ತುಮಕೂರು: ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಸಂಗ್ರಹಿಸುವುದಷ್ಟೇ ಮುಖ್ಯವಲ್ಲ, ಲಭ್ಯವಿರುವ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ವೈಜ್ಞಾನಿಕವಾಗಿ ಸಂಶೋಧನೆ ನಡೆಸುವ ಕೌಶಲವನ್ನೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ಸಂಶೋಧನೆಗೆ ಪೂರಕವಾದ ವಿವಿಧ ಡಿಜಿಟಲ್ ಟೂಲ್ಸ್, ಸಾಫ್ಟ್ವೇರ್ಗಳು ಮತ್ತು ತಂತ್ರಜ್ಞಾನಗಳ ಬಳಕೆಯ ಕುರಿತು ಜ್ಞಾನ ಹೊಂದುವುದು ಅಗತ್ಯ ಎಂದು ಕುವೆಂಪು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಕೆ. ಟಿ. ಸಂತೋಷ್ ಕುಮಾರ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಗ್ರಂಥಾ ಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ವತಿಯಿಂದ ರಾಷ್ಟಿçÃಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಬಿಡರಕಟ್ಟೆಯ ಜ್ಞಾನಸಿರಿ ಆವರಣದಲ್ಲಿ ನ.೧೭ ಮಂಗಳವಾರದAದು ಆಯೋಜಿಸಿದ್ದ ಮುಕ್ತ ದಿನ, ಬಿತ್ತಿಚಿತ್ರ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಮತ್ತು ಸಂಶೋಧಕರು ಕೇವಲ ಅಂತರ್ಜಾಲದಲ್ಲಿ ದೊರೆಯುವ ಮಾಹಿತಿಯನ್ನೇ ಅವಲಂಬಿಸದೆ, ಅಧಿಕೃತ ಶೈಕ್ಷಣಿಕ ಮೂಲಗಳು, ಸಂಶೋಧನಾ ಜರ್ನಲ್ಗಳು ಮತ್ತು ವಿಶ್ವಾಸಾರ್ಹ ಡೇಟಾಬೇಸ್ಗಳನ್ನು ಬಳಸಬೇಕು. ಉಲ್ಲೇಖ ನಿರ್ವಹಣೆ, ಸಂಶೋಧನಾ ಪ್ರಬಂಧಗಳ ಸಿದ್ಧತೆ, ಮಾಹಿತಿ ವಿಶ್ಲೇಷಣೆ ಹಾಗೂ ಡಿಜಿಟಲ್ ಸಂಪನ್ಮೂಲಗಳ ಸಮರ್ಪಕ ಬಳಕೆಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ತುಮಕೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ರೂಪೇಶ್ ಕುಮಾರ್ ಎಂ. ಅವರು ಮಾತನಾಡಿ ಗ್ರಂಥಾಲಯಗಳು ಪುಸ್ತಕಗಳನ್ನು ಓದುವ ಸ್ಥಳಗಳಷ್ಟೇ ಅಲ್ಲದೆ, ಜ್ಞಾನ ಸಂಪಾದನೆ, ಮಾಹಿತಿ ಸಂಶೋಧನೆ ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆಗೆ ನೆರವಾಗುವ ಕೇಂದ್ರಗಳಾಗಿವೆ. ಇಂತಹ ಮುಕ್ತ ದಿನ ಮತ್ತು ಪ್ರಾತ್ಯಕ್ಷಿಕೆಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗ್ರಂಥಾಲಯದ ಆಧುನಿಕ ಸೌಲಭ್ಯಗಳನ್ನು ಪರಿಚಯಿಸುವುದರ ಜೊತೆಗೆ ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿವೆ ಎಂದರು.
ಹಿರಿಯ ಪ್ರಾಧ್ಯಾಪಕರಾದ ಡಾ. ಕೇಶವ, ಡಾ. ಬಿ. ಟಿ. ಸಂಪತ್ ಕುಮಾರ್, ಸಹ ಪ್ರಾಧ್ಯಾಪಕರಾದ ಡಾ. ಹೇಮಾವತಿ ಬಿ. ಎನ್., ಡಾ. ರಾಜೇಂದ್ರ ಬಾಬು ಎಚ್., ಜೈವಿಕ ತಂತ್ರಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ.ವಿ.ದ್ವಾರಕನಾಥ್ ಇದ್ದರು.
(Visited 1 times, 1 visits today)



