ತುಮಕೂರು
ರಂಗಸೊಗಡು ಕಲಾ ಟ್ರಸ್ಟ್(ರಿ),ಸ್ವಾಂದೇನಹಳ್ಳಿ ತುಮಕೂರು ಇವರು, ೮೦ನೇ ಸ್ವಾತಂತ್ರ ದಿನದ ಸವಿನೆನಪಿಗಾಗಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಆಗಸ್ಟ್ ೨೪ರ ಸೋಮವಾರ ಸಂಜೆ ೬ ಗಂಟೆಗೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಸಂಕೇನಹಳ್ಳಿ ಗ್ರಾಮದಲ್ಲಿ ಶ್ರಾವಣ ಸಿರಿ ಸಂಭ್ರಮ-೨೦೨೬-೨೭ ಕಾರ್ಯಕ್ರಮ ಜರುಗಿತು.
ರಂಗಸೊಗಡು ಕಲಾ ಟ್ರಸ್ಟ್(ರಿ), ಸ್ವಾಂದೇನಹಳ್ಳಿ ಅವರು ಆಯೋಜಿಸಿದ್ದ ಶ್ರಾವಣ ಸಿರಿ ಸಂಭ್ರಮ-೨೦೨೬-೨೭ ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶ್ರೀಶ್ರೀಹನುಮಂತನಾಥಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಎಲೆರಾಂಪುರ ಶ್ರೀಗಳು,ಇಂದು ಜನರು ಒಗ್ಗೂಡುವುದೇ ಕಷ್ಟವಾಗಿದೆ.ವೇಗದ ಈ ಜಗತ್ತಿನಲ್ಲಿ ಎಲ್ಲರೂ ದುಡಿಮೆಯ ಕಡೆಗೆ ಮುಖ ಮಾಡಿದ್ದಾರೆ. ಪರಸ್ವರ ಬೆರತು ಮಾತನಾಡುವುದೇ ವಿರಳ.ಇಂತಹ ಹೊತ್ತಿನಲ್ಲಿ ಜನರನ್ನು ಒಗ್ಗೂಡಿಸಲು ರಂಗಸೊಗಡು ಕಲಾಟ್ರಸ್ಟ್ ಇಂತಹದೊAದು ಕಾರ್ಯಕ್ರಮದ ಮೂಲಕ ಸಾಧ್ಯವಾಗಿದೆ.ಹಾಗಾಗಿ ಆಯೋಜಕರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ.ಅಲ್ಲದೆ ಮಕ್ಕಳ ಈ ಸಂಭ್ರಮ ಮನೆ ಮಾಡಲು ಓದಿನ ಜೊತೆಗೆ,ನಮ್ಮಲ್ಲಿನ ಕಲಾ ಪ್ರಕಾರಗಳನ್ನು ಕಲಿತು ಪ್ರದರ್ಶಿಸುವುದನ್ನು ರೂಢಿಸಿಕೊಳ್ಳಬೇಕೆಂದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀ.ಹ.ಮಾತನಾಡಿ, ಇಂದು ರಂಗಸೊಗಡು ಕಲಾ ಟ್ರಸ್ಟ್ ಶ್ರಾವಣ ಸಿರಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿರುವ ಸಂಕೇನಹಳ್ಳಿ ಗ್ರಾಮಕ್ಕೆ ಸುಮಾರು ೨.೫೦ ಲಕ್ಷ ವರ್ಷಗಳ ಇತಿಹಾಸವಿದೆ.ಆ ಕಾಲದಲ್ಲಿ ಜನರು ವಾಸುತಿದ್ದ ಕುರುಹಗಳಿವೆ.