ತುಮಕೂರು: ರಾಜಕಾರಣದಷ್ಟೇ ಇಂದು ದೇಶದ ಶಿಕ್ಷಣ ವ್ಯವಸ್ಥೆಯೂ ಕಲುಷಿತಗೊಳ್ಳುತ್ತಿದ್ದು, ಗುಣಾತ್ಮಕ ಶಿಕ್ಷಣ ನೀಡುವುದು ಪ್ರಸ್ತುತ ದಿನಗಳಲ್ಲಿ ದೊಡ್ಡ ಸವಾಲಾಗಿದೆ ಎಂದು ಮಾಜಿ ವಿಧಾನ ಪರಿಷತ್ತು ಸದಸ್ಯ ಡಾ. ವೈ. ಎ. ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
ನಗರದ ಸೆಂಟ್ರಲ್ ಲೈಬ್ರರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಗೆಳೆಯರ ಗೆಳೆಯ ಕೆಸಿಬಿ’ ಕೃತಿ ಲೋಕಾರ್ಪಣೆ ಹಾಗೂ ಡಾ. ಕೆ.ಸಿ. ಬಸವರಾಜ್ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಸಿಬಿ ಅಪರೂಪದ ವ್ಯಕ್ತಿತ್ವ: ಡಾ. ಕೆ.ಸಿ. ಬಸವರಾಜ್ (ಕೆಸಿಬಿ) ಅವರ ಸಾಧನೆಯನ್ನು ಸ್ಮರಿಸಿದ ನಾರಾಯಣಸ್ವಾಮಿ, “ಶೋಷಿತ ಹಾಗೂ ದಮನಿತ ಸಮುದಾಯದಿಂದ ಬಂದು, ಎಲ್ಲಾ ಸವಾಲುಗಳನ್ನು ಎದುರಿಸಿ ಉನ್ನತ ಹುದ್ದೆಗೆ ಏರಿದ ಕೆಸಿಬಿ ಅವರ ಸಾಧನೆ ಸಾಮಾನ್ಯವಾದದ್ದಲ್ಲ. ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ದಂತೆ ದೀನದುರ್ಬಲರ ಪಾಲಿಗೆ ಬೆಲ್ಲ-ಸಕ್ಕರೆಯಾಗಿ, ಸಮಾಜಕ್ಕೆ ಬೆಳಕಾಗಿದ್ದಾರೆ. ಎಂದು ಬಣ್ಣಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಾತ್ರಕ್ಕೆ ಮನೆಯಲ್ಲಿ ಕೂರದೆ, ಕೆಸಿಬಿ ಅವರು ತಮ್ಮಲ್ಲರುವ ಜ್ಞಾನ, ವಿದ್ವತ್ತು ಹಾಗೂ ಅನುಭವವನ್ನು ಸಮಾಜದ ಏಳಿಗೆಗಾಗಿ ಹಾಗೂ ಯುವಜನರ ಹಿತಕ್ಕಾಗಿ ಧಾರೆ ಎರೆಯಬೇಕು. ಅಧಿಕಾರದ ಹಿಂದೆ ಹೋಗದೆ ಸಮಾಜಮುಖಿ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿ, ಶುಭ ಹಾರೈಸಿದರು. ನಾವೆಲ್ಲ ಅದೃಷ್ಟವಂತರು: ನಮಗೆ ದೇವರು ಉತ್ತಮ ಜೀವನ ನೀಡಿದ್ದಾನೆ, ನಾವೆಲ್ಲರೂ ಅದೃಷ್ಟವಂತರು. ಆದರೆ ನಮ್ಮ ಸಮಾಜದಲ್ಲಿ ಶೇಕಡಾ ೭೦ ರಿಂದ ೮೦ ರಷ್ಟು ಜನರು ಇಂದಿಗೂ ಕಷ್ಟದಲ್ಲಿದ್ದಾರೆ, ನಮಗಿಂತ ಕೆಳಮಟ್ಟದ ಸ್ಥಿತಿಯಲ್ಲಿದ್ದಾರೆ.
