ತುರುವೇಕೆರೆ: ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕೊರೆಯುತ್ತಿದ್ದ ಹೊಸ ಬೋರ್ ವೆಲ್ ನ್ನು ಹೆಚ್ವು ಆಳಕ್ಕೆ ಕೊರೆಯಬೇಕು ಎಂದು ಒತ್ತಾಯಿಸಿ ತಾಲೂಕಿನ ಕಾಳಪ್ಪನಪಾಳ್ಯ ಗ್ರಾಮದ ಮುಖಂಡರು ಕೆಲ ಕಾಲ ಪ್ರತಿಭಟನೆ ನೆಡೆಸಿದ ಘಟನೆ ಶುಕ್ರವಾರ ನೆಡೆದಿದೆ.
ಜಲಜೀವನ್ ಯೋಜನೆ ಅಡಿಯಲ್ಲಿ ತಾಲೂಕಿನ ಕಾಳಪ್ಪನಪಾಳ್ಯ ಗ್ರಾಮಕ್ಕೆ ಮನೆ ಮನೆ ನೆಲ್ಲಿ ಕಾಮಗಾರಿ ಪೂರ್ಣಗೊಂಡು ಯೋಜನೆಯಲ್ಲಿ ಜನರಿಗೆ ಕುಡಿಯುವ ನೀರಿಗಾಗಿ ಹೊಸ ಬೋರ್ ವೆಲ್ ಕೊರೆಯಲು ಲಾರಿ ಆಗಮಿಸಿ ಕೊಳವೆ ಬಾವಿ ಕೊರೆದಿದೆ ಸ್ವಲ್ಪ ಪ್ರಮಾಣದ ನೀರು ಸಿಕ್ಕಿದ್ದು. ಆದರೆ ಬೋರ್ ವೆಲ್ ಕೊರೆಯುವ ಲಾರಿಯವನು ಕೇವಲ ೭೦೦ ಮಾತ್ರ ಕೊರೆಯಲಾಗುವುದು ನನಗೆ ಗುತ್ತಿಗೆದಾರ ಹೇಳಿರುವುದು ಅಷ್ಟೆ ಎಂದು ಬೋರ್ ವೆಲ್ ಮಾಲೀಕರು ತೆಗಾದೆ ತೆಗೆದಿದ್ದಾರೆ. ಗ್ರಾಮಸ್ಥರು ಬೋರ್ ವೆಲ್ ನಲ್ಲಿ ಸಮರ್ಪಕವಾಗಿ ನೀರು ಸಿಕ್ಕಿಲ್ಲ ಅದ್ದರಿಂದ ೧ಸಾವಿರ ಅಡಿ ಕೊರೆಯಬೇಕು ಎಂದು ಪಟ್ಟು ಇಡಿದಿದ್ದಾರೆ. ನಂತರ ಬೋರ್ ವೆಲ್ ಲಾರಿ ಮಾಲೀಕ. ಹಾಗೂ ಗ್ರಾಮಸ್ಥರ ನಡುವೇ ವಾದ ವಿವಾದ ಉಂಟಾಗಿದ್ದು ಕೊಳವೆ ಭಾವಿ ಕೊರೆಯುವುದನ್ನು ನಿಲ್ಲಿಸಿದ್ದಾರೆ. ಬೋರ್ ವೆಲ್ ಲಾರಿ ಮಾಲೀಕನ ವಿರುದ್ದ ಅಕ್ರೋಶಗೊಂಡ ಗ್ರಾಮಸ್ಥರು ೧ಸಾವಿರ ಅಡಿ ಕೊಳವೆ ಬಾವಿ ಕೊರೆಯುವರೆಗೂ ಲಾರಿ ಬಿಡುವುದಿಲ್ಲ ಎಂದು ಪ್ರತಿಭಟನೆ ನೆಡೆಸಿದ್ದಾರೆ.
ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಮಂಜುನಾಥ್ ಮಾತನಾಡಿ ಕುಡಿಯುವ ನೀರಿನ ಕೊಳವೆ ಭಾವಿಯನ್ನು ೧೦೦೦ ಅಡಿ ಕೊರೆಯಲು ಅವಕಾಶವಿದೆ. ಕೊಳವೆ ಬಾವಿಯಲ್ಲಿ ಸಮರ್ಪಕವಾಗಿ ನೀರು ಸಿಕ್ಕಿಲ್ಲ ಅದ್ದರಿಂದ ಇನ್ನು ಆಳಕ್ಕೆ ಕೊರೆದರೆ ಉತ್ತಮ ನೀರು ಸಿಗಬಹುದು ಎಂದು ನಮ್ಮ ಆಸೆ ಆದರೆ ಲಾರಿ ಮಾಲೀಕ ತಕರಾರು ಮಾಡುತ್ತಿದ್ದಾರೆ ಎಂದರು.
ಸುದ್ದಿ ತಿಳಿದ. ಆಗಮಿಸಿದ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಅಶಾಂ ಗ್ರಾಮಸ್ಥರು ಹಾಗೂ ಬೋರ್ ವೆಲ್ ಮಾಲೀಕರು ನಡುವೆ ಮಾತನಾಡಿ ಸ್ವಲ್ಪ ನೀರು ಸಿಕ್ಕಿದೆ ಇನ್ನು ಆಳಕ್ಕೆ ಕೊರೆದರೆ ಇನ್ನು ಹೆಚ್ಚು ನೀಎಉ ಸಿಗುವ ಅವಕಾಶ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ ಅದ್ದರಿಂದ ೯೦೦ ಅಡಿವೆರವಿಗೂ ಕೊಳವೆ ಬಾವಿ ಕೊರೆಯುವಂತೆ ಸೂಚಿಸಿ ಕೊಳವೆ ಭಾವಿ ಕೊರೆಸುವಲ್ಲಿ ಸಪಲರಾದರು. ನಂತರು ಗ್ರಾಮಸ್ಥರು ಖುಷಿಯಾದರೂ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕುಮಾರ್, ಶೇಖರಯ್ಯ, ಮಧು, ಸಾಗರ್, ಪ್ರಭುಸ್ವಾಮಿ, ಪುಟ್ಟರಾಜು, ಮಂಜೇಗೌಡ ಇತರರಿದ್ದರು.

(Visited 1 times, 1 visits today)