ತುಮಕೂರು: ಆಚಾರ್ಯ ತ್ರಯರಲ್ಲಿ ಒಬ್ಬರಾದ ವಿಶಿಷ್ಟಾದೈತ ಸಿದ್ದಾಂತದ ಪ್ರತಿಪಾದಕ ಶ್ರೀರಾಮಾನುಜಾಚಾರ್ಯರು, ಬಸವಣ್ಣನವರಿಗಿಂತ ಮೊದಲೇ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಮ ಸಮಾಜದ ಕನಸು ಕಂಡಿದ್ದರೂ ಎಂದು ಹಂಪಿ ವಿವಿಯ ಕುಲಪತಿ ಡಾ.ಎಂ.ಪರಮಶಿವಮೂರ್ತಿ ಪ್ರತಿಪಾದಿಸಿದ್ದಾರೆ.
ನಗರ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ತುಮಕೂರು, ಶಾಸ್ತಿçÃಯ ಕನ್ನಡ ವೇದಿಕೆ, ಬೆಂಗಳೂರು, ಜಿಲ್ಲಾ ಶ್ರೀವೈಷ್ಣವ ಮಹಾಸಭಾ, ತುಮಕೂರು ವತಿಯಿಂದ ಆಯೋಜಿಸಿದ್ದ ಶ್ರೀರಾಮಾನುಜಾಚಾರ್ಯರ ಸಹಸ್ರಮಾನದ ನೆನಪು, ಕರ್ನಾಟಕದಲ್ಲಿ ಶ್ರೀರಾಮಾನುಜಾಚಾರ್ಯರ ಸಾಮಾಜಿಕ ಕೊಡುಗೆಗಳು, ಶಾಸ್ತಿçÃಯ ಕನ್ನಡ ಸಮಾವೇಶಕ್ಕೆ ಚಾಲನೆ ನೀಡಿ, ಶಾಸನಗಳಲ್ಲಿ ರಾಮಾನುಜಾಚಾರ್ಯರು ಎಂಬ ವಿಷಯ ಮಂಡಿಸಿ ಮಾತನಾಡುತಿದ್ದ ಅವರು, ಹಮಾಮ್ ಕೋಂ ಜನರಿಗೆ ದಾಸ ದೀಕ್ಷೆ ನೀಡುವ ಮೂಲಕ ಎಲ್ಲಾ ಕಾಯಕ ಸಮುದಾಯಗಳು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳಲು ದೇವಾಲಯದ ಆವರಣವನ್ನು ಪ್ರವೇಶಿಸುವ ಅವಕಾಶ ಕಲ್ಪಿಸಿದ್ದರು. ಹಾಗಾಗಿ ಶ್ರೀರಾಮಾನುಜಾಚಾರ್ಯರನ್ನು ಕೇವಲ ಧಾರ್ಮಿಕ ವ್ಯಕ್ತಿಯಾಗಿ ನೋಡದೆ, ಸಮಾಜ ಸುಧಾರಕರಾಗಿಯೂ ಅಧ್ಯಯನ ಮಾಡುವ ಅಗತ್ಯವಿದೆ ಎಂದರು.
