BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ
  • ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು
  • ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ
  • ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ
  • ಅಕ್ಟೋಬರ್ ವೇಳೆಗೆ ತುಮಕೂರಿಗೆ ಎತ್ತಿನ ಹೊಳೆ ನೀರು
  • ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ
  •  ಜು.೨೯ರವರೆಗೆ ಮನೆ-ಮನೆ ಭೇಟಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಯಮಂಗಲಿ ಕೃಷ್ಣ ಮೃಗ ವನ್ಯ ಧಾಮಕ್ಕೆ ಭಾರೀ ಅಗ್ನಿ ಅನಾಹುತ
Trending

ಜಯಮಂಗಲಿ ಕೃಷ್ಣ ಮೃಗ ವನ್ಯ ಧಾಮಕ್ಕೆ ಭಾರೀ ಅಗ್ನಿ ಅನಾಹುತ

By News Desk BenkiyabaleUpdated:March 01, 2021 6:33 pm

ಮಧುಗಿರಿ:

      ತಾಲ್ಲೂಕಿನ ಜಯಮಂಗಲಿ ಕೃಷ್ಣ ಮೃಗ ವನ್ಯ ಧಾಮಕ್ಕೆ ಹೊಂದಿಕೊಂಡಿರುವ ಹುಲ್ಲುಗಾವಲು ಪ್ರದೇಶದಲ್ಲಿ ಭಾನುವಾರ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.

      ಜಯಮಂಗಲಿ ಕೃಷ್ಣ ಮೃಗ ವನ್ಯಜೀವಿ ಧಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಕೃಷ್ಣ ಮೃಗಗಳು ವಾಸಿಸುತ್ತಿವೆ. ರಾಜ್ಯದ ಕೆಲವೇ ಕಡೆಗಳಲ್ಲಿ ಕಂಡು ಬರುವ ಅಪರೂಪದ ಪಕ್ಷಿ ಸಂಪತ್ತುಗಳನ್ನು ಇಲ್ಲಿ ಕಾಣಬಹುದಾಗಿದ್ದು, ದೇಶ ವಿದೇಶಗಳಿಂದ ಪಕ್ಷಿ ಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ.

      ಇಂತಹ ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ನೂರಾರು ಎಕರೆ ಹುಲ್ಲುಗಾವಲು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಬೆಂಕಿಗಾಹುತಿಯಾಗಿರುವ ಪ್ರದೇಶವು ಕೃಷ್ಣ ಮೃಗಗಳು ವಿಹರಿಸುವ ಹುಲ್ಲುಗಾವಲಾಗಿದ್ದು, ಕೃಷ್ಣ ಮೃಗಗಳ ಜೀವಕ್ಕೆ ಆಪತ್ತುಂಟಾಗಿದೆ. ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು, ಅವುಗಳ ಮೊಟ್ಟೆ, ಮರಿಗಳು ಸುಟ್ಟು ಕರಕಲಾಗಿವೆ.
ಬೆಂಕಿಯ ಕೆನ್ನಾಲಿಗೆಯು ರಸ್ತೆಗೂ ವ್ಯಾಪಿಸಿದೆ. ಸ್ಥಳೀಯರು ಬೆಂಕಿ ಗಮನಿಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರಾದರೂ ಗಂಟೆ ಕಳೆದರೂ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿರಲಿಲ್ಲ.

ಬದಲಾಗಿ ಅಗ್ನಿ ಶಾಮಕ ವಾಹನ ಕೆಟ್ಟು ನಿಂತಿದೆ ಎಂಬ ಉತ್ತರ ಬಂದಿತೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಮುಖ್ಯವಾಗಿ ಇಷ್ಟೆಲ್ಲಾ ಆದರೂ ಸಮೀಪದಲ್ಲಿ ಇರಬೇಕಾದ ಕೃಷ್ಣಮೃಗ ಧಾಮದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿರಲಿಲ್ಲ, ಸ್ಥಳೀಯರು ಮಾಹಿತಿ ನೀಡಿದ ಬಳಿಕವೂ ಇಲಾಖೆ ಸಿಬ್ಬಂದಿ ಗಮನ ಹರಿಸಲಿಲ್ಲ. ಇದರಿಂದಾಗಿ ನೂರಾರು ಎಕರೆ ಹುಲ್ಲುಗಾವಲು ಪ್ರದೇಶ ಅಗ್ನಿಗಾಹುತಿಯಾಗಿದ್ದು, ನೂರಾರು ಬಗೆಯ ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿರುವ ಬಗ್ಗೆ ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

     ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಫ್‍ಓ ಎಚ್.ಸಿ ಗಿರೀಶ್, “ಜಯಮಂಗಲಿ ಕೃಷ್ಣ ಮೃಗ ವನ್ಯಜೀವಿ ಧಾಮದ ಹೊರವಲಯದ ಕಂದಾಯ ಭೂಮಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಬೆಂಕಿಯು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ವ್ಯಾಪಿಸದಂತೆ ತಡೆಯಲಾಗುವುದು” ಎಂದು ತಿಳಿಸಿದರು.

(Visited 7 times, 1 visits today)
Previous Articleಹುಳಿಯಾರು ಹೋಬಳಿ ಕಾಂಗ್ರೆಸ್ ಭದ್ರ ಕೋಟೆ : ಜಿಪಂ ಸದಸ್ಯ
Next Article ಸಿದ್ಧಗಂಗಾ ಮಠದಲ್ಲಿ 15 ದಿನಗಳ ಕಾಲ ಕೃಷಿ-ಕೈಗಾರಿಕಾ ವಸ್ತು ಪ್ರದರ್ಶನ
News Desk Benkiyabale

Related Posts

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm news

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm news

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm news
ತಾಜಾ ಸುದ್ಧಿಗಳು

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm

ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ

July 02, 2026 4:26 pm

ಅಕ್ಟೋಬರ್ ವೇಳೆಗೆ ತುಮಕೂರಿಗೆ ಎತ್ತಿನ ಹೊಳೆ ನೀರು

July 02, 2026 4:19 pm
Our Youtube Channel
Our Picks

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm

ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ

July 02, 2026 4:26 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

By News Desk BenkiyabaleJuly 02, 2026 4:59 pm

ತುಮಕೂರು/ಶಿವಮೊಗ್ಗ: ತುಮಕೂರಿನ ಇತಿಹಾಸ ಸಂಶೋಧಕರ ತಂಡ ಶಿವಮೊಗ್ಗ ತಾಲೂಕಿನ ಬಿದಿರಿ ಗ್ರಾಮದಲ್ಲಿ ವಿಜಯನಗರ ಕಾಲದ ಅತ್ಯಂತ ಮಹತ್ವದ ಹಾಗೂ ಇಂದಿನವರೆಗೂ…

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.