ಹುಳಿಯಾರು: ಬ್ಯಾಂಕುಗಳಲ್ಲಿ ಇರುವ ಎಲ್ಲಾ ಖಾತೆಗಳಿಗೂ ನಾಮಿನೇಷನ್ ಕಡ್ಡಾಯವಾಗಿದ್ದು, ಖಾತೆದಾರರು ಮರಣ ಹೊಂದಿದಲ್ಲಿ ಅವರ ಹೂಡಿಕೆಯ ಹಣವನ್ನು ನಾಮನಿರ್ದೇಶನ ಮಾಡಿದ ವ್ಯಕ್ತಿಗಳಿಗೆ ಸುಲಭ ಹಾಗೂ ಸರಳ ರೀತಿಯಲ್ಲಿ ಹಣ ನೀಡಬಹುದು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಯಳನಾಡು ಶಾಖೆಯ ಮ್ಯಾನೇಜರ್ ಭರತ್ ತಿಳಿಸಿದರು.
ಹುಳಿಯಾರು ಹೋಬಳಿಯ ಇತ್ತೀಚೆಗೆ ಕೋರಗೆರೆ ಗ್ರಾಮ ಪಂಚಾಯಿತಿ ಮಟ್ಟದ ನಿಸರ್ಗ ಸಂಜೀವಿನಿ ಒಕ್ಕೂಟ ಏರ್ಪಡಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನಾ ಭಾಷಣದಲ್ಲಿ ಈ ವಿಷಯ ತಿಳಿಸಿದರು.
ತಾಲೂಕ್ ಪಂಚಾಯಿತಿ ಸಂಜೀವಿನಿ ಒಕ್ಕೂಟಗಳ ವ್ಯವಸ್ಥಾಪಕರಾದ ರವಿ ಎಚ್.ಕೆ ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳ ಆಯ್ಕೆ ಮಾಡಿ ಅದರ ಮುಖಾಂತರ ಒಕ್ಕೂಟಗಳನ್ನು ರಚಿಸಿದ್ದು ಎಲ್ಲ ರೀತಿಯ ಸೌಲಭ್ಯಗಳಾದ ಪ್ರೋತ್ಸಾಹ, ತರಬೇತಿ ಜೊತೆಗೆ ಧನ ಸಹಾಯ ನೀಡಲು ಮುಂದಾಗಿದ್ದು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡುತ್ತಾ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಗಳನ್ನು ಬ್ಯಾಂಕುಗಳ ಮುಖಾಂತರ ನೋಂದಾಯಿಸಿಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೋರಗೆರೆ ಗ್ರಾಮ ಪಂಚಾಯಿತಿ ಮಟ್ಟದ ನಿಸರ್ಗ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಆಶಾ, ಕಾರ್ಯದರ್ಶಿ ಚಂದ್ರಮ್ಮ, ಖಜಾಂಚಿ ಜಯಮ್ಮ, ಎಂಬಿಕೆ ಹೇಮಲತಾ, ಎಲ್‍ಸಿಆರ್‍ಪಿಗಳಾದ ಭವ್ಯ, ಕುಸುಮ, ಪವಿತ್ರ, ಕೃಷಿ ಸಖಿ ಶೈಲಜಾ, ಪಶುಸಖಿ ಶೋಭಾ, ಬಿಸಿ ಸಖಿ ದನಲಕ್ಷ್ಮೀ, ಸಿಆರ್‍ಪಿ ಇಪಿ ಸುನಂದ ಬಿ.ಡಿ, ಎಸ್‍ಪಿ ಸುಧಾ, ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದೇವಿರಮ್ಮ, ಉಪಾಧ್ಯಕ್ಷೆ ದೀಪ, ಕಾರ್ಯದರ್ಶಿ ನಿರ್ಮಲ, ಸಹ ಕಾರ್ಯದರ್ಶಿ ಲಕ್ಷ್ಮಿಬಾಯಿ ಖಜಾಂಚಿ ಶೃತಿ, ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಯಳನಾಡು ಶಾಖೆಯ ಸಿಬ್ಬಂದಿ ನವೀನ್ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಮೋಟಿಹಳ್ಳಿ, ಭಟ್ಟರಹಳ್ಳಿ, ಮರಾಠಿ ಪಾಳ್ಯ, ಹನುಮಂತಪುರ, ಡಿಂಕನಹಳ್ಳಿ, ಬರಗಿಹಳ್ಳಿ, ಕೋರಗೆರೆ, ಸಾಲಾಪುರ, ಉಪ್ಪಾರಹಳ್ಳಿ ಮುಂತಾದ ಗ್ರಾಮಗಳ ಸ್ವಸಹಾಯ ಸಂಘದ ಹಾಗೂ ಒಕ್ಕೂಟದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

(Visited 1 times, 1 visits today)