ಶ್ರೀರಾಮಾನುಜಾಚಾರ್ಯ ಅವರಿಗೆ ಹೊಯ್ಸಳ ಅರಸ ಬಿಟ್ಟಿದೇವ, ಶ್ರೀವೈಷ್ಣವ ಧರ್ಮಕ್ಕೆ ಮತಾಂತರಗೊAಡು, ವಿಷ್ಣುವರ್ಧನಾಗಿ ಪರಿವರ್ತನೆಗೊಂಡ ನಂತರ ನಿರ್ಮಾಣವಾದ ಅನೇಕ ದೇವಾಲಯಗಳು, ಆಚಾರ್ಯರ ಕೊಡುಗೆಗಳನ್ನು ತಿಳಿಸುತ್ತವೆ. ಅನೇಕ ರಾಜರುಗಳು ಇವರಿಗೆ ದತ್ತಿ ನೀಡಿದ್ದಾರೆ.ಟಿಪುö್ಪ ಸುಲ್ತಾನ್ ಸಹ ಮೇಲುಕೋಟೆಯ ಚಲುವನಾರಾಯಣನ ಸೇವೆಗಾಗಿ ೨ ಗಂಡು ಮತ್ತು ೧೦ ಹೆಣ್ಣಾನೆಗಳು ಸೇರಿ ೧೨ ಆನೆಗಳನ್ನು ದೇವಾಲಯಕ್ಕೆ ಕೊಡುಗೆ ನೀಡಿದ್ದ ಎಂದು ಶಾಸನಗಳು ತಿಳಿಸಿವೆ.ಜಾತಿ ಭೇಧವಿಲ್ಲದೆ ಎಲ್ಲ ಸಮುದಾಯದವರಿಗೂ ದಾಸಯ್ಯನ ದೀಕ್ಷೆ ನೀಡಿ, ಶ್ರೀವೈಷ್ಣವ ಪಂಥಕ್ಕೆ ಸೇರ್ಪಡೆಗೊಳ್ಳುವಂತೆ ಮಾಡಿದ್ದರು ಎಂದು ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.
ಶ್ರೀರಾಮಾನುಜಾಚಾರ್ಯರ ಸಹಸ್ರಮಾನದ ನೆನಪು ಕಾರ್ಯಕ್ರಮದ ಆಶಯ ಭಾಷಣ ಮಾಡಿದ ಹಿರಿಯ ವಿದ್ವಾಂಸ ಡಾ.ನಾ.ಗೀತಾಚಾರ್ಯ, ಶಾಸ್ತಿçÃಯ ಕನ್ನಡ ವೇದಿಕೆಯ ಮೂರು ವರ್ಷಗಳ ಕನಸು ಇಂದು ನನಸಾಗಿದೆ. ೨೦೧೭ ರಿಂದಲೂ ನಮ್ಮ ಸಂಸ್ಥೆಯ ಶ್ರೀರಾಮಾನುಜಾಚಾರ್ಯರ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.ದಾಸಯ್ಯನ ಪರಂಪರೆಯ ಮೂಲಕ ವೈದೀಕರಿಗೆ ಸಿಮಿತವಾಗಿದ್ದ ದೇವಾಲಯ ಪ್ರವೇಶವನ್ನು ಜನಸಾಮಾನ್ಯರಿಗೂ ಕಲ್ಪಿಸಿದ ಕೀರ್ತಿ ರಾಮಾನುಜಾಚಾರ್ಯರಿಗೆ ಸಲ್ಲಬೇಕು.ಅವರು ಶ್ರೀರಂಗA ನ ದೇವಾಲಯದ ಆವರಣದಲ್ಲಿಯೇ ೧೮ ಕೋಮಿನ ಜನರು ತಮ್ಮ ಕುಲಕಸುಬು ಮಾಡಿಕೊಂಡು ದೇವಾಲಯದ ಆವರಣದಲ್ಲಿರಲು ಅವಕಾಶ ಕಲ್ಪಿಸಿದ್ದರು.ರಾಮಾನಾಥಪುರದ ಮೂಲಕ ಕರ್ನಾಟಕ ಪ್ರವೇಶಿಸಿ, ತೊಣ್ಣೂರು,ಸಾಲಿಗ್ರಾಮ, ಮೇಲುಕೋಟೆ ಮುಂತಾದ ಕಡೆಗೆ ೨೬ ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿದ್ದರು.ಅವರ ಕೊಡುಗೆಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಸಂಶೋಧಕ ಹಾಗೂ ಆಯುರ್ವೇದ ವೈದ್ಯ ಡಾ.ನಂಜುAಡಸ್ವಾಮಿ,ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಶ್ರೀರಾಮಾನುಜಾಚಾರ್ಯರು ದೃವ ನಕ್ಷತ್ರದಂತೆ ಬೆಳಗಿದವರು.