ತುಮಕೂರು: ಎಲ್ಲಾ ಹಂತದ ನೌಕರರ ಹೊರಗುತ್ತಿಗೆ ನೇಮಕಾತಿ ರದ್ದು, ಬಡ್ತಿ ಒಪ್ಪಂದ ರದ್ದು ಏಕಪಕ್ಷೀಯವಾಗಿ ನಿರ್ಧಾರ ವಿರೋಧಿಸಿ,ಮರು ಸ್ಥಾಪನೆಗೆ ಒತ್ತಾಯಿಸಿ, ವಾರ್ಷಿಕ ಕಡ್ಡಾಯ ರಜೆಯನ್ನು ವಿಶೇಷ ರಜೆ ಎಂದು ಪರಿಗಣಿಸುವುದು ಹಾಗೂ ಇನ್ನಿತರ ಹತ್ತಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ ೧೮ ರಂದು ಅಲ್ ಇಂಡಿಯಾ ಕರ್ನಾಟಕ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಂಕ್ ಅಫೀಸಸ್ಸ್ ಆರ್ಗನೈಸೇಶನ್ ವತಿಯಿಂದ ಒಂದು ದಿನದ ರಾಷ್ಟಿçÃಯ ಮುಷ್ಕರ ಕೈಗೊಂಡಿರುವುದಾಗಿ ಎಕೆಬಿಇಎ ನ ಫಣೀಂದ್ರ ಹಾಗು ಕೆಬಿಒಒನ ಸುರೇಶ್ ಹೆಗಡೆ ತಿಳಿಸಿದ್ದಾರೆ.
ತುಮಕೂರಿನ ಸದಾಶಿವ ನಗರದಲ್ಲಿರುವ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಅವರಣದಲ್ಕಿ ನವೆಂಬರ್ ೧೮ ರ ಮುಷ್ಕರದ ಪೂರ್ವ ಭಾವಿ ಸಭೆಯಲ್ಲಿ ನವೆಂಬರ್ ೧೮ರ ಮುಷ್ಕರದ ಪೋಸ್ಟರ್ ಬಿಡುಗಡೆ ಮಾಡಿ,ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನೌಕರರಿಗೆ ಪಾನಿಯ ವಿತರಿಸಿ ಮಾತನಾಡಿದ ಅವರು,ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿಗೆ? ಅಲ್ ಇಂಡಿಯಾ ಕರ್ನಾಟಕ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಂಕ್ ಅಫೀಸರ್ಸ್ ಅರ್ಗೆÊನೈಜೆಷನ್ ನೀಡಿರುವ ಬೇಡಿಕೆಗಳು ನೌಕರರ ಪರವಾಗಿದ್ದು, ನ್ಯಾಯಯುತ ಬೇಡಿಕೆಗಳೇ ಆಗಿವೆ.ಹಾಗಾಗಿ ಮ್ಯಾನೇಜ್ಮೆಂಟಿನ ಯಾವ ಸುತ್ತೊಲೆಗಳಿಗೆ ತಲೆ ಕಡೆಸಿಕೊಳ್ಳದೆ ಮುಷ್ಕರ ಮಾಡುವುದಾಗಿ ತಿಳಿಸಿದರು.
