡುಗಡೆಯಾದ ನಂತರವೇ ಶಾಲೆಗಳು ಕ್ರೀಡಾಕೂಟದ ದಿನಾಂಕ ನಿಗದಿ ಮಾಡಿ ಪೂರ್ವಸಿದ್ದತೆ ಆರಂಭಿಸಲು ಸಾಧ್ಯವಾಗಲಿದೆ.
ಶಿಕ್ಷಣ ಇಲಾಖೆ ಉದಾಸೀನದಿಂದ ಗ್ರಾಮೀಣ ಮಕ್ಕಳಿಗೆ ಅನ್ಯಾಯ: ಕ್ರೀಡಾಕೂಟಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದು ದೃಢವಾಗಿದೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು, ನಾಯಕತ್ವಗುಣ, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವ ಬೆಳೆಯುತ್ತದೆ. ಹೀಗಾಗಿ, ಪಠ್ಯ ಚಟುವಟಿಕೆಗಳಿಗೆ ನೀಡಿದಷ್ಟೇ ಮಹತ್ವವನ್ನು ಕ್ರೀಡಾ ಚಟುವಟಿಕೆಗೂ ನೀಡುವುದು ಅಗತ್ಯವಿದ್ದರೂ ಸರ್ಕಾರ ಕಳೆದೆರಡು ವರ್ಷದಿಂದ ಕ್ರೀಡಾಕೂಟದ ಬಗ್ಗೆ ಉದಾಸೀತ ತೋರುತ್ತಿರುವುದು ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ.
ಇಂದಿಗೂ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ಶಾಲಾ ಕ್ರೀಡಾಕೂಟಗಳ ಮೂಲಕವೇ ತಮ್ಮ ಪ್ರತಿಭೆಯನ್ನು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಪ್ರದರ್ಶಿಸುವ ಅವಕಾಶ ಪಡೆದಿದ್ದಾರೆ. ತರಬೇತಿ ಹಾಗೂ ಆಯ್ಕೆ ಪ್ರಕ್ರಿಯೆ ವಿಳಂಬವಾದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ತಪುö್ಪವ ಆತಂಕವೂ ಎದುರಾಗಿದೆ.

(Visited 1 times, 1 visits today)