News Search
ಟ್ಯೂಷನ್ ಶುಲ್ಕ ಕಟ್ಟಲಿಲ್ಲವೆಂದು ಬಾಲಕನಿಗೆ ಹೊಡೆದ ಶಾಲಾ ಸಿಬ್ಬಂದಿ
ತುಮಕೂರು : ಕೊರೋನಾ ವೈರಸ್ಗೆ ತಂದೆಯನ್ನು ಕಳೆದುಕೊಂಡ 15 ವರ್ಷದ ಬಾಲಕನಿಗೆ ಶಾಲೆಯಲ್ಲಿ ಟ್ಯೂಷನ್ ಫೀಸ್ 5 ಸಾವಿರ ರೂಪಾಯಿ ಕಟ್ಟಲಿಲ್ಲವೆಂದು ಶಾಲಾ ಸಿಬ್ಬಂದಿ ಹೊಡೆದ ಪ್ರಕರಣ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡದ ಬಳ್ಳಾರಿ ರಸ್ತೆಯಲ್ಲಿರುವ ವಿನಾಯಕ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಲಾ ಶಾಲೆಯಲ್ಲಿ ಹೆಚ್ಚುವರಿ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾರೆ, ಕಲಿಯೋಣವೆಂದು ಹೋದಾಗ ಈ ಘಟನೆ ನಡೆದಿದೆ. ಹಿಂದಿ ಶಿಕ್ಷಕ ರಾಮಕೃಷ್ಣ ನಾಯಕ್ ನಾನು ಕಲಿಯುವುದರಲ್ಲಿ ಮುಂದಿಲ್ಲ ಎಂದು ದೂರಿದಾಗ ಎಲ್ಲ ಮಕ್ಕಳೆದುರು ಶಾಲೆಯ ಸೆಕ್ರೆಟರಿ ಅಶ್ವಥ್ ನಾರಾಯಣ ನನಗೆ ಕೋಲಿನಿಂದ ಹೊಡೆದರು. ಅವರು ನನಗೆ ದಿನನಿತ್ಯ ಟ್ಯೂಷನ್ ಫೀಸ್ ಕಟ್ಟಲಿಲ್ಲವೆಂದು ಹೊಡೆಯುತ್ತಿದ್ದರು ಎಂದು ನೊಂದ ಬಾಲಕ ಹೇಳುತ್ತಾನೆ. ಟ್ಯೂಷನ್ ಫೀಸ್ ಕಟ್ಟಬೇಕೆಂಬ ಒತ್ತಡದಿಂದ ನನಗೆ ಕಲಿಕೆ ಮೇಲೆ ಗಮನ ಹರಿಸಲು…
ಮಧುಗಿರಿ : ಶವ ಸಂಸ್ಕಾರದ ವೇಳೆ 2 ಗ್ರಾಮಗಳ ಮಧ್ಯೆ ಘರ್ಷಣೆ
ಮಧುಗಿರಿ: ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದ ಗ್ರಾಪಂ ಕಾರ್ಯದರ್ಶಿ ಶವ ಸಂಸ್ಕಾರದ ಸ್ಥಳ ನಿಗದಿಗಾಗಿ 2 ಗ್ರಾಮಗಳ ಗ್ರಾಮಸ್ಥರ ನಡುವೆ ನಡೆದ ಘರ್ಷಣೆ ಕಂದಾಯ ಇಲಾಖೆ, ಪೆÇಲೀಸರು, ಮಾದಿಗ ದಂಡೋರ ಸಮಿತಿ ಹಾಗೂ ಗ್ರಾಪಂ ಅಧಿಕಾರಿಗಳ ಸಂಧಾನದಿಂದ ಅಂತಿಮ ಕಾರ್ಯ ಸುಗಮವಾಗಿ ನಡೆಯಿತು. ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರ ಗ್ರಾಪಂ ಕಾರ್ಯದರ್ಶಿ ನರಸಪ್ಪ (55) ಶುಕ್ರವಾರದಂದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಗ್ಗೆ 8ರ ಸಮಯದಲ್ಲಿ ಮೃತಪಟ್ಟಿದ್ದರು. ಶುಕ್ರವಾರವಾಗಿದ್ದರಿಂದ ಶವಸಂಸ್ಕಾರ ಮಾಡಿರಲಿಲ್ಲ. ಇವರು ಮಧುಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವರಾಗಿದ್ದು ಬಸವನಲ್ಲಿ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶವ ಸಂಸ್ಕಾರ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ದೇವಸ್ಥಾನದ ಟ್ರಸ್ಟ್ನವರು ಶವಸಂಸ್ಕಾರಕ್ಕೆ ಅನುಮತಿ ನಿರಾಕರಿಸಿದರು. ನಂತರ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 48 ರಲ್ಲಿ ಜಿಲ್ಲಾಧಿಕಾರಿಗಳು ಇಪ್ಪತ್ತು ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದ್ದ ಸ್ಥಳಕ್ಕೆ ಶವವನ್ನು ಶನಿವಾರ ಬೆಳಿಗ್ಗೆ ತಂದರು.…
ತುಮಕೂರು : ನೈಟ್ ಕಪ್ರ್ಯೂ ಜಾರಿ : ಬೀದಿಗಿಳಿಯುವ ಮುನ್ನ ಎಚ್ಚರ!!
