ತುರುವೇಕೆರೆ: ತಾಲ್ಲೂಕಿನ ಎ.ಹೊಸಹಳ್ಳಿ ಗ್ರಾಮದ ಸಮೀಪದ ಭಾಣಸಂದ್ರ ಹಾಗೂ ಕರಡಿ ರೈಲ್ವೆ ನಿಲ್ದಾಣ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ ೭೨ ಬದಲಿಗೆ ಕೆಳ ಸೇತುವೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ನಾನು ಸುಮಾರು ೫೦ ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದು ಎರಡು ಭಾರಿ ಕಾರ್ಪೊರೇಟ್ ೫ ಭಾರಿ ಶಾಸಕ ೨ ಭಾರಿ ಎಂಎಲ್.ಸಿ ಯಾಗಿ ಕೆಲಸ ಮಾಡಿ ಎರಡು ಕ್ಷೇತ್ರದಲ್ಲಿ ಸೋತು ನಂತರ. ನಿಮ್ಮಗಳ ಆಶೀರ್ವಾದಿಂದ ತುಮಕೂರಿನಲ್ಲಿ ಗೆಲವು ಸಾದಿಸಿ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೆನೆ. ತುರುವೇಕೆರೆ ತಾಲೂಕಿನ ಮತದಾರನ್ನು ನನ್ನ ಉಸಿರು ಇರುವರೆವಿಗೂ ಮರೆಯುವುದಿಲ್ಲ. ಅತೀ ಹೆಚ್ಚು ಲೀಡ್ ಕೊಟ್ಟ ಕ್ಷೇತ್ರವಾಗಿದೆ ನಿಮ್ಮ ಮತದ ಶಕ್ತಿಯಿಂದ ಎರಡು ಖಾತೆಯನ್ನು ನಿರ್ವಹಿಸುತ್ತಿದ್ದೇನೆ. ಈಗಾಗಲೇ ಸುಮಾರು ೨೮ ಕೆಳ ಸೇತುವೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಇನ್ನುಳಿದ ಕೆಳ ಸೇತುವೆ ಗಳನ್ನು ಮಾಡಲಾಗುವುದು ಎಂದು ಬರವಸೆ ನೀಡಿದ್ದು ಈ ಎಲ್ಲಾ ಕೆಳ ಸೇತೆವೆ ನಿರ್ಮಿಸಲು ದೇಶದ ಪ್ರದಾನಿ ನರೇಂದ್ರ ಮೋದಿಯವರ ದೂರ ದೃಷ್ಟಿ ಚಿಂತನೆಯಿAದ ಸಾದ್ಯವಾಯಿತು. ಮೋದಲು ಕೆಳ ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಅರ್ದ ಅನುಧಾನ ನೀಡಬೇಕಿತ್ತು ಈ ಹಿನ್ನಲೇ ಸೇತುವೆ ಕಾಮಗಾರಿಗಳು ಸುಮಾರು ೧೦ ವರ್ಷಗಳ ಕಾಲ ವಿಳಂಬವಾಗುತ್ತಿದ್ದವು ಈ ಬಗ್ಗೆ ಪ್ರದಾನಿ ಮೋದಿಜಿಯವರಿಗೆ ವಿವಿರವಾಗಿ ಮಾಹಿತಿ ನೀಡಲಾಗಿ ಮೋದಿಜಿಯವರು ಸೇತುವೆಗಳನ್ನು ಕೇಂದ್ರ ದಿಂದ ಮಾಡಲು ಆದೇಶ ನೀಡಿದರು. ಸುಮಾರು ಎರಡುವರೆ ವರ್ಷಗಳಲ್ಲಿ ಸುಮಾರು ೫೨ಸಾವಿರ ಕೋಟಿ ಕೆಲಸ ಮಾಡಿದ್ದು ಇದರ ಕಾರ್ಯಗಳ ಬಗ್ಗೆ ಪುಸ್ತಕವನ್ನು ಹೊರತರಲಾಗಿದೆ ಎಂದರು.
ಮೈಸೂರು ಕಡೆಗೆ ರೈಲ್ವೆ ಮಾರ್ಗ ಕ್ಕೆ ಸರ್ವೆ ಕಾರ್ಯ: ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಯದುರ್ಗ ತುಮಕೂರು ರೈಲ್ವೆ ಮಾರ್ಗ ವೇಗವಾಗಿ ಮಾಡಲಾಗುತ್ತಿದ್ದು ಪಾವಗಡ ವರೆವಿಗೂ ಕಾಮಗಾರಿ ಮುಗಿದು ರೈಲು ಓಡಾಟ ನೆಡೆಸಲಿದ್ದು ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮೇರೆಗೆ ಮೈಸೂರು ಕಡೆಗೆ ರೈಲ್ವೆ ಕಾಮಗಾರಿ ಸರ್ವೆ ನೆಡೆಸಲಾಗುತ್ತಿದೆ. ಎಂದ ಅವರು ಈ ಭಾಗದಲ್ಲಿನ ರಸ್ತೆ ಅಭಿವೃದ್ಧಿ ಗೆ ಅನುದಾನ ನೀಡುವಂತೆ ಹೆದ್ದಾರಿ ಸಚಿವ ಗಡ್ಕರಿಯವರಿಗೆ ಮನವಿ ನೀಡಲಾಗಿದೆ ಎಂದರು.
ಬಿಜೆಪಿ ಮುಖಂಡನನ್ನು ತಮ್ಮ ಭಾಷಣದಲ್ಲಿ ಬಹಳ ಕಟುವಾದ ಭಾಷೆಯಲ್ಲಿ ಟೀಕಿಸಿದ ಸಚಿವ ಸೋಮಣ್ಣ ಬುರುಡೇಘಟ್ಟ ನಾಗರಾಜ ಶಾಸ್ತಿಗಳನ್ನು ವೇದಿಕೆಯ ಮೇಲೆ ಕರೆದು ಅವರು ಕುಳಿತಿದ್ದ ಚೇರ್ ನಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿ ಆಶೀರ್ವಾದ ಕೋರಿದರು ಇದು ಸಾರ್ವಜನಿಕ ವಲಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಯಿತು.ಬಿಜೆಪಿ ಮುಖಂಡರ ಕಾರ್ಯಕರ್ತರ ಶ್ರಮದಿಂದ ಸಚಿವರಾಗಿದ್ದು ಮತದಾರಿಗೆ ಬೆಲೆ ಇಲ್ಲವೇ ಎಂದು ಮುಖಂಡರು ಮಾತನಾಡಿಕೊಂಡರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಜಯರಾಮ್, ಬಿಜೆಪಿ ಜಿಲ್ಲಾದ್ಯಕ್ಷ ಹೆಬ್ಬಾಕರವಿ, ತಾಲೂಕು ಅದ್ಯಕ್ಷ ಪ್ರಕಾಶ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಹುಚ್ಚಯ್ಯ ರೈಲ್ವೆ ಸಿ.ಇ.ಪ್ರಸಾದ್, ಸಯದ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
(Visited 1 times, 1 visits today)



