ಚಿಕ್ಕನಾಯಕನಹಳ್ಳಿ:

      ಹೆಚ್.ಡಿ ದೇವೇಗೌಡರು ಪ್ರಧಾನಮಂತ್ರಿಯಾದಾಗ ಜಯಲಲಿತರ ಪಕ್ಷದ ಓಟಿನ ಆಸೆಗಾಗಿ ಕಾವೇರಿ ನೀರನ್ನು ತಮಿಳುನಾಡಿನ ಬಿಟ್ಟಿದ್ದರು ಎಂದು ಶಾಸಕ ಜೆ.ಸಿ ಮಾಧುಸ್ವಾಮಿ ಆರೋಪಿಸಿದರು.

      ಮಂಗಳವಾರ ತಾಲ್ಲೂಕಿನ ಜೆ.ಸಿ ಪುರದಲ್ಲಿ ಶೆಟ್ಟಿಕೆರೆ ಹೋಬಳಿ ಮಟ್ಟದ ಬಿಜೆ.ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಹಿಂದುಳಿದವರ ಬಗ್ಗೆ ದೇವೇಗೌಡರು ಮೊಸಳೆ ಕಣ್ಣೀರು ಹಾಕುತ್ತಾರೆ. ದೇವೇಗೌಡರು ಗೌಡರು ಮೇಲೆ ಬರದಂತೆ ತುಳಿಯುತ್ತಾರೆ.

      ನಾಗೇಗೌಡರು ಮಂತ್ರಿಗಳಾದ ಸಂದರ್ಭದಲ್ಲಿ ಹೇಮಾವತಿ ನಾಲೆಯ ನೀರನ್ನು ಜಿಲ್ಲೆಗೆ ಅಲಾಟ್ ಮಾಡಿದ್ದರು. ದೇವೇಗೌಡರು ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಎಲ್ಲರನ್ನು ಎತ್ತಿ ಕಟ್ಟುತ್ತಿದ್ದಾರೆ ಕುಮಾರಸ್ವಾಮಿಯವರು ಸಂತೋಷಜಯಚಂದ್ರ ಚುನಾವಣೆಗೆ ನಿಲ್ಲದೆ ಹೋಗಿದ್ದರೆ ಸಿ.ಬಿ.ಸುರೇಶ್‍ಬಾಬು ಗೆಲ್ಲುತ್ತಿದ್ದರು. ಇದರಿಂದ ಜೆ.ಸಿಮಾಧುಸ್ವಾಮಿಯವರನ್ನು ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ ಆದರೆ ಕುಮಾರಸ್ವಾಮಿ ಇನ್ನೂ ರಾಜಕಾರಣಕ್ಕೆ ಬರುವ ಮುನ್ನ ನಾನು ವಿಧಾನಸೌಧದ ಮೆಟ್ಟಿಲ್ಲನ್ನು ಹತ್ತಿದ್ದೇನೆ 1962ರಲ್ಲಿ ಹೇಮಾವತಿ ಅಣೇಕಟ್ಟೆ ನಿರ್ಮಿಸಲು ನಿಜಲಿಂಗಪ್ಪನವರು ಶಂಕುಸ್ಥಾಪನೆ ನೆರವೇರಿಸಿದ್ದರು.

      1964ರಲ್ಲಿ ವೀರೇಂದ್ರಪಾಟೇಲರು ಚಾಲನೆ ನೀಡಿದ್ದರು. ಕೆ.ಆರ್.ಎಸ್. ಡ್ಯಾಂನ್ನು ವಿಶ್ವೇಶ್ವರಯ್ಯನವರು ಕಟ್ಟಿದುದ್ದರಿಂದ ಇಂದು ಮಂಡ್ಯ ಜಿಲ್ಲೆ ಉಳಿಯಲು ಸಾಧ್ಯವಾಯಿತು ಎಂದ ಅವರು ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ 8000 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇನೆ ಕಾರಣ ತಮ್ಮ ಮಗನನ್ನು ಸಂಸತ್ತಿಗೆ ಕಳಿಸಲು ಬಿಡುಗಡೆ ಮಾಡಿರಬಹುದು. ತುಮಕೂರು ಜಿಲ್ಲೆಗೆ ತಮ್ಮ ತಂದೆಯನ್ನು ನಿಲ್ಲಿಸುತ್ತಿದ್ದಾರೆ.

