BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ
  • ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ
  • ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ
  • ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ
  • ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ
  • ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ
  • ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ
  • ಹುಳಿಯಾರು ಪ.ಪಂ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೊರೋನಾ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಸೇರಿಸಿ – ಜೆಸಿಎಂ
Trending

ಕೊರೋನಾ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಸೇರಿಸಿ – ಜೆಸಿಎಂ

By News Desk BenkiyabaleUpdated:May 03, 2021 6:30 pm

ಮಧುಗಿರಿ:

      ಇತ್ತೀಚಿಗೆ ಕೋವಿಡ್ ಪಾಸಿಟಿವ್ ಬಂದಂತಹವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಸೇರಿಸಿ ಆರೈಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ನಿರೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ತಾಲೂಕಿನಲ್ಲಿ ಕೊರೋನ ಹರಡದಂತೆ ತೆಗೆದುಕೊಂಡಿರುವ ಮುಂಜಾ ಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

      ತಾಲೂಕಿನಲ್ಲಿ ನಾಲ್ಕು ಗ್ರಾಮ ಪಂಚಾಯತಿ ಮತ್ತು ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಅಧಿಕ ಸೋಂಕಿತರು ಪತ್ತೆಯಾಗಿರುವುದರಿಂದ ಹಾಟ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ. ಮಧುಗಿರಿ ಪುರಸಭಾ ವ್ಯಾಪ್ತಿಯ ಶ್ರೀನಿವಾಸ ಬಡಾವಣೆ ಮಧುಗಿರಿ ಪುರಸಭಾ ವ್ಯಾಪ್ತಿಯ ಶ್ರೀನಿವಾಸ ಬಡಾವಣೆ, ಕೆ.ಆರ್ ಬಡಾವಣೆ, ರಾಘವೇಂದ್ರ ಕಾಲೋನಿ, ಮತ್ತು ತಾಲೂಕಿನ ಮಿಡಿಗೇಶಿ ಬ್ಯಾಲ್ಯಾ , ದೊಡ್ಡೇರಿ , ಚಂದ್ರಗಿರಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ಸೋಂಕಿತರು ಕಂಡು ಬಂದಿರುವುದರಿಂದ ಹಾಟ್‍ಸ್ಪಾಟ್‍ಗಳಾಗಿ ಘೋಷಿಸಲಾಗಿದ್ದು, ಗ್ರಾಮಾಂತರ ಭಾಗದಲ್ಲಿರುವ ಹಾಟ್ ಸ್ಪಾಟ್‍ನಲ್ಲಿರುವ ಸೋಂಕಿತರನ್ನು ತಕ್ಷಣವೇ ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಗಾಗಿ ದಾಖಲಿಸಿ ಮತ್ತು ಸೋಂಕಿತ ವ್ಯಕ್ತಿಗೆ ಸಂಬಂಧಿಸಿದ ಮನೆಯಲ್ಲಿರುವ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸಚಿವರು ತಿಳಿಸಿದರು.

       ಮಧುಗಿರಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಯುಳ್ಳ ವಾರ್ಡ್ ಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ವಾರ್ಡ್‍ಗಳಲ್ಲಿ ಇತರೆ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಾದ ರಾಘವೇಂದ್ರ ಆಸ್ಪತ್ರೆಯನ್ನು ಕೋವಿಡ್ ಕೇರ್‍ಗೆ ಬಳಸಿಕೊಳುವಂತೆ ಸಚಿವರು ಸೂಚಿಸಿದರು.

       ತಾಲೂಕಿನಲ್ಲಿ 1018 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ 507 ಸಕ್ರಿಯ ಪ್ರಕರಣಗಳಿಗೆ ಪಟ್ಟಣದಲ್ಲಿ 170 ಇವೆ ಎಂದು ಸಚಿವರು ಹೇಳಿದರು. ತಾಲೂಕಿಗೆ ಹೊರಗಿನಿಂದ ಮತ್ತು ಆಂದ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಹೊರಗಿನವರು ಹೆಚ್ಚಾಗಿ ಗ್ರಾಮಗಳಿಗೆ ಪ್ರವೇಶಿಸಿದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅವರುಗಳನ್ನು 5 ದಿನ ಕಡ್ಡಾಯವಾಗಿ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

        ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ 33 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಮಧುಗಿರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಸಿಬ್ಬಂದಿಯೂ ಸೇರಿದಂತೆ 16 ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ತಾಲೂಕಿನಲ್ಲಿ ಇಲ್ಲಿಯವರೆಗೂ 33134 ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗಿದ್ದು ಮೊದಲ ಹಂತದಲ್ಲಿ 27758, ಎರಡನೇ ಹಂತದಲ್ಲಿ 5416 ಆಗಿದ್ದು ಶೇಕಡ 38%ರಷ್ಟು ಲಸಿಕೆ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು ತಿಳಿಸಿದರು.

