ತುಮಕೂರು: ಜಿಲ್ಲೆಯಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದ್ದು, ಜಿಲ್ಲೆಯ ತಿಪಟೂರು ಹೊರತು ಪಡಿಸಿ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಣೆ ಮಾಡಿದ್ದರೂ ಇದುವರೆಗೂ ಬರಪರಿಹಾರ ಕಾಮಗಾರಿಗಳನ್ನು ಕೈಗೆತ್ತಿ ಕೊಂಡಿಲ್ಲ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ಜಿಲ್ಲಾಡಳಿತ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಳೆಯಿಲ್ಲದ ಕಾರಣ ಜಿಲ್ಲೆಯ ಶೇ೭೦ ರಷ್ಟು ಭೂಮಿಯಲ್ಲಿ ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಮಾಡಿದ ಶೇ೩೦ರಷ್ಟು ಭೂಮಿಯಲ್ಲಿನ ಫಸಲು ಸಹ ಸಕಾಲಕ್ಕೆ ಮಳೆಯಿಲ್ಲದೆ ಒಣಗಿದ್ದು,ದಿನದಿಂದ ದಿನಕ್ಕೆ ಅಂತರಜಲ ಕುಸಿಯುತ್ತಿದ್ದು,ಮುಂದಿನ ೧೫-೨೦ ದಿನಗಳಲ್ಲಿ ತೀವ್ರ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ತಕ್ಷಣವೇ ಕುಡಿಯುವ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಾನುವಾರುಗಳ ಮೇವಿಗೆ ಗೋಶಾಲೆ ತೆರೆಯುವುದು.ಎಕರೆಗೆ ತಲಾ ೫೦ ಸಾವಿರ ಬೆಳೆ ಪರಿಹಾರ,ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗದಂತೆ ವಿಬಿಜಿ ರಾಮಜಿ ಅಡಿಯಲ್ಲಿ ಕೆಲಸ ನೀಡಿ ಜನರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಈಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದ್ದು, ದಿನದಲ್ಲಿ ಒಂದು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುತ್ತಿಲ್ಲ. ನಿರ್ಮಾಣವಾಗಿರುವ ೨೨೦ ಕೆ.ವಿ. ಉಪಸ್ಥಾವರಗಳು ಕಾರ್ಯಾರಂಭಗೊAಡಿಲ್ಲ. ಬೇಸ್ಕಾಂ ಅಧಿಕಾರಿಗಳು ಅಸಹಾಯಕರಾಗಿದ್ದಾರೆ.ಹಾಗಾಗಿ ಬೆಸ್ಕಾಂ ಸೂಪರಿಂಡೆAಟ್ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳು ಸೆಪ್ಟಂಬರ್ ೨೧ರೊಳಗೆ ರೈತರು, ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ಸೆಪ್ಟಂಬರ್ ೨೩ ರಿಂದ ಹಂತ ಹಂತವಾಗಿ ಎಲ್ಲಾ ತಾಲೂಕು ಬೆಸ್ಕಾಂ ಕಚೇರಿ ಮತ್ತು ತಹಶೀಲ್ದಾರರ ಕಚೇರಿಯ ಮುಂದೆ ಪಿಕೇಟಿಗ್ ನಡೆಸಲಾಗುವುದು. ಮಧುಗಿರಿ ಉಪವಿಭಾಗಕ್ಕೆ ಸಂಬAಧಿಸಿ ದಂತೆ ಸೆಪ್ಟಂಬರ್ ೨೩ ರಂದು ಮಧುಗಿರಿ ಎ.ಸಿ.ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಈಲ್ಲೆಯಲ್ಲಿ ಸರಕಾರದ ಯೋಜನೆಗಳಾದ ಹೇಮಾವತಿ ನಾಲೆ, ಎತ್ತಿನಹೊಳೆ ಯೋಜನೆ, ರೈಲ್ವೆಗೆ ಸೇರಿ ರೈತರ ಸಾಕಷ್ಟು ಫಲವತ್ತಾ ಭೂಮಿಯನ್ನು ವಶಪಡಿಸಿಕೊಂಡು ೨೦-೩೦ ವರ್ಷಗಳು ಕಳೆದರು ವೈಜ್ಞಾನಿಕ ಪರಿಹಾರ ನೀಡಿಲ್ಲ. ನ್ಯಾಯಾಲಯಕ್ಕೆ ಹೋದ ರೈತರಿಗೆ ಕೋರ್ಟ್ ಆದೇಶದಂತೆ ಸುಮಾರು ೫೦೦ ಕೋಟಿ ರೂಗಳಿಗೆ ಹೆಚ್ಚಿನ ಬಾಕಿ ನೀಡಬೇಕಿದೆ.ಆದರೆ ಇದುವರೆಗೂ ಒಂದು ನೈಯಾಫೈಸೆ ನೀಡಿಲ್ಲ. ಹಲವು ಮೂಲ ಜಮೀನುದಾರರು ಸಾವನ್ನಪ್ಪಿದ್ದಾರೆ.ಸರಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಹಾಗೆಯೇ ಕಳೆದ ಸಾಲಿನಲ್ಲಿ ನ್ಯಾಫೇಡ್ ಮೂಲಕ ಖರೀದಿಸಿದ್ದ ರಾಗಿಯ ಬಾಬ್ತು ಸುಮಾರು ೪೦೦ ಕೋಟಿ ರೂ ಬಾಕಿ ಬರಬೇಕಾಗಿದೆ. ಸರಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಎ.ಗೋವಿಂದರಾಜು ಆಗ್ರಹಿಸಿದರು.
ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದೆ.ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದ ಕಾರಣ, ಉತ್ಪಾಧನಾ ವೆಚ್ಚ ಹೆಚ್ಚಾಗಿ,ನಷ್ಟಕ್ಕೆ ಒಳಗಾಗಿ ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾನೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸಂಸದರು ಒಂದು ಬಾರಿಗೆ ರೈತರ ಸಾಲಮನ್ನಾಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು.ಹಾಗೆಯೇ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು ಬಲವಂತದ ವಸೂಲಿ ಮಾಡದಂತೆ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ,ಬರದಿಂದ ಬೆಳೆ ನಷ್ಟದಿಂದ ಜನರು ಸಂಕಷ್ಟದಲ್ಲಿದ್ದು,ಸರಕಾರ ಕೇರಳ ಮಾದರಿಯಲ್ಲಿ ಪಡಿತರ ಅಕ್ಕಿಯ ಜೊತೆಗೆ, ಬೇಳೆ, ಬೆಲ್ಲ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ರಿಯಾಯತಿ ದರದಲ್ಲಿ ನೀಡಬೇಕು.ಹಾಗೆಯೇ ಪಶುಸಂಗೋಪನೆಗೆ ಪೂರಕವಾಗಿ ಬೂಸ್ ಮತ್ತು ಹಿಂಡಿಯನ್ನು ಶೇ೫೦ರ ರಿಯಾಯಿತಿ ದರದಲ್ಲಿ ನೀಡಬೇಕು. ಲೀಟರ್ ಹಾಲಿಗೆ ೪೦ ರೂ ನೀಡಬೇಕೆಂದು ಒತ್ತಾಯಿಸಿದರು.
ನಂದಿಹಳ್ಳಿ-ಮಲ್ಲಸAದ್ರ-ವಸAತನರಸಾಪುರ ಔಟರ್ ರಿಂಗ್ ರಸ್ತೆಗೆ ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಅಧಿಕಾರಿಗಳು ಮುಂದಾಗುತ್ತಲೇ ಇದ್ದಾರೆ.ಜನರಿಗೆ ಹೆಚ್ಚು ಉಪಯೋಗವಿಲ್ಲದ ಔಟರ್‌ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು.ಹಾಗೆಯೇ ಜಿಲ್ಲೆಯ ೭-೮ ತಾಲೂಕುಗಳಿಗೆ ಮರಣ ಶಾಸನವಾಗಿರುವ ಏಕ್ಸೆ÷್ಪçಸ್ ಕೇನಾಲ್ ಯೋಜನೆಯನ್ನು ಸರಕಾರ ರದ್ದು ಮಾಡಬೇಕು. ಕುಣಿಗಲ್ ನೆಪದಲ್ಲಿ ಬಿಡದಿಯೇ ಎಐ ಡೇಟಾ ಸೆಂಟರ್‌ಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಜಿ.ಸಿ.ಶಂಕರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಬೋರೇಗೌಡ, ಲೋಕೇಶ್, ರಂಗಹನುಮಯ್ಯ, ಷಬ್ಬೀರ್ ಪಾಷ, ಯುವಘಟಕದ ಮಂಜುನಾಥ್, ಜಟ್ಟಿ, ತಿಮ್ಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)