      ಕನಿಷ್ಠ 800 ಕೋಟಿ ರೂಪಾಯಿ ಬಿಡುಗಡೆ ಮಾಡಬಹುದಿತ್ತು ಅಲ್ಲವೇ? ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು ಹೆಚ್.ಡಿ ದೇವೇಗೌಡರನ್ನು ನಂಬಿಕೊಂಡವರು ಈಗ ಎಲ್ಲಿದ್ದಾರೆ ಕುರುಬ ಜನಾಂಗದ ಭಾಸ್ಕರಪ್ಪ ಯಾದವ ಸಮಾಜದ ಕೋದಂಡರಾಮಯ್ಯ, ಈಡೀಗ ಸಮಾಜದ ಜಾಲಪ್ಪನವರನ್ನು ಹಿಂದುಳಿದ ವರ್ಗಗಳಿಗೆ ಸೇರಿದ್ದು, ನಮ್ಮ ತಂದೆ ಗೆಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಈ ನಾಯಕರ ಹಿಂದೆ ನಾವೆಲ್ಲ ಇದ್ದು ಗೆಲ್ಲಿಸಿದ್ದೇವೆ ಎಂದ ಅವರು ಜಾಲಪ್ಪನವರನ್ನು ರಶೀದ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದರು ಎಂದರು.

      ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ಮಾತನಾಡಿ ದೇವೇಗೌಡರು ಹಾಸನ ಹಾಗೂ ಹೊಳೆನರಸಿಪುರವೇ ಪ್ರಪಂಚ ಎಂದು ತಿಳಿದುಕೊಂಡಿದ್ದಾರೆ. ತಮ್ಮ ಮೊಮ್ಮಕ್ಕಳನ್ನು ಗೆಲ್ಲಿಸಲು ಕ್ಷೇತ್ರವನ್ನು ಬಿಟ್ಟು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಂದು ನಿಂತಿದ್ದಾರೆ ಹಾಸನ ಹಾಗೂ ಮಂಡ್ಯ ಕ್ಷೇತ್ರಗಳಲ್ಲಿ ತಮ್ಮ ಮೊಮ್ಮಕ್ಕಳಿಗೆ ಬಿಟ್ಟುಕೊಡದೇ ಇದ್ದರೆ ಮೊಮ್ಮಕ್ಕಳು ಹಾಗೂ ಸೊಸೆಯಂದಿರು ಹೊಡೆಯುತ್ತಾರೆ ಎಂಬ ಭಯದಿಂದ ತುಮಕೂರು ಜಿಲ್ಲೆಗೆ ಬಂದು ನಿಂತಿದ್ದಾರೆ.
ಯಾದವ ಸಮಾಜದ ಮುಖಂಡ ಎಂ ಕೃಷ್ಣಪ್ಪನವರನ್ನು ಜೆ.ಡಿ.ಎಸ್ ರಾಜ್ಯಾಧ್ಯಕ್ಷರನ್ನು ಮಾಡಲು ಹಣವಿದೆ ಎಂಬ ಕಾರಣದಿಂದ ತುಮಕೂರು ಲೋಕಸಭೆಗೆ ನಿಲ್ಲಿಸಿ 70ರಿಂದ 80ಕೋಟಿ ಖರ್ಚು ಮಾಡಿ ಒಂದೇ ಒಂದು ಸಲ ಕೃಷ್ಣಪ್ಪನ ಪರವಾಗಿ ಜಿಲ್ಲೆಗೆ ಪ್ರಚಾರ ಮಾಡಲು ಬರಲಿಲ್ಲ ಹಣಕ್ಕೋಸ್ಕರ ಏನನ್ನು ಮಾಡಲು ಹಿಂಜರಿಯುವುದಿಲ್ಲ ಎಂದರು.

      ಕಾರ್ಯಕ್ರಮದಲ್ಲಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್, ಗುಬ್ಬಿಯ ಬೆಟ್ಟಸ್ವಾಮಿ, ತಾಲ್ಲೂಕು ಬಿಜೆ.ಪಿ ಅಧ್ಯಕ್ಷ ಶಶಿಧರ್, ಬರಗೂರು ಬಸವರಾಜು, ಬೇವಿನಹಳ್ಳಿ ಚನ್ನಬಸವಯ್ಯ, ಶಂಕರಲಿಂಗಪ್ಪ, ಶಿವರಾಜ್, ಮಿಲಿಟರಿ ಶಿವಣ್ಣ, ಮತ್ತಿತರರು ಉಪಸ್ಥಿತರಿದ್ದರು.

(Visited 34 times, 1 visits today)