BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್
  • ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
  • ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ
  • ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ
  • ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ
  • ಎನ್‌ಡಿಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು
  • ಸಣ್ಣ ಸಮುದಾಯಗಳು ಮುಂದೆ ಬರಬೇಕೆಂದರೆ  ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಸಾಧ್ಯ
  • ಚನ್ನಬಸವ ರಾಜೇಂದ್ರ ಸ್ವಾಮಿಗಳ ಮಾಸಿಕ ಪುಣ್ಯಸ್ಮರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕಳಪೆ ಕಾಮಗಾರಿ ವಿರುದ್ಧ ಗುತ್ತಿಗೆದಾರರಿಗೆ ಸಾರ್ವಜನಿಕರಿಂದ ತರಾಟೆ
Trending

ಕಳಪೆ ಕಾಮಗಾರಿ ವಿರುದ್ಧ ಗುತ್ತಿಗೆದಾರರಿಗೆ ಸಾರ್ವಜನಿಕರಿಂದ ತರಾಟೆ

By News Desk BenkiyabaleUpdated:September 25, 2020 7:17 pm

ಹುಳಿಯಾರು:

     19 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಹುಳಿ ಯಾರು ಅಣೇಕಟ್ಟೆ ರಸ್ತೆ ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಸಾರ್ವ ಜನಿಕರು ಸಿಡಿದೆ ದ್ದು ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಹುಳಿಯಾರಿನಲ್ಲಿ ಶುಕ್ರವಾರ ನಡೆಯಿತು.

      ಹುಳಿಯಾರು ಅಣೇಕಟ್ಟೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ 19 ಕೋಟಿ ರೂ. ವೆಚ್ಚದಲ್ಲಿ ಡಾಂಬಾರಿಕರಣ ಮಾಡಲಾಗುತ್ತಿದೆ. ಆದರೆ ಹಳೆಯ ಡಾಂಬಾರ್ ಕೀಳದೆ ಅದರ ಮೇಲೆಯೇ ಹೊಸ ಡಾಂಬಾರ್ ಹಾಕಲಾಗುತ್ತಿದೆ. ಪರಿಣಾಮ ಡಾಂಬಾರ್ ಹಾಕಿದ ಮರುಕ್ಷಣವೇ ಜಲ್ಲಿ ಕಲ್ಲುಗಳು ಮೇಲೇಳುತ್ತಿದೆಯಲ್ಲದೆ ರಸ್ತೆಯ ಅಂಚಿನಲ್ಲಿ ಕಿತ್ತೋಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು.

      ಹಾಲಿ ರಸ್ತೆಯನ್ನು ಎರಡೂ ಕಡೆಯಲ್ಲೂ 1 ಮೀಟರ್ ಅಗಲೀಕರಣ ಸಹ ಮಾಡಬೇಕಿದೆಯಾದರೂ ಕೆಲವೆಡೆ ಅಗಲೀಕರಿಸಿ ಕೆಲವೆಡೆ ಕೈ ಬಿಟ್ಟಿದ್ದಾರೆ. ಅಲ್ಲದೆ ಹುಳಿಯಾರು ಪಟ್ಟಣದಲ್ಲಿ ತೀರ ಕಳಪೆಯ ಚರಂಡಿ ಕಾಮಗಾರಿ ಮಾಡಿದ್ದು ಕ್ಯೂರಿಂಗ್ ಮಾಡದೆ ನಿರ್ಲಕ್ಷ್ಯಿಸಿದ್ದ ಪರಿಣಾಮ ಚರಂಡಿ ಸ್ಲ್ಯಾಬ್‍ಗಳು ತುಂಡಾಗಿದೆ. ಆದರೂ ಯಾವೊಬ್ಬ ಎಂಜಿನಿಯರ್ ಸಹ ಕಾಮಗಾರಿ ಪರಿಶೀಲನೆಗೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

      ಸ್ಥಳಕ್ಕೆ ಪಿಡಬ್ಲ್ಯೂಡಿ ಎಂಜಿನಿಯರ್ ಸೋಮಶೇಖರ್ ಹಾಗೂ ಚಂದ್ರಶೇಖರ್ ಅವರು ಆಗಮಿಸಿ ಸಾರ್ವಜನಿಕರ ಅಹಾವಾಲು ಆಲಿಸಿದರು. ಈ ಸಂದರ್ಭದಲ್ಲಿ ರಸ್ತೆ ಡಾಂಬರೀಕರಣದ ಗುಣಮಟ್ಟವನ್ನು ಕಾಲಿನಲ್ಲಿಯೇ ಕೆರೆದು, ಚರಂಡಿ ಕಾಮಗಾರಿಯ ಗುಣಮಟ್ಟವನ್ನು ತುಂಡಾಗಿರುವ ಸ್ಲ್ಯಾಬ್ ಗಳನ್ನು ತಂದು ಕಳಪೆ ಕಾಮಗಾರಿ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಎಂಜಿನಿಯರ್‍ಗೆ ತೋರಿಸಿಕೊಟ್ಟರಲ್ಲದೆ ಎಸ್ಟಿ ಮೆಂಟ್‍ನಲ್ಲಿ ಇರುವಂತೆ ಕಾಮಗಾರಿ ಮಾಡಿಸುವಂತೆ ಪಟ್ಟು ಹಿಡಿದರು.

