ಕೊರಟಗೆರೆ:

      ಒಂಟಿ ಮಹಿಳೆ ಮನೆಯಲ್ಲಿ ದರೋಡೆ ಮಾಡಿದ್ಧ ಆರೋಪಿಗಳನ್ನ ಕೊರಟಗೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಕೊರಟಗೆರೆ ತಾಲ್ಲೂಕಿನ ಅರಸಾಪುರ ಗ್ರಾಮದಲ್ಲಿ ಆಗಸ್ಟ್ 12 ರಂದು ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿ ಹೊಂಚು ಹಾಕಿ ಮನೆಯಲ್ಲಿದ್ದ ಓರ್ವ ಮಹಿಳೆಯ ಕೈಕಾಲು ಹಗ್ಗದಿಂದ ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ. ಎರಡು ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದರು..ಘಟನಾ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕೊರಟಗೆರೆ ಪೊಲೀಸರು ಬಲೆಬೀಸಿದ್ದರು.

      ತುಮಕೂರು ಎಸ್ಪಿ ಡಾ ಕೋನ ವಂಶಿಕೃಶಷ್ಣ ಘಟನಾ ಸ್ಧಳಕ್ಕೆ ಭೇಟಿ ನೀಡಿ ಎಎಸ್ಪಿ ಉದೇಶ್, ಮಧುಗಿರಿ ಡಿವೈಎಸ್ಪಿ ಧರಣೇಶ್ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಏ ಎಫ್.ಕೆ ನದಾಫ್, ಪಿಎಸೈ ಮಂಜುನಾಥ್ ಬಿ.ಸಿ.ಹಾಗೂ ಸಿಬ್ಬಂದಿಗಳಾದ ವೆಂಕಟೇಶ್. ಮೋಹನ್ ದೊಡ್ಡಲಿಂಗಯ್ಯ.ಲೋಹಿತ್, ಶಿವಪ್ರಸಾದ್ ಹಾಗೂ ತಾಂತ್ರಿಕ ಸಿಬ್ಬಂದಿ ರಮೇಶ್ ಸೇರಿದ ತಂಡ ತಮಿಳುನಾಡಿನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಚಾಪರಪಲ್ಲಿ ನಿವಾಸಿಗಳಾದ ಸುಂದರ್ ವೇಲ್, ಗಣೇಶ್, ಶ್ರೀನಿವಾಸ್ ಮೂವರನ್ನ ಬಂಧಿಸಿ ಬಂಧಿತರಿಂದ 23 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 2 ಗ್ರಾಂ ನ ಚಿನ್ನದ ಗುಂಡು, ಬಜಾಜ್ ಪಲ್ಸರ್ 220, ಟಿವಿಎಸ್ ಸ್ವಾರ್ ಸಿಟಿ ಪ್ಲಸ್ ಹೊಸ ದ್ವಿಚಕ್ರ ವಾಹನಗಳು, ಒಂದು ಮೊಬೈಲ್ ಸೇರಿ ಸುಮಾರು 2.50.000 ಲಕ್ಷ ಮೌಲ್ಯದ ಕಳವು ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಚಾಕು ವಶಪಡಿಸಿಕೊಂಡಿದ್ದಾರೆ.

     ಇನ್ನು ಘಟನೆಗೆ ಸಂಬಂಧಿಸಿದ ಇದೇ ಗ್ರಾಮದ ರಾಮು ಹಾಗೂ ಮಂಜುನಾಥ್ ಇಬ್ಬರು ಆರೋಪಿಗಳು ತಲೆಮರಸಿಕೊಂಡಿದ್ದು, ಇಬ್ಬರ ಬಂಧನಕ್ಕೆ ಬಲೆಬೀಸಿದ್ದಾರೆ.

      ಆರೋಪಿಗಳ ಪತ್ತೆ ಕಾರ್ಯಕ್ಕೆ ಶ್ರಮಿಸಿದ ಕೊರಟಗೆರೆ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ ಅಭಿನಂದಿಸಿದ್ದಾರೆ.

(Visited 44 times, 1 visits today)