ತುಮಕೂರು: ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾದ ಪೆÇ್ರಡೆಕ್ಷನ್ ಲಿಂಕ್ಡ್ ಇನ್‍ಸೆಂಟೀವ್ ಯೋಜನೆಯಡಿ 11500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಕೈಗಾರಿಕಾ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಜಪಾನ್ ಟೌನ್‍ಶಿಪ್ ವಲಯದಲ್ಲಿಂದು ಆದರ್ಶ ಕೆಮಿಕಲ್ಸ್‍ನ ಉತ್ಪಾದನಾ ಘಟಕಕ್ಕೆ ಗುದ್ದಲಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮಂತ್ರಿಯಾಗಿ ಕೈಗಾರಿಕೆಗಳು ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವುದು ನನ್ನ ಜವಾಬ್ದಾರಿ ಎಂದರು.
ಕೈಗಾರಿಕೆಗಳಿಗೆ ಅನುಮತಿ, ಮೂಲಭೂತ ಸೌರ್ಕಯಗಳನ್ನು ಒದಗಿಸುವುದು ಕೇಂದ್ರದ ಕೆಲಸ. ಚೈನಾ ಮ್ಯಾಗ್ನೆಟ್‍ಗೆ ಪರ್ಯಾಯವಾಗಿ ಮ್ಯಾಗ್ನೆಟ್ ಉತ್ಪಾದನೆಗೆ ಐದು ಕಂಪನಿಗಳಿಗೆ 7200 ಕೋಟಿ ರೂ. ಗಳನ್ನು ಒದಗಿಸಲಾಗಿದೆ ಎಂದು ಕುಮಾರಸ್ವಾಮಿ ನುಡಿದರು.
ಆದರ್ಶ ಕೆಮಿಕಲ್ಸ್‍ನ ಮಾಲೀಕ ಓಂಕಾರ ಮೂರ್ತಿ ಮಾತನಾಡಿ, ಕಳೆದ 15 ವರ್ಷಗಳಿಂದ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಆದರ್ಶ ಸೂಪರ್ ಸ್ಪೆಷಾಲಿಟಿ ಕೆಮಿಕಲ್ಸ್ ಘಟಕವು ಪರಿಸರ ಸ್ನೇಹಿಯಾಗಿದ್ದು, ಶೇ.90ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. ಸಮುದಾಯ ಸೇವಾ ನಿಧಿಯಿಂದ ಸುತ್ತ-ಮುತ್ತಲ ಗ್ರಾಮಗಳ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ಹಾಗೂ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದು, ಹೊಸ ಉತ್ಪಾದನಾ ಘಟಕದಿಂದಲೂ ಸಹ ಈ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವುದಾಗಿ ತಿಳಿಸಿದರು.
ವಸಂತನರಸಾಪುರ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ವಿ. ಹರೀಶ್ ಮಾತನಾಡಿ, ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಸಲುವಾಗಿ ಅಸೋಸಿಯೇಷನ್‍ನಿಂದ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ತೆರೆಯಲು ಆರ್ಥಿಕ ಸಹಕಾರ ನೀಡಲಾಗುವುದು ಎಂದು ಕೇಂದ್ರ ಕೈಗಾರಿಕಾ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಆದರ್ಶ ಕೆಮಿಕಲ್ಸ್‍ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಅಕ್ಷಯ್, ಅನೂಫ್, ಮತ್ತಿತರರಿದ್ದರು.

(Visited 1 times, 1 visits today)