      ಇದಕ್ಕೆ ಎಂಜಿನಿಯರ್ ಸೋಮಶೇಖರ್ ಅವರು ಈ ಕಾಮಗಾರಿಯು ಹಳೆಯ ರಸ್ತೆಯ ಮೇಲೆಯೇ ಹೊಸ ಡಾಂಬರ್ ಹಾಕುವುದಾಗಿದೆ. ಅಲ್ಲದೆ ರಸ್ತೆಯ ಡಾಂಬಾರ್ ಪರ್ಸಂಟೇಜ್ ಪರಿಶೀಲಿಸಿದರೆ ಎಸ್ಟಿಮೆಂಟ್ ಪ್ರಕಾರನೇ ಇದೆ. ಅಲ್ಲದೆ ಡಾಂಬಾರ್ ಸೆಟ್ ಆಗುವ ಮೊದಲೇ ವಾಹನಗಳು ಓಡಾಡಿದ ಪರಿಣಾಮ ಕಿತ್ತೋಗಿದೆ ಅಷ್ಟೆ. ಹಾಕಿರುವ ಡಾಂಬಾರ್ ಸೆಟ್ ಆಗಲು ಬಿಡಿ ಎಂದು ಗುತ್ತಿಗೆದಾರರ ಪರ ಮಾತನಾಡಿದರು. ಅಲ್ಲದೆ ಕಿತ್ತೋಗಿದೆಯ ಹೋಗಲಿ ಬಿಡು ಅದಕ್ಯಾಕೆ ತಲೆ ಕೆಡಿಸಿಕೊಳ್ತಿರಿ ಮತ್ತೆ ಮಾಡಿಕೊಡ್ತಿವಿ ಎಂದರು.

      ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಗುಣಮಟ್ಟದ ಕಾಮಗಾರಿ ಕಾಪಾಡುವಲ್ಲಿ ವಿಫಲರಾಗಿ ಈಗ ಗುತ್ತಿಗೆದಾರರ ಪರ ಮಾತನಾಡುತ್ತಿದ್ದಿರಲ್ಲ. ನಿಮ್ಮ ಕೈಯಲ್ಲಿ ಗುಣಮಟ್ಟ ಕಾಪಾಡಲು ಆಗಲಿಲ್ಲ ಎಂದರೆ ಹೇಳಿ ನಾವು ಲೋಕಾಯುಕ್ತಕ್ಕೆ ದೂರು ಕೊಡುತ್ತೇವೆ ಎಂದರು. ಆಗ ಗುತ್ತಿಗೆದಾರ ಪ್ರಸನ್ನ ಅವರಿಗೆ ಕಿತ್ತೋಗಿರುವ ಎಲ್ಲಾ ಕಡೆಯೂ ಮತ್ತೆ ಡಾಂಬಾರ್ ಹಾಕುವಂತೆಯೂ, ಚರಂಡಿಗಳ ಸ್ಲ್ಯಾಬ್‍ಗಳನ್ನು ಪುನಃ ಮಾಡುವಂತೆಯೂ ಎಂಜಿನಿಯರ್ ಸೂಚಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಿದರು.

(Visited 21 times, 1 visits today)
Previous Articleನಾಡಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ : ಸಾರ್ವಜನಿಕ ಕೆಲಸ ಕಾರ್ಯ ಕುಂಟಿತ
Next Article ಸಚಿವ ಡಿ.ವಿ.ಸದಾನಂದ ಗೌಡ – ಆರ್.ರಾಜೇಂದ್ರ ಭೇಟಿ!!
News Desk Benkiyabale

Related Posts

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm news

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm news

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm news
ತಾಜಾ ಸುದ್ಧಿಗಳು
news

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm
news

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm
news

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm
news

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm
news

ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ

August 18, 2026 3:33 pm
news

ಎನ್‌ಡಿಎ ಪಕ್ಷದ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು

August 17, 2026 5:14 pm
Our Youtube Channel
Our Picks

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm

ಕೆರೆ ಅಂಗಳದ ಗೂಡಂಗಡಿಗಳ ತೆರವು ಕಾರ್ಯಾಚರಣೆ

August 18, 2026 3:33 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

By News Desk BenkiyabaleAugust 18, 2026 5:00 pm

ಕೊರಟಗೆರೆ: ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು…

ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

August 18, 2026 4:58 pm

ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

August 18, 2026 4:56 pm

ದೇಶದಲ್ಲಿ ಅಸ್ಪಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಇದೆ ಸಾಕ್ಷಿ

August 18, 2026 4:54 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.