ಜಯಮಂಗಲಿ ನದಿ ದಾಟಲು ಬ್ರಿಟಿಷರು ನಿರ್ಮಿಸಿದ ಸಂಕ(ಸೇತುವೆ)ಹಳ್ಳಿ ಸಂಕೇನಹಳ್ಳಿಯಾಗಿ, ಸೇತುವೆ ನಿರ್ಮಿಸಲು ಬಂದ ಅಧಿಕಾರಿಗಳು ಉಳಿದುಕೊಂಡ ಜಾಗ ಕಾಲೋನಿ(ಕಲೋನಿಯಲ್) ಆಗಿ ಅದರ ಆಚೆಗೆ ಇದ್ದ ಇರಕಸಂದ್ರ ಕಾಲೋನಿಯಾಗಿ ಗುರುತಿಸಿಕೊಂಡಿದೆ. ಹಿಂದೆ ಜನರು ಜಾತ್ರೆ, ಹಬ್ಬ, ಹರಿದಿನಗಳ ಹೆಸರಿನಲ್ಲಿ ಒಂದೆಡೆ ಸೇರುತ್ತಿದ್ದರೂ, ಆದರೆ ಕಾಲ ಬದಲಾಗಿದೆ. ಧರ್ಮ, ಜಾತಿಗಳ ನಡುವಿನ ವಿಘಟನೆ ಹೆಚ್ಚಾದ ಕಾರಣ ಗ್ರಾಮದ ಎಲ್ಲಾ ವರ್ಗದ ಜನರು ಒಂದೆಡೆ ಸೇರುವುದು ಕಷ್ಟ. ಇಂತಹ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ಒಟ್ಟಿಗೆ ಸೇರಿಸಿದ ರಂಗಸೊಗಡು ಕಲಾಟ್ರಸ್ಟ÷್ನ ಸಿದ್ದರಾಜು ಮತ್ತು ಕನ್ನಡ ಮತ್ತು ಸಂಸ್ಕöÈತಿ ಇಲಾಖೆಗೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಮುಖ್ಯಅತಿಥಿಗಳಾದ ನವಿಲೇಶ್ ಮಾತನಾಡಿ, ಈ ಸಂಸ್ಥೆಗೆ ಹಲವಾರು ಕಾರ್ಯಕ್ರಮವನ್ನು ನೆಡೆಸಿಕೊಟ್ಟಿರುತ್ತಾರೆ ಅದೇ ರೀತಿ ಈ ಕಾರ್ಯಕ್ರಮವನ್ನು ರಂಗಸೊಗಡು ಕಲಾ ಟ್ರಸ್ಟ್ ನೊಂದಿಗೆ ಚೆನ್ನಾಗಿ ಮೂಡಿಬರಲಿ ಎಂದರು.
ಈ ವೇದಿಕೆಯಲ್ಲಿ ಈ ಊರಿನ ಮುಖಂಡರಾದ ಪದ್ಮಭೂಷಣ ರವಿಕುಮಾರ್, ಭೋಜರಾಜು, ಹಾಗೂ ಊರಿನ ಎಲ್ಲ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ವೇದಿಕೆಯಲಿ ರಂಗ ಸೊಗಡು ಕಲಾ ಟ್ರಸ್ಟ್ನ ಕಾರ್ಯದರ್ಶಿಯಾದ ಸಿದ್ದರಾಜು ಮತ್ತು ದರ್ಶನ್ ರವರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ರಂಗಸೊಗಡು ಕಲಾಟ್ರಸ್ಟ÷್ನ ಶ್ರಾವಣ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಚೈತ್ರ ಮತ್ತು ಸಂಗಡಿಗರಿAದ ಭರತನಾಟ್ಯ,ಭವ್ಯ ಮತ್ತು ತಂಡದಿAದ ಜನಪದ ನೃತ್ಯ, ದಾಬಸ್‌ಪೇಟೆಯ ನಾಗೇಶ್ ಮತ್ತು ತಂಡದಿAದ ಭಜನೆ ಹಾಗೂ ದಾಸರಹಳ್ಳಿ ಮಂಜುನಾಥ್ ಮತ್ತು ತಂಡದಿAದ ಹಾಸ್ಯ ನಾಟಕದ ಪ್ರದರ್ಶನ ನಡೆಸಿಕೊಟ್ಟರು.
(Visited 1 times, 1 visits today)



