ದೆಹಲಿ: 

      ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ 0.25ರಷ್ಟು ಅಂಕ ಇಳಿಕೆ ಮಾಡಿದೆ. ಇದರಿಂದಾಗಿ ಈ ಹಿಂದೆ ಇದ್ದ ಶೇ.6.50 ರೆಪೋ ದರ ಈಗ ಶೇ.6.25ಕ್ಕೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಗೃಹ, ಮೋಟಾರು ವಾಹನ ಸಾಲಗಳ ಮೇಲಿನ ಬಡ್ಡಿದರ ಕಡಿಮೆಯಾಗಲಿವೆ.

       ಆರ್‌ಬಿಐನ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ವಿತ್ತೀಯ ನೀತಿ ಇದಾಗಿದೆ. ಆರು ಸದಸ್ಯರನ್ನು ಒಳಗೊಂಡ ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರಕ್ಕೆ ಒಪ್ಪಿಗೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.

      ಆರ್‌ಬಿಐನ ಈ ನಿರ್ಧಾರದಿಂದ ಗೃಹ, ಮೋಟಾರು ವಾಹನ ಸಾಲ ಪಡೆಯುವ ಆಕಾಂಕ್ಷಿಗಳಿಗೆ ಇಎಂಐ ಹೊರೆ ಕಡಿಮೆಯಾಗಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. ಆರ್‌ಬಿಐನ ಈ ದರ ಇಳಿಕೆ ನೀತಿಯನ್ನು ಅನುಸರಿಸಿ ಬ್ಯಾಂಕುಗಳ ತಾವು ನೀಡುವ ಗೃಹ, ಮೋಟಾರು ವಾಹನಗಳ ಸಾಲದ ಮೇಲಿನ ಬಡ್ಡಿಯು ಕಡಿಮೆಯಾಗಲಿದೆ ಎಂದರು.

(Visited 53 times, 1 visits today)