ತುಮಕೂರು: ದೊಡ್ಡ ದೊಡ್ಡ ಬಂಡವಾಳಗಾರರ ಜೊತೆ ಕೈಜೋಡಿಸುವ ಮೂಲಕ ಬೆಲೆ ಏರಿಕೆ ಮಾಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ಜೇಬಿಗೆ ಕತ್ತರಿ ಹಾಕುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಪೈಪೋಟಿಗೆ ಬಿದ್ದಿವೆ ಎಂದು ಸಿಪಿಐ(ಎಂ ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‍ಮುಜೀಬ್ ಕಿಡಿ ಕಾರಿದರು.
ಅವರು ಭಾರತ ಕಮ್ಯೂನಿಸ್ಟ್ ಪಕ್ಷ ಮಾಕ್ರ್ಸ್‍ವಾದಿ, ತುಮಕೂರು ಜಿಲ್ಲಾ ಸಮಿತಿ ಬಸ್ ದರ ಏರಿಕೆ, ವಿದ್ಯುತ್, ಹಾಲಿನ ದರ ,ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ವಿರುದ್ದ ಕೆ.ಎಸ್.ಆರ್‍ಟಿಸಿ ಬಸ್ ನಿಲ್ದಾಣದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಜನತೆಗೆ ಭರವಸೆÀಗಳ ಮಹಾಪೂರವನ್ನೇ ಹರಿಸಿ ಕೇವಲ 100 ದಿನಗಳಲ್ಲಿ ಬೆಲೆ ಏರಿಕೆ ಕಡಿವಾಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 17 ವರ್ಷಗಳು ಕಳೆದಿದ್ದರೂ ಸಹ ಇದುವರೆಗೂ ಅಗತ್ಯ ವಸ್ತುಗಳಬೆಲೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ, ಗ್ಯಾಸ್ ಬೆಲೆ ನಿರಂತರವಾಗಿ ಹೆಚ್ಚಳ ಮಾಡಲಾಗುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ ಇವುಗಳಿಗೆ ಕೇಂದ್ರದ ಬಳಿ ಉತ್ತರವೇ ಇಲ್ಲ ಎಂದರು.
ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಬಸ್ ಪ್ರಯಾಣ ದರ ಏರಿಕೆಯೂ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಹಾಲಿನ ದರ ಹೆಚ್ಚಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಎಂಟಿಸಿ ಮತ್ತು ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣ ದರಗಳನ್ನು ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸದ ರಾಜ್ಯ ಕಾಂಗ್ರೆಸ್ ಸರ್ಕಾರ ತಾನೇ ಸಿದ್ದಪಡಿಸಿದ್ದ ಪರಿಷ್ಕøತ ಕನಿಷ್ಠ ವೇತನ ಜಾರಿಯನ್ನು ಸಹ ತಡೆಹಿಡಿದಿದೆ. ಹೀಗೆ ಕಾರ್ಮಿಕರ ವೇತನ ಹೆಚ್ಚಿಸದೆ ಇನ್ನೊಂದೆಡೆ ಸತತ ಬೆಲೆ ಏರಿಕೆಯ ಮೂಲಕ ದುಡಿಯುವ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ಸಿಪಿಐ(ಎಂ) ನಗರ ಕಾರ್ಯದರ್ಶಿ ಎ. ಲೋಕೇಶ್ ಮಾತನಾಡಿ ರಾಜ್ಯ ಸರ್ಕಾರ ಈ ಕೂಡಲೇ ಹೆಚ್ಚಿಸಿರು ಬಸ್ ಪ್ರಯಾಣ ದರ ಮತ್ತು ಹಾಲಿನ ದರವನ್ನು ವಾಪಸ್ ಪಡೆಯಬೇಕು ಎಂದರು.
ಜನವಾದಿ ಮಹಿಳಾ ಸಂಘಟನೆಯ ಟಿ.ಆರ್. ಕಲ್ಪನಾ ಮಾತನಾಡಿ ಸರ್ಕಾರಗಳು ಜನ ಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಬೆಲೆ ಏರಿಕೆಗಳಿಗೆ ಕಡಿವಾಣ ಹಾಕಬೇಕು ಎಂದರು.
ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಮಂಜುನಾಥ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಗಳನ್ನು ನಿಯಂತ್ರಣ ಮಾಡುವ ಬದಲು ಮತ್ತಷ್ಟು ಹೆಚ್ಚಿಸುವ ಮೂಲಕ ಸರ್ಕಾರಗಳ ಬೊಕ್ಕಸವನ್ನು ತುಂಬಿಸಿಕೊಳ್ಳುವ ಕೆಲಸಕ್ಕೆ ಮುಂದಾಗುತ್ತಿವೆ. ಆದರೆ ಸಮಾಜದ ಅಭಿವೃದ್ಧಿಗೆ ಬೆವರನ್ನು ಸುರಿಸಿ ದುಡಿಯುವ ಜನರ ಬದುಕಿನ ಸಂಕಷ್ಠಗಳ ನಿವಾರಣೆಗೆ ಅವರ ಕೂಲಿಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡಲೇ ಏರಿಕೆ ಮಾಡಿರುವ ಬಸ್ ಪ್ರಯಾಣ ದರವನ್ನು ಇಳಿಸಬೇಕು ಮತ್ತು ಹಾಲು ಉತ್ಪಾದಕ ರೈತರಿಗೆ ನೇರ ಸಬ್ಸಿಡಿ ನೀಡಿ ಹಾಲಿನ ದರ ಏರಿಕೆಯನ್ನು ತಕ್ಷಣವೇ ವಾಪಸ್ ಪಡೆಯುವ ಮೂಲಕ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ತಪ್ಪಿಸಬೇಕು ಎಂದರು .
ಪ್ರತಿಭಟನೆಯಲ್ಲಿ ಆಟೋ ಚಾಲಕರ ಸಂಘದ ಮುಖಂಡ ಇಂತಿಯಾಜ್, ರಾಜೇಂದ್ರ, ಆನಂದ್, ರಂಗಧಾಮಯ್ಯ, ಲಕ್ಷ್ಮೀಕಾಂತ್, ಅಶ್ವತ್ಥಯ್ಯ, ಡಿ.ವೈ.ಎಫ್.ಐ ನ ಕಿರಣ್, ಅರುಣ್, ಚಿದಾನಂದ್, ಕೆಂಪೇಗೌಡ, ಪ್ರಣವ್, ತೋಷಿದ್, ಯೋಗೀಶ್ ಉಮೇಶ್, ಲಕ್ಷ್ಮಿಕಾಂತ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 1 times, 1 visits today)