        ಕಳೆದ ಲಾಕ್‍ಡೌನ್ ವೇಳೆ ದ್ವಿಚಕ್ರ ಮತ್ತು ಕಾರುಗಳ ಸಂಚಾರ ಕಟ್ಟುನಿಟ್ಟಾಗಿ ತಡೆಯಲಾಗಿತ್ತು ಈ ವೇಳೆ ಜಿಲ್ಲಾದ್ಯಂತ ನಿಯಂತ್ರಣಕ್ಕೆ ಬಂದಿಲ್ಲ. ಮುಂದಿನ ಹದಿನೈದು ದಿನಗಳ ಕಾಲ ಕಟ್ಟುನಿಟ್ಟಾಗಿ ಸಂಚಾರ ನಿಯಂತ್ರಣಕ್ಕೆ ಪೆÇಲೀಸ್ ಇಲಾಖೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದಾಗ ಮಧುಗಿರಿ ಡಿವೈಎಸ್ಪಿ ಕೆ.ಜಿ ರಾಮಕೃಷ್ಣ ಇಲ್ಲಿಯವರೆಗೂ 683 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

       ಮನೆಯಲ್ಲಿ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಊಟದ ವ್ಯವಸ್ಥೆಯನ್ನು ತಾಲೂಕು ಆಡಳಿತ ಸಮರ್ಪಕವಾಗಿ ಮಾಡಬೇಕು. ಇಲ್ಲವಾದರೆ ಸೋಂಕಿತ ಹೊರಗಡೆ ಬಂದು ವೈರಸ್ ಹರಡಲು ಸಹಕಾರಿಯಾಗುತ್ತದೆ. ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇದ್ದವರಿಗೆ ಮಾತ್ರ ಕೊರೋನ ಪರೀಕ್ಷೆ ಮಾಡಿ ಜಿಲ್ಲೆಯಲ್ಲಿ ಪ್ರತಿನಿತ್ಯ 7000 ವರಗೂ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಶಾಸಕ ಎಂ.ವಿ.ವೀರಭಧ್ರಯ್ಯ ಮಾತನಾಡಿ 50 ಆಕ್ಸಿಜನ್ ಬೆಡ್‍ಗಳಿದ್ದು, 5 ಐಸಿಯು, ದಿನಕ್ಕೆ ಮೂರು ಬಾರಿ ಆಕ್ಸಿಜನ್ ತುಂಬಲಾಗುತ್ತಿದೆ. ಪ್ರಥಮ ಅಲೆಯ ವೇಳೆ ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸಿದ ರೀತಿಗೂ ಈಗ ನಿರ್ವಹಿಸುತ್ತಿರುವ ರೀತಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ ಎಂದರು.
ಸರ್ಕಾರಿ ಹಾಸ್ಟೆಲ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಾಗಿ ಪರಿವರ್ತಿಸಬೇಕು ಎಂದು, ಆಂಬ್ಯುಲೆನ್ಸ್ ಕೊರತೆ ಇರುವುದನ್ನು ಸಭೆಯ ಗಮನಕ್ಕೆ ತಂದಾಗ ಡಿಹೆಚ್‍ಒ ತುರ್ತಾಗಿ ಆಂಬ್ಯುಲೆನ್ಸ್ ನೀಡುವುದಾಗಿ ತಿಳಿಸಿದರು.

       ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿ.ಪಂ ಸಿಇಒ ವಿದ್ಯಾಕುಮಾರಿ, ಡಿಹೆಚ್‍ಒ ನಾಗೇಂದ್ರಪ್ಪ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ತಹಶೀಲ್ದಾರ್ ವೈ.ರವಿ ತಾ.ಪಂ ಇಒ ದೊಡ್ಡಸಿದ್ದಪ್ಪ, ಟಿ.ಹೆಚ್ ಒ ರಮೇಶ್ ಬಾಬು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗಂಗಾಧರ್, ಪುರಸಭಾ ಮುಖ್ಯಾಧಿಕಾರಿ ಅಮರ್ ನಾರಾಯಣ್, ಸಿ.ಪಿ.ಐ. ಎಂ.ಎಸ್ ಸರ್ದಾರ್, ಸಿಡಿಪಿಒ ಅನಿತಾ , ಬಿಇಒ ನಂಜುಂಡಯ್ಯ, ಬಿ ಆರ್ ಸಿ ಮಂಜುನಾಥಸ್ವಾಮಿ, ಆಹಾರ ಶಿರಸ್ತೇದಾರ್ ಗಣೇಶ್, ಪಿಡಿಒಗಳಾದ ಜುಂಜೇಗೌಡ, ಶಿಲ್ಪ, ಹಾಜರಿದ್ದರು.

(Visited 24 times, 1 visits today)
Previous Articleಹುಳಿಯಾರು : ಬೀಗ ಜಡಿದಿದ್ದ ಆಸ್ಪತ್ರೆ ಬಾಗಿಲ ಬಳಿ ಜ್ವರಪೀಡಿತನ ನರಳಾಟ
Next Article ತುಮಕೂರು : ಕೋವಿಡ್-19 ನಿಯಂತ್ರಣ : ಉಸ್ತುವಾರಿ ಸಚಿವರಿಂದ ಪರಿಶೀಲನೆ
News Desk Benkiyabale

Related Posts

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm news

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm news

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm news
ತಾಜಾ ಸುದ್ಧಿಗಳು
news

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
news

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm
news

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm
news

ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ

September 24, 2026 6:16 pm
news

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

September 23, 2026 5:52 pm
news

ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

September 23, 2026 5:51 pm
Our Youtube Channel
Our Picks

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm

ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ

September 24, 2026 6:16 pm

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

September 23, 2026 5:52 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

By News Desk BenkiyabaleSeptember 24, 2026 6:21 pm

ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆ ಅಕ್ಟೋಬರ್…

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm

ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ

September 24, 2026 6:16 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.