ತುಮಕೂರು: ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ರಾತ್ರಿ ಕಫ್ರ್ಯೂ ವಿಧಿಸಿದ್ದು, ಇದನ್ನು ಕಟ ್ಟು ನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಸರಕಾರ ಪ್ರಧಾನ ಕಾರ್ಯದರ್ಶಿಗಳ ನಿರ್ದೇಶನದಂತೆ ಸ್ಥಾಪಿಸಿರುವ 10 ಚೆಕ್ಪೋಸ್ಟ್ಗಳಲ್ಲಿ ನಿಗಾವಹಿಸುವ ಬಗ್ಗೆ ನೇಮಕವಾಗಿರುವ ಅಧಿಕಾರಿಗಳಿಗೆ ನಗರ ಡಿವೈಎಸ್ಪಿ ಶ್ರೀನಿವಾಸ್ ನಿರ್ದೇಶನ ನೀಡಿದರು. ನಗರದ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ತುರ್ತು ವಾಹನಗಳನ್ನು ಹೊರತು ಪಡಿಸಿ, ಉಳಿದ ವಾಹನಗಳು ನಗರದಲ್ಲಿ ಪ್ರವೇಶಿಸಲು ಅವಕಾಶವಿಲ್ಲ. ಸಿನಿಮಾಮಂದಿರ, ಮಾಲ್ ಸೇರಿದಂತೆ ವ್ಯಾಪಾರ ವಹಿವಾಟು ರಾತ್ರಿ 10ಕ್ಕೆ ಬಂದ್ ಆಗಬೇಕು. ಈಗಾಗಲೇ ಜಿಲ್ಲಾಧಿಕಾರಿಗಳು ಸಭೆ, ಸಮಾರಂಭ, ಜಾತ್ರೆಗಳ ಬಗ್ಗೆ ನಿಯಮ ರೂಪಿಸಿ ಆದೇಶ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ವರಿಷ್ಠಾಧಿಕಾರಿಗಳು ಸಹ ಸೂಚನೆ ನೀಡಿದ್ದು ಅವರ ಆದೇಶವನ್ನು ನಾವೆಲ್ಲರೂ…
ತುಮಕೂರು:
ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶಿಕ್ಷಕರು ಕೆಲಸ ಮಾಡುವ ಸ್ಥಳದಲ್ಲಿಯೇ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲೆಯ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗದಂತೆ ತಡೆಯಲು 45 ವರ್ಷ ಹಾಗೂ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಥಮಾದ್ಯತೆಯಾಗಿ ಶಿಕ್ಷಕರಿಗೆ ಅವರ ಕಾರ್ಯ ಸ್ಥಳದಲ್ಲಿಯೇ ಕೋವಿಡ್ ವ್ಯಾಕ್ಸಿನೇಷನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಕಾರ್ಯ ಸ್ಥಳದಲ್ಲಿ 100ಕ್ಕಿಂತ ಹೆಚ್ಚು ಫಲಾನುಭವಿಗಳಿದ್ದಲ್ಲಿ ಮಾತ್ರ ಲಸಿಕೆ ನೀಡಲು ತಾತ್ಕಲಿಕವಾಗಿ ಲಸಿಕಾ ಉಪ ಕೇಂದ್ರಗಳನ್ನು ತೆರದು ಲಸಿಕಾಕರಣ ಮಾಡಲಾಗುವುದು ಎಂದರು. ಸಾಮಾಜಿಕವಾಗಿ ಜನರೊಂದಿಗೆ ಒಡನಾಟ ಹೊಂದಿದ್ದು, ಲಸಿಕೆ ಬಗ್ಗೆ ತಪ್ಪು…
ಮಹಾನಗರ ಪಾಲಿಕೆ : 250.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ
