ಕೊರಟಗೆರೆ:

      ತನ್ನ ಹೊಲದಲ್ಲಿ ಹುಲ್ಲು ತರಲು ಹೋದಾಗ ಹೆಜ್ಜೇನು ದಾಳಿಗೆ ತುತ್ತಾದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಡೆದಿದೆ.

      ಹೊಳವನಹಳ್ಳಿ ಹೋಬಳಿಯ ಲಂಕೇನಹಳ್ಳಿ ಗ್ರಾಮದ ವೃದ್ದ ಹನುಮಂತರಾಯಪ್ಪ (70) ಎಂಬ ವ್ಯಕ್ತಿ ತನ್ನ ಹೊಲದಲ್ಲಿ ಹುಲ್ಲು ತರಲು ಹೋದಾಗ ಏಕಾಏಕಿ ಮೂರು ಸಾವಿರಕ್ಕೂ ಹೆಚ್ಚು ಹೆಜ್ಜೇನು ಹುಳುಗಳು ದಾಳಿ ಮಾಡಿವೆ.  ಹೆಜ್ಜೇನುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ಮೈ ಮೇಲಿನ ಬಟ್ಟೆ ಬಿಚ್ಚಿ ಹಾಕಿ ಸಮೀಪದಲ್ಲೇ ಇದ್ದ ನೀರಿನ ತೊಟ್ಟಿ ಒಳಗೆ ಧುಮುಕಿದ್ದಾರೆ. ಹೀಗಿದ್ದರೂ ಹೆಜ್ಜೇನು ದಾಳಿ ಮಾಡುವುದನ್ನು ನಿಲ್ಲಿಸಲಿಲ್ಲ. ಅವರ ಚೀರಾಟ, ಕೂಗಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವರನ್ನು ಗ್ರಾಮದೊಳಗೆ ಕರೆದುಕೊಂಡು ಬಂದ್ರು ಬನಿಯನ್ ಒಳಗೆ 10ಕ್ಕೂ ಹೆಚ್ಚು ಹೆಜ್ಜೇನುಗಳು ಇದ್ದುದು ಕಂಡು ಬಂದಿದೆ. ಇದಲ್ಲದೆ ಕೊರಟಗೆರೆ ಆಸ್ಪತ್ರೆಗೆ ಕರೆತಂದರು ಕೂಡ ಅವರ ಒಳ ಉಡುಪಿನಲ್ಲಿ ನಾಲ್ಕು ನೊಣಗಳು ಪ್ರತ್ಯಕ್ಷವಾಗಿದ್ದವು.

       ಕೊರಟಗೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

(Visited 44 times, 1 visits today)