ಅವರ ಸ್ಥಾಪಿಸಿದ ಶ್ರೀವೈಷ್ಣವ ಪಂಥ ಇಂದಿಗೂ ಗ್ರಾಮೀಣ ಭಾಗದಲ್ಲಿ ಹಚ್ಚ ಹಸುರಾಗಿದೆ.ಹರಿಸೇವೆ, ಕಂಬದ ಆಚರಣೆಗಳು ಇಂದಿಗೂ ಜೀವಂತವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕರ್ನಾಟಕದಲ್ಲಿ ಶ್ರೀರಾಮಾನುಜಾಚಾರ್ಯರು ಎಂಬ ವಿಚಾರ ಸಂಕಿರಣದ ಹಿನ್ನೆಲೆಯಲ್ಲಿ ದಾಸಯ್ಯಗಳ ಸಮ್ಮೇಳನ ಮಾಡಬೇಕೆಂಬ ಆಸೆಯಿಂದ ಸಮೀಕ್ಷೆ ಕೈಗೊಂಡಾಗ ತುಮಕೂರಿನಲ್ಲಿರುವ ದಾಸಯ್ಯಗಳ ಬಹು ದೊಡ್ಡ ಪಟ್ಟಿಯೇ ಸಿದ್ದಗೊಂಡಿತ್ತು.ಆದರೆ ಸಮಯದ ಅಭಾವ ಮತ್ತು ಇನ್ನಿತರ ಕಾರಣಗಳಿಂದ ಅದು ಕೈಗೂಡಲಿಲ್ಲ.ಹಾಗಾಗಿ ಇಂದಿನ ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ಎಲ್ಲಾ ಪ್ರಬಂಧಗಳನ್ನು ಒಂದು ಪುಸ್ತಕ ರೂಪದಲ್ಲಿ ಹೊರ ತಂದರೆ ಶ್ರೀರಾಮಾನುಜಾಚಾರ್ಯರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಮತ್ತು ಹೆಚ್ಚು ಜನರನ್ನು ತಲುಪಲಿದೆ. ಇದಕ್ಕೆ ಕಸಾಪ ಸಹ ಸಹಕಾರ ನೀಡಲಿದೆ ಎಂದರು.
ಲೇಖಕಿ ಹಾಗೂ ವೈದ್ಯೆ ವಿಜಯಲಕ್ಷಿö ಬಾಳೆಕುಂದ್ರಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಶ್ರೀವೈಷ್ಣವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಲಕ್ಷಿಕಾಂತ್.ಟಿ.ಹೆಚ್, ಗೌರವಾಧ್ಯಕ್ಷರಾದ ರಘು.ಎಸ್.ಎನ್, ಎನ್.ರಂಗಾಚಾರ್ಯ ಉಪಸ್ಥಿತರಿದ್ದರು.
ಶ್ರೀರಾಮಾನುಜಾಚಾರ್ಯರ ಸಹಸ್ರಮಾನದ ನೆನಪು ಕಾರ್ಯಕ್ರಮದ ಅಂಗವಾಗಿ ಡಾ.ಡಿ.ವಿ.ಪರಮಶಿವಮೂರ್ತಿ, ಶಾಸನಗಳಲ್ಲಿ ರಾಮಾನುಜಾಚಾರ್ಯರು, ಡಾ.ನಾ.ಗೀತಾಚಾರ್ಯ ಶ್ರೀರಾಮಾನುಜಾಚಾರ್ಯರು ಮತ್ತು ಸಮಾಜ ಸುಧಾರಣೆ,ಹಿರಿಯ ಶಾಸನ ತಜ್ಞರಾದ ಡಾ.ಪಿ.ವಿ.ಕೃಷ್ಣಮೂರ್ತಿ ದೇವಾಲಯ ಶಿಲ್ಪಕಲೆಗಳಲ್ಲಿ ಶ್ರೀರಾಮಾನುಜಾಚಾರ್ಯ, ಕನ್ನಡ ಅಧ್ಯಾಪಕರಾದ ಡಾ.ಕೆ.ನಳಿನ ಅವರ ಹರಿದಾಸ ಸಾಹಿತ್ಯದಲ್ಲಿ ಶ್ರೀರಾಮಾನುಜಾಚಾರ್ಯ ಎಂಬ ವಿಷಯ ಮಂಡಿಸಿ ಮಾತನಾಡಿದರು.

(Visited 1 times, 1 visits today)