ಕೊಡಿಗೇನಹಳ್ಳಿ:

      ಗ್ರಾಮದ ಬಾಲಕೀಯರ ಶಾಲೆ ಅಡುಗೆ ಕೋಣೆಯ ಬೀಗ ಮುರಿದ ಕದೀಮರು ಅಕ್ಷರ ದಾಸೋಹದ ಅಡುಗೆ ಪಾತ್ರೆಗಳನ್ನು ದೊಚಿರುವ ಘಟನೆ ತಡವಾಗಿ ಬೆಳಕಿಗ ಬಂದಿದೆ.

      ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯು ಬಾನುವಾರ ರಜೆ ಇದ್ದು ಅಡುಗೆ ಕೋಣೆಗೆ ಬೀಗ ಹಾಕಲಾಗಿತ್ತು, ಎಂದಿನಂತೆ ಮುಖ್ಯ ಶಿಕ್ಷಕಿ ತಿಮ್ಮರಾಜಮ್ಮ ಸೋಮವಾರ ಬೆಳಿಗ್ಗೆ ಬೀಗ ತೆರಯಲು ಹೋದಾಗ ಕಳುವಾಗಿರವ ಬಗ್ಗೆ ತಿಳಿದು ಬಂದಿದೆ.ತಕ್ಷಣ ಪರಿಶೀಲಿಸಿದಾಗ ಶಾಲೆಯಲ್ಲಿ ಅಡುಗೆಗೆ ಬಳಸುತಿದ್ದ 15ಕೆಜಿ, 10ಕೆಜಿ, 8 ಕೆಜಿ, ಹಾಗೂ 3 ಕೆಜಿ ತೂಕದ ಸುಮಾರು 4 ಅಡುಗೆ ಪಾತ್ರೆಗಳು ಕಳುವಾಗಿವೆ ಎಂದು ಮುಖ್ಯ ಶಿಕ್ಷಕಿ ದೂರಿನಲ್ಲಿ ಉಲ್ಲೇಖಸಿದ್ದಾರೆ,ಕಳೆದ 10 ದಿನಗಳ ಹಿಂದೆ ಸರಕಾರಿ ಉರ್ದು ಶಾಲೆಯಲ್ಲಿ ಭರ್ತಿ ಗ್ಯಾಸ್ ಸಿಲೆಂಡರ್ ಕಳವಾಗಿತ್ತು, ಇದಕ್ಕು ಮುನ್ನ ಬಾಲಕರ ಶಾಲೆಯಲ್ಲಿ ಕಂಪ್ಯೋಟರ್ ಕಳವಾಗಿದೆ, ಪದೇ ಪದೇ ಕದೀಮರು ರಜಾ ದಿನಗಳಲ್ಲಿ ಶಾಲೆಯ ಬೀಗಗಳನ್ನು ಮುರಿಯುತ್ತಿದ್ದು ಸರಕಾರಿ ಶಾಲೆಯ ಆವರಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ.ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಶಾಲೆಯ ರಕ್ಷಣೆಗೆ ಮುಂದಾಗಬೇಕೆಂದು ಹಳೇ ವಿಧ್ಯಾರ್ಥಿಗಳು ಆಗ್ರಹಿಸಿದ್ದಾರೆ.

(Visited 11 times, 1 visits today)