BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ
  • 2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ
  • ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ
  • ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ
  • ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು
  • ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
  • ಬ್ಯಾಂಕ್‍ಗಳು ರೈತರ ಜಮೀನು ಈ ಹರಾಜು ನಿಲ್ಲಿಸಬೇಕು: ಆಗ್ರಹ
  • ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94ಲಕ್ಷ ಮತದಾರರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪರಿಸರದಿಂದ ಮನುಷ್ಯನ ಬದುಕು ಸುಂದರವಾಗಿದೆ -ಬಿಇಓ ರಂಗಪ್ಪ
ತುಮಕೂರು ಜಿಲ್ಲಾ ಸುದ್ಧಿಗಳು

ಪರಿಸರದಿಂದ ಮನುಷ್ಯನ ಬದುಕು ಸುಂದರವಾಗಿದೆ -ಬಿಇಓ ರಂಗಪ್ಪ

By News Desk BenkiyabaleUpdated:August 01, 2019 7:05 pm

ಮಧುಗಿರಿ:

      ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಕಾರ್ಯದ ತರಬೇತಿ ನೀಡುವುದು ಇಂದಿನ ದಿನಗಳಲ್ಲಿ ಮಹತ್ವದ್ದಾಗಿದೆ ಎಂದು ಬಿಇಓ ರಂಗಪ್ಪ ತಿಳಿಸಿದರು.

      ಮಧುಗಿರಿ ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ಪುರಸಭೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೀಡ್‍ಬಾಲ್ ತಯಾರಿ ಹಾಗೂ ಬಿತ್ತನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರದಿಂದ ಮನುಷ್ಯನ ಬದುಕು ಸುಂದರವಾಗಿ ಹಾಗೂ ಆರೋಗ್ಯವಾಗಿದೆ. ಇದನ್ನು ಇಂದು ನಾವೆಲ್ಲ ಅವನತಿಯ ಅಂಚಿಗೆ ತಂದು ನಿಲ್ಲಿಸಿದ್ದೇವೆ. ಹೀಗೆ ಮುಂದುವರಿದಲ್ಲಿ ಪರಿಸರದಿಂದ ಮನುಕುಲಕ್ಕೆ ಅಪಾಯವಿದೆ. ಅದಕ್ಕಾಗಿ ಪರಿಸರವನ್ನು ಶುಚಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಪುರಸಭೆ ಸಿಬ್ಬಂದಿಗಳು ಮಧುಗಿರಿ ಸುತ್ತಲಿನ ಪ್ರಾಕೃತಿಯ ಬೆಟ್ಟ ಹಾಗೂ ನೆಡುತೋಪಿನಲ್ಲಿ ಈ ಸೀಡ್‍ಬಾಲ್‍ಗಳನ್ನು ಬಿತ್ತನೆ ಮಾಡುವುದರಿಂದ ಉತ್ತಮ ಮಳೆಯಾದರೆ ಪ್ರಕೃತಿ ಸುಂದರ ಹಾಗೂ ಆರೋಗ್ಯಕರವಾಗಿರುತ್ತದೆ. ಈ ಕೆಲಸಕ್ಕೆ ಕೈ ಹಾಕಿರುವ ಪುರಸಭೆಯ ಮುಖ್ಯಾಧಿಕಾರಿ ಲೋಹಿತ್‍ರವರ ಕಾರ್ಯ ಶ್ಲಾಘನೀಯ ಎಂದರು.

      ಪುರಸಭೆ ಮುಖ್ಯಾಧಿಕಾರಿ ಡಿ.ಲೋಹಿತ್ ಮಾತನಾಡಿ ಮೊದಲಿಗೆ 10 ಸಾವಿರ ಸೀಡ್‍ಬಾಲ್ ತಯಾರಿಸಲು ಉದ್ದೇಶಿಸಿದ್ದೇವೆ. ಅದರಲ್ಲಿ ಬಿದಿರು, ಹೊಂಗೆ, ಹಾಗೂ ಸೀತಾಫಲ ಬೀಜವನ್ನು ಮಣ್ಣಿನ ಉಂಡೆಯಲ್ಲಿ ಅಡಗಿಸಿ ಸಂರಕ್ಷಿಸಲಾಗುತ್ತದೆ. ಇದನ್ನು ಮಳೆಗಾಲದಲ್ಲಿ ಬೆಟ್ಟದ ಸಾಲುಗಳಲ್ಲಿ ಬಿತ್ತನೆ ಮಾಡಲಾಗುತ್ತದೆ. ಹಿಂದೆ ಇಲ್ಲೆಲ್ಲ ದಟ್ಟವಾದ ಕಾಡುಗಳಿದ್ದು, ಈಗ ಬರಿದಾಗಿದೆ. ಮರಗಳ ಎಲೆಗಳ ಉದುರಿದಾಗ ಅದರಿಂದ ನೀರನ್ನು ಹೀರಿಕೊಳ್ಳುವ ಮಣ್ಣಿನ ಶಕ್ತಿ ಹೆಚ್ಚಾಗಿ ಸಾರಾಂಶ ಹೆಚ್ಚಾಗುತ್ತದೆ. ಇದರಿಂದ ಅಂತರ್ಜಲವೂ ಸಹ ವೃದ್ಧಿಯಾಗಲಿದ್ದು ನೀರಿನ ಬವಣೆ ದೂರಾಗುತ್ತದೆ. ಮರಗಳ ಎಲೆಗಳ ಉದುರಿದಾಗ ಅದರಿಂದ ನೀರನ್ನು ಹೀರಿಕೊಳ್ಳುವ ಮಣ್ಣಿನ ಶಕ್ತಿ ಹೆಚ್ಚಾಗಿ ಸಾರಾಂಶ ಹೆಚ್ಚಾಗುತ್ತದೆ. ಇದರಿಂದ ಅಂತರ್ಜಲವೂ ಸಹ ವೃದ್ಧಿಯಾಗಲಿದ್ದು ನೀರಿನ ಬವಣೆ ದೂರಾಗುತ್ತದೆ. ಕಾಡುಪ್ರಾಣಿ-ಕಾಡುಗಳಿಂದ ಮನುಷ್ಯನ ಜೀವನ ಚಕ್ರ ಅಡಗಿದೆ. ಇದರ ಅರಿವಿಲ್ಲದೆ ಇಂದು ನಾವೆಲ್ಲ ಕಾಡನ್ನು ನಾಶ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ವಿದ್ಯಾರ್ಥಿಗಳು ಈ ಜೀವನ ಕ್ರಮದ ಸುಗಮ ಹಾದಿಗೆ ಕಾಡು ಬೆಳೆಸಲು ಮುಂದಾಗಬೇಕು ಎಂದು ಮನವರಿಕೆ ಮಾಡಿಕೊಟ್ಟರು.

      ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಓ ನಾಗರಾಜು ಮಾತನಾಡಿ ಅರಣ್ಯವನ್ನು ರಕ್ಷಿಸಲು ಪುರಸಭೆ ಹಾಗೂ ಶಿಕ್ಷಣ ಇಲಾಖೆ ಮುಂದಾಗಿರುವುದು ಸಂತಸ ತಂದಿದೆ. ಇಂದು ಮರಗಳ ನಾಶ ಮಾಡುವ ಸ್ಥಿತಿಯಲ್ಲಿರುವುದು ಆತಂಕವಾಗಿದೆ. ಕಾಡು ಇಲ್ಲದೆ ನಾಡು ಉಳಿಯಲ್ಲ. ಈ ಸತ್ಯವನ್ನು ಅರಿತು ನಾವೆಲ್ಲ ಬಾಳಬೇಕು ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಪುರಸಭೆ ಪರಿಸರ ಅಭಿಯಂತರೆ ಸೌಮ್ಯ, ಬಿ.ಆರ್.ಸಿ. ಆನಂದ ಕುಮಾರ್, ಪತಾಂಜಲಿ ಯೋಗ ಶಿಕ್ಷಕ ಎಂ.ಎನ್.ನರಸಿಂಹಮೂರ್ತಿ, ಆರೋಗ್ಯ ನಿರೀಕ್ಷಕ ಬಾಲಾಜಿ, ಸರ್ಕಾರಿ ಫ್ರೌಢಶಾಲೆಯ ಮುಖ್ಯಶಿಕ್ಷಕಿ ನಾಯಕ್ ಕಮಲಾನಾರಾಯಣ್,  ಇದ್ದರು.

(Visited 48 times, 1 visits today)
Previous Articleಸವಾರರ ವರ್ತನೆ ಮೇಲೆ ನಿಗಾ ವಹಿಸಲು ಪೊಲೀಸರಿಗೆ 10 ಬಾಡಿ ಕ್ಯಾಮೆರಾ!
Next Article ಸರಗಳ್ಳತನ ಮಾಡಿದ ಆರೋಪಿಗೆ ಜೈಲು ಶಿಕ್ಷೆ!!
News Desk Benkiyabale

Related Posts

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

October 29, 2026 5:45 pm news

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm news

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm news
ತಾಜಾ ಸುದ್ಧಿಗಳು
news

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

October 29, 2026 5:45 pm
news

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm
news

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm
news

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ

October 29, 2026 1:29 pm
news

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

October 28, 2026 5:59 pm
news

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

October 28, 2026 3:29 pm
Our Youtube Channel
Our Picks

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

October 29, 2026 5:45 pm

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ

October 29, 2026 1:29 pm

ಜನರಿಗೆ ಕಲಬೆರಕೆ ರಹಿತ ಪದಾರ್ಥಗಳು ದೊರೆಯಬೇಕು

October 28, 2026 5:59 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

By News Desk BenkiyabaleOctober 29, 2026 5:45 pm

ಪಾವಗಡ: ತಾಲ್ಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಗುರುವಾರ ಪಾವಗಡಕ್ಕೆ ಭೇಟಿ ನೀಡಿ…

2028ರ ವಿಧಾನಸಭಾ ಚುನಾವಣೆಯಲ್ಲೂ ಎನ್‍ಡಿಎ ಸರ್ಕಾರ

October 29, 2026 1:34 pm

ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ನಾಮಿನೇಷನ್ ಮಾಡಿಸಿಕೊಳ್ಳಿ

October 29, 2026 1:31 pm

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಅಂತಿಮ ಪಟ್ಟಿ ಪ್ರಕಟ

October 29, 2026 1:29 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.