ತುಮಕೂರು: ಸಾರ್ವಜನಿಕರಿಗೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಅವರಿಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ತರಬೇನಹಳ್ಳಿ ಭೋವಿ ಕಾಲೋನಿ, ದುಗುಡೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಲ್ಲೇನಹಳ್ಳಿ ಕಾಲೋನಿ ಹಾಗೂ ಕಸಬಾ ಹೋಬಳಿ ಹೊನ್ನೇಭಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಂP ಯೋಜನೆಯಡಿ ಕೊರೆಯಲಾದ ನೂತನ ಕೊಳವೆಬಾವಿಗಳ ನೀರಿನ ಲಭ್ಯತೆ, ನೀರಿನ ಮಟ್ಟ ಹಾಗೂ ನೀರಿನ ಹರಿವಿನ ಪ್ರಮಾಣವನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು.
ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಸಂಬAಧಪಟ್ಟ ಸಿಬ್ಬಂದಿಯಿAದ ಪಂಪ್‌ಸೆಟ್‌ಗಳನ್ನು ಚಾಲನೆಗೊಳಿಸಲಾಯಿತು. ಪಂಪ್‌ಸೆಟ್ ಕಾರ್ಯಾರಂಭಿಸಿದ ನಂತರ ಕೊಳವೆಬಾವಿಯಿಂದ ಹೊರಬರುವ ನೀರಿನ ಹರಿವು, ನೀರು ಹ್ರೆರ ಬರುವ ವೇಗ ಹಾಗೂ ನಿರಂತರವಾಗಿ ನೀರು ಲಭ್ಯವಾಗುತ್ತಿರುವ ಸ್ಥಿತಿಯನ್ನು ಪರಿಶೀಲಿಸಲಾಯಿತು.
ಕೊಳವೆಬಾವಿಯಿಂದ ಲಭ್ಯವಾಗುವ ನೀರಿನ ಪ್ರಮಾಣವನ್ನು ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಕುರಿತು ಸಂಬAಧಪಟ್ಟ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.
ನೀರಿನ ಹರಿವು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ಕೊಳವೆಬಾವಿಯ ನೀರಿನ ಲಭ್ಯತೆಯನ್ನು ನಿಯಮಿತವಾಗಿ ಗಮನಿಸಬೇಕು. ಪಂಪ್‌ಸೆಟ್ ಮತ್ತು ಸಂಬAಧಿತ ಉಪಕರಣಗಳ ಸಮರ್ಪಕ ನಿರ್ವಹಣೆ ಮಾಡಬೇಕೆಂದು ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ತರಬೇನಹಳ್ಳಿ ಭೋವಿ ಕಾಲೋನಿಯಲ್ಲಿ ಸ್ಮಶಾನ ಹಾಗೂ ಆಶ್ರಯ ನಿವೇಶನಕ್ಕಾಗಿ ಗುರುತಿಸಲಾಗಿರುವ ಜಮೀನನ್ನು ಸ್ಥಳ ಪರಿಶೀಲನೆ ಮಾಡಿದ ಅವರು, ಸ್ಥಳೀಯ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಕುಡಿಯುವ ನೀರು, ನಿವೇಶನ, ಸ್ಮಶಾನ ಹಾಗೂ ಇತರೆ ಮೂಲಭೂತ ಸೌಲಭ್ಯಗಳಿಗೆ ಸಂಬAಧಿಸಿದ ಸಮಸ್ಯೆಗಳು ಮತ್ತು ಅಗತ್ಯತೆಗಳನ್ನು ಆಲಿಸಿದರು. ಸಾರ್ವಜನಿಕರು ತಿಳಿಸಿದ ಸಮಸ್ಯೆಗಳ ಕುರಿತು ಸಂಬAಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ: ಶಿವಪ್ರಸಾದ್ ಹೆಚ್.ಎಂ., ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ಚಿ.ನಾ. ಹಳ್ಳಿ ತಾಲ್ಲೂಕು ತಹಶೀಲ್ದಾರ್ ಮಮತ ಹಾಗೂ ಸಂಬAಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
(Visited 1 times, 1 visits today)



