ಹುಳಿಯಾರು: ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಅತ್ಯಂತ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲ್ಪಟ್ಟಿತÀÄ. ಆಧ್ಯಾತ್ಮಿಕ ವಾತಾವರಣದೊಂದಿಗೆ ಪುಟಾಣಿ ಮಕ್ಕಳ ಕೇಕೆ, ನಗು ಹಾಗೂ ಕೃಷ್ಣನ ಲೀಲೆಗಳ ಕಲರವ ಎಲ್ಲರಮನಸೂರೆಗೊಂಡಿತು.
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಆಧ್ಯಾತ್ಮ ಶಿಕ್ಷಕಿ ಬಿ.ಕೆ.ಗೀತಕ್ಕ ಅವರು ಮಾತನಾಡಿ ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ಭಗವದ್ಗೀತೆ, ಶ್ರೀಕೃಷ್ಣನ ವಿಚಾರಧಾರೆ ಬೋಧಿಸಬೇಕು ಎಂದು ಹೇಳಿದರು.
ಶ್ರೀಕೃಷ್ಣ ಮಹಾಪುರುಷ. ಲೋಕ ಕಲ್ಯಾಣಕ್ಕಾಗಿ ಹಾಗೂ ಮಾನವೀಯ ಧರ್ಮದ ಉಳಿವಿಗಾಗಿ ಹಲವಾರು ಸಂದೇಶಗಳನ್ನು ನೀಡಿದ್ದಾರೆ. ಪೋಷಕರು ಭಗವದ್ಗೀತೆ ಮತ್ತು ಮಹಾಭಾರತ ದಲ್ಲಿನ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸುವುದು ಅಗತ್ಯವಿದೆ. ಇದರಿಂದ ಮುಂದಿನ ಪೀಳಿಗೆ ಸನ್ಮಾರ್ಗದಲ್ಲಿ ಸಾಗುತ್ತದೆ ಎಂದು ತಿಳಿಸಿದರು.
ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ತೊಡಿಸಿ ಕಾರ್ಯಕ್ರಮಕ್ಕೆ ಕರೆತಂದು ಪಾಲಕರು ಖುಷಿ ಪಟ್ಟರು. ಪುಟ್ಟ ಮಕ್ಕಳು ಕೊಳಲು ಕೈಯಲ್ಲಿ ಹಿಡಿದು, ಕಿರೀಟ ತೊಟ್ಟು, ಪೀರಾಂಬರಿ ಧರಿಸಿ ಸಂಭ್ರಮಿಸಿದರು. ಬಾಲಕಿಯರೂ ಉದ್ದ ಜಡೆ, ಬಣ್ಣಬಣ್ಣದ ಲಂಗ ದಾವಣಿ, ಆಭರಣ ತೊಟ್ಟು ನಲಿದರಲ್ಲದೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದಿದ್ದರು.
ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೃಷ್ಣನ ಭಕ್ತಿಗೀತೆಗಳು, ಹರಿನಾಮ ಸಂಕೀರ್ತನೆಗಳು ಮಾರ್ದನಿಸಿದವು. ಮಕ್ಕಳ ತೊದಲು ನುಡಿಗಳಲ್ಲಿ ಹಾಗೂ ಮುಗ್ಧ ಅಭಿವ್ಯಕ್ತಿಗಳಲ್ಲಿ ಕೃಷ್ಣನ ಲೀಲೆಗಳು, ಗೋಪಾಲನ ತುಂಟಾಟಗಳು ಅನಾವರಣಗೊಂಡಾಗ ಉಪಸ್ಥಿತರಿದ್ದ ಪೋಷಕರು ಹಾಗೂ ಸಾರ್ವಜನಿಕರು ಮೂಕ ವಿಸ್ಮಿತರಾಗಿ ಕಣ್ತುಂಬಿಕೊAಡರು.
ಮಕ್ಕಳಲ್ಲಿ ಆಧ್ಯಾತ್ಮಿಕ ಹಾಗೂ ಸಾಂಸ್ಕöÈತಿಕ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಮತ್ತು ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ, ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
(Visited 1 times, 1 visits today)



