ತುಮಕೂರು: ಕಟ್ಟಡ ಕಾರ್ಮಿಕರ ಹಿತಕ್ಕೆ ಸ್ಥಾಪಿತಗೊಂಡ ಕಲ್ಯಾಣ ಮಂಡಳಿ ಇಂದು ಆಳುವ ಸರ್ಕಾರದ ಲೂಟಿಗೆ ಬಲಿಯಾಗುತ್ತಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ. ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ೪ ಕಾರ್ಮಿಕರ ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಕಲ್ಯಾಣ ಮಂಡಳಿಗಳನ್ನು ನಾಶ ಪಡಿಸುತ್ತಿದೆ. ರಾಜ್ಯದಲ್ಲಿ ಸಂಗ್ರಹವಾಗಿರುವ ಸೆಸ್ ಹಣ ಸ್ಥಳೀಯ ಸಂಸ್ಥೆಗಳಲ್ಲೇ ಕೊಳೆಯುತ್ತಿದೆ. ಬಾಕಿ ಸೌಲಭ್ಯಗಳನ್ನು ಕಲ್ಯಾಣ ಮಂಡಳಿ ಕಾರ್ಮಿಕರಿಗೆ ನೀಡದೆ ವಂಚಿಸುತ್ತಿದೆ. ವೈಧ್ಯಕೀಯ ತಪಾಸಣೆ, ಕಿಟ್ ಖರೀದಿ, ಕೌಶಲ್ಯ ಕೇಂದ್ರಗಳ ನಿರ್ಮಾಣ ಸೇರಿದಂತೆ ಮುಂತಾದ ಹೆಸರಿನಲ್ಲಿ ಕಲ್ಯಾಣ ಮಂಡಳಿಯ ಹಣ ಲೂಟಿಯಾಗುತ್ತಿದೆ. ಇದರ ವಿರುದ್ಧ ರಾಜ್ಯಾಧ್ಯಂತ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಕಾರ್ಮಿಕರು ಸಮಘಟಿತರಾಗುವ ಮೂಲಕ ಹೋರಾಟದ ಮೂಲಕ ಕಾರ್ಮಿಕ ಸ್ನೇಹಿ ಕಲ್ಯಾಣ ಮಂಡಳಿಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಟಿ.ಎಂ. ಗೋವಿಂದರಾಜು ಮಾತನಾಡಿ ನಿವೃತ್ತರ ಪಿಂಚಣಿ ಹಣವನ್ನು ರೂ. ೫ ಸಾವಿರಕ್ಕೆ, ಕುಟುಂಬ ಪಿಂಚಣಿಯನ್ನು ಮೂರು ಸಾವಿರಕ್ಕೆ ಹೆಚ್ಚಿಸಬೇಕು ಎಂದರು ಸಂಘದ ಖಜಾಂಚಿ ಇಂಬ್ರಾಹಿA ಖಲೀಲ್ ಮಾತನಾಡಿ ಮಡಳಿಯ ತೀರ್ಮಾನಗಳು ಕಾರ್ಮಿಕ ವಿರೋದಿಯಾಗಿದ್ದು ನವೀಕರಣ ಹಾಗೂ ನೊಂದಣೆಗೆ ಹೆಚ್ಚಿಸಿರುವ ಹಣವನ್ನು ಕಡಿಮೆ ಮಾಡಬೇಕು ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್ ಮಾತನಾಡಿ ೫೦ ಲಕ್ಷ ಮೇಲ್ಪಟ್ಟ ಕಾಮಗಾರಿಯ ಕಾರ್ಮಿಕರು ಮಾತ್ರ ಮಂಡಳಿಯ ಸೌಲಭ್ಯ ನೀಡಬೇಕೆನ್ನುವ ನಿಬಂಧನೆಯ ಚರ್ಚೆ ಅವೈಜ್ಞಾನಿಕವಾಗಿದೆ. ಯಾವುದೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು ಪ್ರತಿನಿತ್ಯ ತೆರಿಗೆಗಳನ್ನು ಸರ್ಕಾರದ ಖಜಾನೆಗೆ ತುಂಬುವುದನ್ನು ಗಮನಿಸಿ ಎಲ್ಲ ಕಾರ್ಮಿಕರಿಗೂ ಮಂಡಳಿಯ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದರು.
ಉಪಾಧ್ಯಕ್ಷ ಶಂಕರಪ್ಪ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಗುಬ್ಬಿ ತಾಲ್ಲೂಕು ಚಿಕ್ಕಣ್ಣ, ಪ್ರಕಾಶ್, ಪಾವಗಡ ತಾಲ್ಲೂಕು ರಾಮಾಂಜೀನಿ, ರಾಮಾಂಜೀನಪ್ಪ, ರಾಮಲಿಂಗಪ್ಪ, ಮಧುಗಿರಿ ತಾಲ್ಲೂಕು ಕೊಂಡಪ್ಪ, ಹನುಮಂತರಾಯಪ್ಪ, ತುಮಕೂರು ತಾಲ್ಲೂಕು, ನಾಗರಾಜು, ಶ್ರೀನಿವಾಸ್, ಎಲ್.ಸಿದ್ದರಾಜು, ಮುಂತಾದವರು ವಹಿಸಿದ್ದರು. ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಸಚಿವರಿಗೆ ಮನವಿಉ ಪತ್ರ ಸಲ್ಲಿಸಲಾಯಿತು.

(Visited 1 times, 1 visits today)