ಕಾರ್ಮಿಕ ಕಾಯ್ದೆಯ ಅನ್ವಯ ಬ್ಯಾಂಕಿನ ಆಡಳಿತ ಮಂಡಳಿಗೆ ೪೫ ದಿನಗಳ ಮುಂಚಿತವಾಗಿಯೇ ಮುಷ್ಕರದ ನೊಟೀಸ್ ನೀಡಲಾಗಿದೆ.ಆದರೆ ಇದರ ಬಗ್ಗೆ ಮಂಡಳಿ ನಿರ್ಲಕ್ಷ ತೋರಿದೆ.ಮಾತುಕತೆಗೆ ಕರೆದ ಸಂದರ್ಭದಲ್ಲಿಯೂ ತಮ್ಮ ಕಡೆಯಿಂದ ಆಗಿರುವ ತಪುö್ಪಗಳನ್ನು ಒಪ್ಪಿಕೊಳ್ಳದೆ ಸಮರ್ಥಿಸಿಕೊಂಡು, ಅವುಗಳನ್ನೇ ಜಾರಿಗೆ ತರುವ ಪ್ರಸ್ತಾಪ ಮುಂದಿಟ್ಟಿದೆ.ಹಾಗಾಗಿ ಮುಷ್ಕರ ಅನಿವಾರ್ಯ.ನಮ್ಮ ಸಂಘಟನೆ ಸ್ಥಾಪನೆಗೊಂಡು ೬೦ ವರ್ಷಗಳು ಕಳೆದಿದ್ದರೂ ಇದುವರೆಗೂ ನಾವು ಒಂದು ಮುಷ್ಕರವನ್ನು ಮಾಡಿಲ್ಲ.ಆದರೆ ಈಗ ಮುಷ್ಕರ ಅನಿವಾರ್ಯ ಏಕೆಂದರೆ ಅಡಳಿತ ಮಂಡಳಿ ತೆಗೆದುಕೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳು ನೌಕರರ ಸ್ನೇಹಿಯಾಗದೆ, ಮಾರಕವಾಗಿವೆ. ಹಾಗಾಗಿ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಅಗತ್ಯ.ಕಳೆದ ೧೦ ತಿಂಗಳಿನಿAದಲೂ ನಮ್ಮ ಬೇಡಿಕೆಗಳನ್ನು ಆಡಳಿತ ಮಂಡಳಿಯ ಮುಂದಿಟ್ಟರೂ ಅವರು ನಿರ್ಲಕ್ಷ ತೋರುತಿದ್ದಾರೆದ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡ್ತಿ ಒಪ್ಪಂದ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವೆ ನಡೆದ ಜಂಟಿ ಒಪ್ಪಂದವಾಗಿದೆ.ಆದರೆ ಏಕಾಎಕಿ ಒಪ್ಪಂದವನ್ನು ರದ್ದುಗೊಳಿಸುವ ಸುತ್ತೊಲೆ ಹೊರಡಿಸಿದೆ.ಕಾರ್ಮಿಕ ಕಾಯ್ದೆ ಅನ್ವಯ ಒಂದು ದ್ವಿಪಕ್ಷೀಯ ಒಪ್ಪಂದ ರದ್ದಾಗುವುದು ಹೊಸ ಒಪ್ಪಂದವೊAದಕ್ಕೆ ಸಹಿ ಹಾಕಿದಾಗ ಮಾತ್ರ. ಒಪ್ಪಂದ ಕಾಲಾವಧಿ ಮುಗಿಯಿತು ಎಂದ ಕಾರಣಕ್ಕೆ ಅಲ್ಲ. ಇದನ್ನು ಸುಪ್ರಿಂಕೋರ್ಟಿನ ಹಲವು ತೀರ್ಪುಗಳು ಹೇಳಿವೆ.ಆದರೆ ಆಡಳಿತ ಮಂಡಳಿ ತನ್ನ ಮೊಂಡುತನವನ್ನು ಪ್ರದರ್ಶಿಸುತ್ತಿದೆ.ಇದರ ವಿರುದ್ದ ಮುಷ್ಕರ ಬೇಡವೇ ಎಂದು ಎಂದು ಫಣೀಂದ್ರ ಕೆ.ಬಿ. ಮತ್ತು ಸುರೇಶ್ ಹೆಗಡೆ ನೌಕರರನ್ನು ಪ್ರಶ್ನಿಸಿದರು.
