ತುರುವೇಕೆರೆ: ಬ್ಯಾಂಕ್ ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು ಹಾಗೂ ಹರಾಜು ಮಾಡಿರುವ ಭೂಮಿಯನ್ನು ರೈತನಿಗೆ ವಾಪಸ್ಸು ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ಕರ್ನಾಟಕ ಬ್ಯಾಂಕ್ ಮುಂಭಾಗ ನ.2 ರಂದು ರೈತ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾದ್ಯಕ್ಷ ಗೋವಿಂದರಾಜು ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯದಲ್ಲಿ ಬರಗಾಲದಿಂದ ತತ್ತರಿಸುತ್ತಿರುವ ರೈತರ ಮೇಲೆ ಭ್ಯಾಂಕ್ ಗಳು ಸಾಲಾ ವಸೂಲಾತಿ ನೆಪದಲ್ಲಿ ದಬ್ಬಾಳಿಕೆ ನೆಡೆಸುತ್ತಿವೆ ಎಂದು ಅವರು ರಾಜ್ಯದಲ್ಲಿ ಶೇ 75 ಭಾಗ ಬರಗಾಲ ಅವರಿಸಿದ್ದು ಉಳಿದ 25 ಭಾಗ ಬೆಳೆಯೂ ನಾಶವಾಗಿದೆ ಇಂತಹ ಸಂಕಷ್ಟದ ಪರಿಸ್ಥಿತಿ ಯಲ್ಲಿ ರೈತ ಜೀವನ ಮಾಡಲು ಸಾದ್ಯವಾಗುತ್ತಿಲ್ಲ ಆದರೆ ಬ್ಯಾಂಕ್ ಗಳು ಬಲವಂತಬಾಗಿ ಕೋರ್ಟ್ ಗೆ ಹೋಗಿ ಸಾಲ ವಸೂಲಾತಿ ಮಾಡುತ್ತಿರುವುದು ಖಂಡನೀಯ ಎಂದರು.
ತಾಲೂಕಿನ ತಾಳಕೆರೆ ಗ್ರಾಮದ ಈರಯ್ಯ ಮಕ್ಕಳು ಹಾಗೂ ಮಂಗಳಮ್ಮನಿಗೆ ಸೇರಿದ. 4.14 ಗುಂಟೆ ಜಮೀನಿನ ಮೇಲೆ ಸುಮಾರು 2005ರಲ್ಲಿ ಟ್ಯಾಕ್ಟರ್ ಸಾಲ 4.75ಲಕ್ಷ ಹಾಗೂ ಅಭಿವೃದ್ಧಿ ಸಾಲ 80 ಸಾವಿರ ಪಟ್ಟಣದ ಕರ್ನಾಟಕ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು.ಸಾಲ ತೀರಿಸಲು ರೈತರಿಗೆ ನೋಟಿಸ್ ವಾಯ್ದೆ ನೀಡದೆ ಬ್ಯಾಂಕ್ ಈ ಹರಾಜು ಮೂಲಕ ಕಾಪೆರ್Çರೇಟ್ ದಾರರಿಗೆ ಜಮೀನು ಮಾರಾಟ ಮಾಡಿದೆ. ನಂತರ ಜಮೀನು ಸಹ ಸ್ವಾದೀನ ಪಡಿಸಿಕೊಳ್ಳಲು ಮುಂದಾಗಿತ್ತು. ನಂತರ ರಾಜ್ಯ ರೈತ ಸಂಘ ಹಾಗು ಬ್ಯಾಂಕ್ ಅಧಿಕಾರಿಗಳ ನಡುವೆ ಸೆಭೆ ನೆಡೆಸಿ 9 ಲಕ್ಷ ಸಾಲ ಕಟ್ಟುವಂತೆ ತಿರ್ಮಾನಿಸಲಾಗಿ ಸುಮಾರು 5 ಲಕ್ಷದ ಡಿ.ಡಿ.ಸಹ ತೆಗಿಸಲಾಗಿತ್ತು. ಆದರೆ ಸುಮಾರು ಎರಡು ವರ್ಷವಾದರೂ ರೈತನಿಗೆ ಜಮೀನು ವಾಪಸ್ಸು ನೀಡದೆ ಸತಾಯಿಸುತ್ತಿದ್ದು ಕೋಟ್ಯಾಂತರ ರೂ ಮೌಲ್ಯ ದ ಜಮೀನನ್ನು ಬಿಡ್ ದಾರರು ಹಾಗೂ ಬ್ಯಾಂಕ್ ನವರು ಲಪಾಟಯಿಸಲು ಹುನ್ನಾರ ನೆಡೆಸುತ್ತಿದ್ದಾರೆ. ಈ ಅಕ್ರಮ ಹರಾಜು ಖಂಡಿಸಿ ಹಾಗೂ ರೈತರಿಗೆ ಜಮೀನು ವಾಪಸ್ಸು ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನೆಡೆಸಲಾಗುತ್ತಿದ್ದು ಈ ಪ್ರತಿಭಟನೆ ಗೆ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷ ಬಡಲಾಪುರನಾಗೇಂದ್ರ, ಶಾಸಕರಾದ ದರ್ಶನ್ ಪುಟ್ಟಣ್ಣಯ್ತ, ರಾಜ್ಯ ಕಾರ್ಯದರ್ಶಿ ವೀರಸಂಗಯ್ಯ, ಸೇರಿದಂತೆ ಮಂಡ್ಯ, ಕೋಲಾರ, ಚಿತ್ರದುರ್ಗ, ಮೈಸೂರು, ಚಾಮರಾಜನಗರ ಜಿಲ್ಲೆಯ ಮುಖಂಡರು ಅಪಾರ ರೈತರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅದ್ಯಕ್ಷ ಶ್ರೀನಿವಾಸ್ ಗೌಡ, ಗುಬ್ಬಿ ತಾಲೂಕು ಪ್ರ ಕಾರ್ಯದರ್ಶಿ ಲೋಕೇಶ್ ನಟರಾಜು, ಗೋವಿಂದ ರಾಜು, ಪರಶುರಾಮ, ಆಶೋಕ್, ವಸಂತಪ್ಪ ರಂಗಸ್ವಾಮಿ, ನಾಗರಾಜು, ಪುರುಷೋತ್ತಮ್ಮ್, ಮಿತನ್,ಚರಣ್ ರಾಜು, ಮೂರ್ತಪ್ಪ, ಶಿವಣ್ಣ, ಸಿದ್ದರಾಮಣ್ಣ, ಪುಟ್ಟಸ್ವಾಮಿ, ಸಂತೋಷ್ ಇತರರು ಇದ್ದರು.

(Visited 1 times, 1 visits today)