ತುಮಕೂರು : ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ 2021-22ನೇ ಸಾಲಿನ ಆಯ-ವ್ಯಯ ಸಭೆಯಲ್ಲಿ 250.66 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು. ಬಜೆಟ್ ಮಂಡಿಸಿದ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ನಳೀನ ಇಂದ್ರಕುಮಾರ್ ಪಾಲಿಕೆಯು ತನ್ನ ಆರ್ಥಿಕ ಇತಿ-ಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ-ವ್ಯಯ ಅಂದಾಜನ್ನು ತಯಾರಿಸಿದೆ. ಈ ಆಯ-ವ್ಯಯದನ್ವಯ ಒಟ್ಟು ಆರಂಭಿಕ ಶಿಲ್ಕು 2091.45 ಲಕ್ಷ ರೂ. ಸೇರಿ 22996.10ಲಕ್ಷ ರೂ.ಗಳ ಒಟ್ಟು ಅಂದಾಜು ಸ್ವೀಕೃತಿ ಹಣದಲ್ಲಿ 2021-22ನೇ ಸಾಲಿಗಾಗಿ 22745.44 ಲಕ್ಷ ರೂ.ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡನೆ ಮಾಡಲಾಗಿದ್ದು, 250.66ಲಕ್ಷ ರೂ.ಗಳು ಮಿಗತೆಯಲ್ಲಿದೆ ಎಂದು ತಿಳಿಸಿದರು. ಆರ್ಥಿಕ ಇತಿ-ಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತುಮಕೂರು ನಗರ ನಿವಾಸಿಗಳಿಗೆ ಮೂಲಭೂತ…
ಜಾತ್ರೆ, ಸಭೆ, ಸಮಾರಂಭಗಳು ನಡೆಯದಂತೆ ನಿಗಾವಹಿಸಿ – ಡಿಸಿ
ತುಮಕೂರು : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಾತ್ರೆ, ಸಭೆ, ಸಮಾರಂಭ, ನಾಟಕ ಪ್ರದರ್ಶನಗಳು ನಡೆಯದಂತೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಜಾತ್ರೆ, ಮತ್ತಿತರ ಸಭೆ/ ಸಮಾರಂಭಗಳು ನಡೆದರೆ ಆಯಾ ತಾಲ್ಲೂಕಿನ ತಹಶೀಲ್ದಾರ್, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳನ್ನು ಪೂರ್ಣ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ನಿಗಧಿತ ಗುರಿಯಂತೆ ತಾಲ್ಲೂಕುವಾರು ಪ್ರತಿದಿನ ವೈಜ್ಞಾನಿಕವಾಗಿ ಕನಿಷ್ಠ ತಲಾ 500 ಸ್ವಾಬ್ ಸಂಗ್ರಹಣೆ ಮಾಡಬೇಕು. ಸಂಗ್ರಹಿಸಲಾದ ಮಾದರಿಗಳನ್ನು SಂಖI/ IಐI/…
Categories
- epaper (1)
- Trending (1,791)
- ಅಂಕಣಗಳು (3)
- ಇತರೆ ಸುದ್ಧಿಗಳು (123)
- ಕರ್ನಾಟಕ ಸುದ್ಧಿಗಳು (91)
- ತುಮಕೂರು ಜಿಲ್ಲಾ ಸುದ್ಧಿಗಳು (2,108)
- ಬೆಂಗಳೂರು (29)
- ರಾಷ್ಟ್ರೀಯ ಸುದ್ಧಿಗಳು (34)
- ವಿಜ್ಞಾನ – ತಂತ್ರಜ್ಞಾನ (1)
- ವಿದೇಶ ವಾರ್ತೆಗಳು (3)
- ಸಂಪಾದಕೀಯ (1)
- ಸಿನಿಮಾ ಲೋಕ (6)