ತುರುವೇಕೆರೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘ ಹಸಿರು ಸೇನೆ, ಕನ್ನಡಪರ ಸಂಘಟನೆ ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪಧಾದಿಕಾರಿಗಳು ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ತಾಲೂಕು ಅದ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ರಾಜ್ಯ ಮುಖ್ಯಮಂತ್ರಿಗಳು ರಾಜ್ಯದ ರೈತರ ಹಿತ ಕಾಯುವಲ್ಲಿ ವಿಪಲರಾಗಿದ್ದಾರೆ.ರಾಜ್ಯದಲ್ಲಿ ಮಳೆ ಇಲ್ಲದೆ ಡ್ಯಾಮ್ ಗಳು ತುಂಬಿಲ್ಲ ಬರಗಾಲ ತಾಂಡವವಾಡುತ್ತಿದೆ. ರಾಜ್ಯದ ರೈತರ ಪರವಾಗಿ ತೀರ್ಮಾನ ತೆಗೆದುಕೊಳ್ಳದೆ ತೆಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದಾರೆ. ಇದನ್ನು ರಾಜ್ಯ ರೈತ ಸಂಘ ಖಂಡಿಸುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು ಮುಖ್ಯಮಂತ್ರಿ ಗಳು ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಬೆಳೆ ಪರಿಹಾರವಾಗಿ ರೈತರಿಗೆ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿ ಕಾವೇರಿ ನೀರನ್ನು ತೆಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಿ ಹೇಮಾವತಿ ನೀರನ್ನು ತಾಲೂಕಿಗೆ ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಸಂಚಾಲಕ ಸತೀಶ್ ಮಾತನಾಡಿ ಬಿಜೆಪಿ ಸರ್ಕಾರ ವಿರುದ್ಧ ವಾಗಿ ಕಾಂಗ್ರೆಸ್ ಪಕ್ಣಕ್ಕೆ ರಾಜ್ಯದ ಜನ ಅಧಿಕಾರ ನೀಡಿದ್ದಾರೆ ಆದ ರೆ ಗ್ಯಾರಂಟಿ ಗಳನ್ನು ಯಾರು ಕೇಳಿಲ್ಲ. ಅದರೆ ರಾಜ್ಯದಲ್ಲಿ ಬರಗಾಲ ಇದೆ ಡ್ಯಾಮ್ ಗಳಲ್ಲಿ ಇರುವ ನೀರನ್ನು ರಾತ್ರೋ ರಾತ್ರಿ ತೆಮಿಳುನಾಡಿಗೆ ಹರಿಸಿದರೆ ರಾಜ್ಯದ ರೈತರು ಜನರ ಪರಿಸ್ಥಿತಿ ಕಷ್ಟವಾಗಲಿದೆ ಅದ್ದರಿಂದ ಕೂಡಲೇ ನೀರು ನಿಲ್ಲಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆ ಮುನ್ನಾ ತಾಲೂಕು ಕಛೇರಿ ಮುಂಭಾಗದಲ್ಲಿನ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ನಂತರ ತಾಲೂಕು ಕಛೇರಿ ಗೆ ತೆರಳಿ ಶೀರಸ್ಥೆದಾರ ಸುನಿಲ್ ಕುಮಾರ್ ಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಾರುತಿ, ವೈರಮುಡಿ, ಕೃಷ್ಣಮೂರ್ತಿ, ಲೋಕೇಶ್, ಗವಿರಂಗ, ಉಪೇಂದ್ರ, ಚಂದ್ರಣ್ಣ, ವಿಜಯನರಸಿಂಹ ಸೇರಿದಂತೆ ಹಲವು ಮುಖಂಡರು ಇದ್ದರು.
(Visited 1 times, 1 visits today)