ಸಮಾಜ ನಿರ್ಮಾಣದ ಹೊಣೆ: ನಮಗಿಂತ ವಂಚ ನಿರಾಗಿರುವ ಹಾಗೂ ಕಷ್ಟದಲ್ಲಿರುವ ಶೋಷಿತ ವರ್ಗದ ಬಗ್ಗೆ ನಾವೆಲ್ಲರೂ ಯೋಚಿಸಬೇಕು. ಅವರ ಏಳಿಗೆಗಾಗಿ ಶ್ರಮಿಸಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ಸಮಾಜವನ್ನು ಜೊತೆಯಾಗಿ ಕಟ್ಟುವುದು ಮತ್ತು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
“ಶಿಕ್ಷಣ ಕ್ಷೇತ್ರ ರಕ್ಷಿಸಲು ಶಿಕ್ಷಕರ ಆತ್ಮಾವಲೋಕನ ಅಗತ್ಯ”: ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಮಾತನಾಡಿ ಶಿಕ್ಷಣ ಕ್ಷೇತ್ರವು ದಿನೇ ದಿನೇ ವ್ಯಾಪಾರೀಕರಣಗೊಳ್ಳುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಶಿಕ್ಷಕರು ಸೇರಿದಂತೆ ಇಡೀ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಶಿಕ್ಷಣ ಮತ್ತು ಶಿಕ್ಷಕರ ಹೊಣೆಗಾರಿಕೆ ಕುರಿತು ಗೌರವಾನ್ವಿತ ವಿಚಾರಗಳನ್ನು ಹಂಚಿಕೊAಡರು.
ನಿತ್ಯ ವಿದ್ಯಾರ್ಥಿಯಾಗಿದ್ದಾಗಷ್ಟೇ ಬೋಧನೆ ಯಶಸ್ವಿ: ಒಬ್ಬ ಶಿಕ್ಷಕ ನಿರಂತರ ಅಧ್ಯಯನಶೀಲನಾಗಿ, ನಿತ್ಯ ವಿದ್ಯಾರ್ಥಿಯಂತೆ ಕಲಿಯುತ್ತಿದ್ದಾಗ ಮಾತ್ರ ಆತನಿಗೆ ಬೋಧಿಸುವ ನಿಜವಾದ ಅರ್ಹತೆ ದೊರೆಯುತ್ತದೆ ಎಂದು ಪ್ರೊ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕೋಪದ ಹಿಂದಿದ್ದ ಅಂತಃಕರಣ: ಕೆ.ಸಿ. ಬಸವರಾಜು ಅವರ ವ್ಯಕ್ತಿತ್ವವನ್ನು ಸ್ಮರಿಸಿದ ಅವರು, “ಬಸವರಾಜು ಅವರು ಹೊರನೋಟಕ್ಕೆ ಶೀಘ್ರಕೋಪಿಯಂತೆ ಕಂಡರೂ, ಅವರ ಕೋಪದಲ್ಲಿ ಯಾವುದೇ ದ್ವೇಷವಿರಲಿಲ್ಲ. ಅವರ ಬಳಿ ತಾಯಿಯಂತಹ ಅಂತಃಕರಣ ಹಾಗೂ ನೈತಿಕ ನಡೆ-ನುಡಿ ಇದ್ದುದರಿಂದ ಅವರ ಕೋಪ ಕ್ಷಣಿಕವಾಗಿರುತ್ತಿತ್ತು” ಎಂದರು.
