ತುಮಕೂರು: ಉಪಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರಾದ ಡಾ. ಜಿ. ಪರಮೇಶ್ವರ್ ಜಿ ಅವರನ್ನು ಭೇಟಿ ಮಾಡಿ, ಮುಂಬರುವ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ತುಮಕೂರು ಕ್ರಿಕೆಟ್ ಮೈದಾನದ ಅಂತಿಮ ವಿನ್ಯಾಸ ಹಾಗೂ ಯೋಜನೆಗಳ ಕುರಿತು ವಿವರಿಸಲಾಯಿತು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕಾರಿ ಮಂಡಳಿ ತುಮಕೂರು ವಲಯ ಸದಸ್ಯ ಸಿ.ಆರ್.ಹರೀಶ್ ತಿಳಿಸಿದ್ದಾರೆ.
ಈಗಾಗಲೇ ಮೈದಾನದ ಪ್ರಾಥಮಿಕ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಜಂಗಲ್ ಕ್ಲಿಯರೆನ್ಸ್ ಹಾಗೂ ಗಡಿ ಗುರುತಿಸುವ ಕಾರ್ಯಗಳು ನಡೆಯುತ್ತಿವೆ.ಕೈಐಎಡಿಬಿ ಮತ್ತು ಅIಃIಅ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ನಮ್ಮ ಸರ್ವೇ ತಂಡವು ಗಡಿ ಗುರುತಿಸುವ ಕಾರ್ಯದಲ್ಲಿ ತೊಡಗಿದೆ. ಗಡಿ ಗುರುತಿಸಿ ಕೆಐಎಡಿಬಿ ಅಧಿಕಾರಿಗಳಿಂದ ದೃಢೀಕರಣ ಪಡೆದ ನಂತರ ಕಾಂಪೌAಡ್ ವಾಲ್ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನಂತರ ಕ್ರಿಕೆಟ್ ಮೈದಾನದ ಮುಖ್ಯ ಅಭಿವೃದ್ಧಿ ಕಾಮಗಾರಿಗಳೂ ಶೀಘ್ರದಲ್ಲೇ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.
ಕೆಎಸ್‌ಸಿಎ ವತಿಯಿಂದ ಈಗಾಗಲೇ ಆರ್ಕಿಟೆಕ್ಟçನ್ನು ಅಂತಿಮಗೊಳಿಸಲಾಗಿದ್ದು, ವಿನ್ಯಾಸ ಹಾಗೂ ಯೋಜನಾ ಕಾರ್ಯಗಳು ಪ್ರಗತಿಯಲ್ಲಿವೆ. ಈ ಕುರಿತು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಕೂಡ ಸಮಗ್ರವಾಗಿ ಚರ್ಚಿಸಲಾಗಿದೆ.ಕೆ.ಎಸ್.ಸಿ.ಎ ತುಮಕೂರು ಮೈದಾನ ಇಲ್ಲಿ ನಿರ್ಮಾಣವಾಗುವುದಿಲ್ಲ, ಅದನ್ನು ಮೈಸೂರಿಗೆ ಸ್ಥಳಾಂತರಿಸಲಾಗುತ್ತದೆ ಎಂಬ ರೀತಿಯ ಕೆಲವು ತಪುö್ಪ ಹಾಗೂ ಆಧಾರರಹಿತ ಮಾತುಗಳು ಸಾರ್ವಜನಿಕರಲ್ಲಿ ಹರಿದಾಡುತ್ತಿವೆ. ಇಂತಹ ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ. ಯೋಜನೆ ನಿಗದಿತ ರೀತಿಯಲ್ಲಿ ಪ್ರಗತಿಯಲ್ಲಿದ್ದು, ಮೈದಾನದ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂದು ಸಿ.ಆರ್.ಹರೀಶ್ ಸ್ಪಷ್ಟಪಡಿಸಿದ್ದಾರೆ.

(Visited 1 times, 1 visits today)