ನೀವು ಇಂದು ಒಂದು ದಿನದ ವೇತನ ಕಟ್ಟಾಗುತ್ತದೆ ಎಂದು ಮುಷ್ಕರದಿಂದ ಹಿಂದೆ ಸರಿದರೆ, ಮುಂದೆಯೇ ನಿಮಗೆ ಉದ್ಯೋಗವೇ ಇಲ್ಲದಾಗಬಹುದು. ಈ ಎಚ್ಚರ ನಿಮಗೆ ಇರಲಿ ಎಂದ ಕಾರ್ಮಿಕ ಮುಖಂಡರುಗಳು,ಕರ್ನಾಟಕ ಬ್ಯಾಂಕಿನ ದಿನಗೂಲಿ ನೌಕರರ ಶೋಷಣೆ ಮಿತಿ ಮೀರಿದೆ.ಕಳೆದ ೧೦-೧೨ ವರ್ಷಗಳಿಂದ ಅವರು ಹಗಲಿರುಳು ದುಡಿಯುತಿದ್ದಾರೆ. ಇಂದಲ್ಲ, ನಾಳೆ ನಮ್ಮ ಸೇವೆ ಖಾಯಂ ಆಗಬಹುದು ಎಂದು ಅಡಳಿತ ಮಂಡಳಿ ಹೇಳಿದ ಎಲ್ಲಾ ಕೆಲಸಗಳನ್ನು ಮಾಡುತಿದ್ದಾರೆ.ಆದರೆ ಕಳೆದ ೧೨ ವರ್ಷಗಳಿಂದ ಅವರ ಮನವಿಗಳಿಗೆ ಅಡಳಿತ ಮಂಡಳಿ ಸ್ಪಂದಿಸಿಯೇ ಇಲ್ಲ.ಕೆಲವು ಕಡೆಗಳಲ್ಲಿ ದಿನಗೂಲಿ ನೌಕರರೇ ಇಲ್ಲ. ಹೊಸ ನೌಕರರನ್ನು ತುಂಬಿಲ್ಲ.ಮೊದಲು ಕೇಂದ್ರಿಕೃತವಾಗಿದ್ದ ನೌಕರರ ವರ್ಗಾವಣೆಯನ್ನು ಈಗ ಪ್ರಾದೇಶಿಕ ಹಂತಕ್ಕೆ ತಂದು, ನೌಕರರ ಶೋಷಣೆಗೆ ಒಳಗಾಗುವಂತೆ ಮಾಡಿದೆ. ಹಾಗಾಗಿ ಕೂಡಲೇ ಹೊಸ ವರ್ಗಾವಣೆ ನೀತಿ ರದ್ದಾಗಬೇಕು. ಹಾಗೆಯೇ ಶಿಕ್ಷೆಯ ರೂಪದಲ್ಲಿರುವ ಕಡ್ಡಾಯ ರಜೆಯನ್ನು ವಿಶೇಷ ರಜೆ ಎಂದು ಪರಿಗಣಿಸಿ, ನೌಕರರ ಹಿತ ಕಾಯಬೇಕು.ನಿಗಧಿತ ಗುರಿ ತಲುಪಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡುವುದರಿಂದ ಕೆಲಸದಲ್ಲಿ ಪ್ರಗತಿ ಕಾಣಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕ ಬ್ಯಾಂಕ್ ಅಡಳಿತ ಮಂಡಳಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ ೧೮ ರ ಮುಷ್ಕರ ನಡೆಯಲಿದ್ದು, ಎಲ್ಲಾ ನೌಕರರ ತಮ್ಮ ವ್ಯಾಪ್ತಿಯ ಪ್ರಾದೇಶಿಕ ಕಚೇರಿಯ ಮುಂದೆ ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಫಣೀಂದ್ರ ಕೆ.ಬಿ. ಮತ್ತು ಸುರೇಶ ಹೆಗಡೆ ನೌಕರರು ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ವೇಳೆ ಅಲ್ ಇಂಡಿಯಾ ಕರ್ನಾಟಕ ಬ್ಯಾಂಕ ಎಂಪ್ಲಾಯಿಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಂಕ್ ಅಫೀಸರ್ಸ್ ಅರ್ಗನೈಜೇಷನ್ನ ಕೇಂದ್ರ ಸಮಿತಿ ಸದಸ್ಯರಾದ ಅಜಯ್.ಬಿ.ಜಿ., ಸಂದೀಪ್.ಪಿ.ಆರ್,ಎಐಕೆಬಿಇಎ ಉಪಾಧ್ಯಕ್ಷ ಸುಧೀಂದ್ರ ಎಂ.,ಕೇAದ್ರ ಸಮಿತಿ ಸದಸ್ಯ ನಾರಾಯಣರಾವ್.ಜಿ.ವಿ ಹಾಗೂ ನೂರಾರು ನೌಕರರ ಪಾಲ್ಗೊಂಡಿದ್ದರು.
(Visited 1 times, 1 visits today)