ನಿವೃತ್ತಿ ಎಂದರೆ ವಿಶ್ರಾಂತಿಯಲ್ಲ: ನಿವೃತ್ತಿಯಾದ ನಂತರ ಸಮಾಜಮುಖಿ ಚಟುವಟಿಕೆಗಳಿಂದ ದೂರವಾಗಿ ಮನೆಗಷ್ಟೇ ಸೀಮಿತವಾಗಬಾರದು. ಗೋರೂರು ಚನ್ನಬಸಪ್ಪ ಅವರಂತಹ ಹಿರಿಯರಂತೆ ಸದಾ ಕ್ರಿಯಾಶೀಲರಾಗಿ ಸಮಾಜದೊಂದಿಗೆ ತೊಡಗಿಸಿಕೊಂಡಾಗ ಮಾತ್ರ ನಿರಂತರ ಯೌವನ ಮತ್ತು ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಮಿಡಿಗೇಶಿ ಡಿಗ್ರಿ ಕಾಲೇಜು ಪ್ರಾಂಶುಪಾಲರು ಆದ ಪ್ರೊ. ಕೆ. ಸಿ. ಬಸವರಾಜು ವರು ಮಾತನಾಡಿ ಅಭಿನಂದನಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕ್ರಮ ಆಯೋಜನೆಗೆ ಶ್ರಮಿಸಿದ ತಮ್ಮ ಗೆಳೆಯರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಶಿವನಂಜಯ್ಯ ಅವರ ನೇತೃತ್ವದಲ್ಲಿ ಶ್ರದ್ಧೆಯಿಂದ ಮೂಡಿಬಂದ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಗಿದ್ದು ಈ ಗ್ರಂಥದಲ್ಲಿ ನನ್ನ ಕುರಿತು ೭೦ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿರುವುದು ನನಗೆ ಸೊಜಿಗವೆನಿಸುತ್ತದೆ ಸ್ನೇಹಿತರು ಹಾಗೂ ಶಿಕ್ಷಕರ ಪ್ರೀತಿಗೆ ಕೃತಜ್ಞ ನಾಗಿದ್ದು ಹಿತೈಷಿಗಳ ಆಶೀರ್ವಾದ ಮತ್ತು ಪ್ರೀತಿಗೆ ನಾನು ಸದಾ ಆಭಾರಿಯಾಗಿರುವುದಾಗಿ ತಿಳಿಸಿದರು.
ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ನೃಪತುಂಗ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಟಿ.ಎಂ. ಮಂಜುನಾಥ್ ಅವರು, ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಡಾ. ಕೆ. ರಾಮಕೃಷ್ಣರೆಡ್ಡಿ ಮಾತನಾಡಿದರು.
ಹೆಚ್.ಜಿ. ನಾರಾಯಣ್, ವೈ. ರಮೇಶ್, ಶ್ರೀನಾಥ್‌ರಾಜ್, ಜಿ. ತಿಪ್ಪೇಸ್ವಾಮಿ,ಡಾ. ಎಂ.ಜೆ. ಶಿವಣ್ಣ ಮಲ್ಲಿಕಾರ್ಜುನಯ್ಯ, . ಟಿ. ಗಂಗಾಧರಯ್ಯ, ಎಂ.ಜಿ .ರಾಮಣ್ಣ, ವಸಂತ ಟಿ.ಡಿ. ಪ್ರಾಂಶುಪಾಲರು, ಎಂ.ಎಸ್. ನಾಗರಾಜು, ಪಿ.ಟಿ. ಶ್ರೀನಿವಾಸ ನಾಯಕ, ಮುನೀಂದ್ರ ಕುಮಾರ್ ಡಿ.ಎಸ್. ಡಾ. ಶ್ರೀನಿವಾಸ್ ರೆಡ್ಡಿ, ಕೆ. ರಾಮಕೃಷ್ಣ ರೆಡ್ಡಿ,ಡಾ. ಟಿ.ಎಂ. ಮಂಜುನಾಥ, ಡಿ. ಶಿವನಂಜಯ್ಯ, ಡಾ. ಕೆ. ರಾಮಕೃಷ್ಣ ರೆಡ್ಡಿ ಡಾ. ಟಿ.ಎಂ. ಮಂಜುನಾಥ, ಡಾ. ಡಿ. ಶಿವನಂಜಯ್ಯ, ಜಿ. ಶ್ರೀನಾಥರಾಜ್, ಟಿ.ಡಿ. ವಸಂತ, ಡಿ.ಎಸ್. ಮುನೀಂದ್ರ ಕುಮಾರ್, ಜಿ. ತಿಪ್ಪೇಸ್ವಾಮಿ ಡಾ. ಓ. ನಾಗರಾಜು, ಸ ಎಂ. ಗೋವಿಂದರಾಯ, ವಿ.ಎನ್. ಮುರುಳೀಧರ್, ಸದಸ್ಯರು ಪ್ರೊ. ಎನ್.ಪಿ. ಶಿವಾನಂದಯ್ಯ, ಧರ್ಮಪತ್ನಿ ವಸಂತಟಿಪುತ್ರಿ ಭೂಮಿಕಾ ಕೃತಿ ಸಂಪಾದಕೀಯ ಮಂಡಳಿ ಸದಸ್ಯರು ಲಕ್ಷಿö್ಮÃರಂಗಯ್ಯ ಸೇರಿದಂತೆ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.

(Visited 1 times, 1 visits today)