BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ
  • ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ
  • ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು
  • ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ
  • ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ
  • ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪಾಲಿಕೆಯ 2022-23ನೇ ಸಾಲಿ‌ನ ಆಯವ್ಯಯ ಪ್ರಕಟ: ಸ್ವಚ್ಛತೆ-ಹಸಿರು ತುಮಕೂರು ನಿರ್ಮಾಣಕ್ಕೆ ಆದ್ಯತೆ
ತುಮಕೂರು

ಪಾಲಿಕೆಯ 2022-23ನೇ ಸಾಲಿ‌ನ ಆಯವ್ಯಯ ಪ್ರಕಟ: ಸ್ವಚ್ಛತೆ-ಹಸಿರು ತುಮಕೂರು ನಿರ್ಮಾಣಕ್ಕೆ ಆದ್ಯತೆ

By News Desk BenkiyabaleUpdated:May 20, 2022 6:15 pm

ತುಮಕೂರು:
ತುಮಕೂರಿನ ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಉತ್ತಮ ಆರೋಗ್ಯ, ಬೀದಿ ದೀಪ ವ್ಯವಸ್ಥೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಮೂಲಕ ಸ್ವಚ್ಛ ಮತ್ತು ಹಸಿರು ತುಮಕೂರು ನಿರ್ಮಾಣಕ್ಕೆ 2022-23ನೇ ಸಾಲಿನ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಉತ್ತಮ ಸಾರಿಗೆ, ಸಿಸಿ ಟಿವಿ ಅಳವಡಿಕೆ, ಕ್ರೀಡಾಂಗಣ ಅಭಿವೃದ್ಧಿ, ಗ್ಯಾಸ್‍ಲೈನ್ ಜೋಡಣೆ ಮುಂತಾದ ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಗತಿಯಲ್ಲಿರುತ್ತವೆ ಎಂದು ತುಮಕೂರು ಮಹಾನಗರಪಾಲಿಕೆ ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಳಿನ ಇಂದ್ರಕುಮಾರ್ ಅವರು ತಿಳಿಸಿದರು.
ಅವರು ತುಮಕೂರು ಮಹಾನಗರಪಾಲಿಕೆಯ 2022-23ನೇ ಸಾಲಿನ ಆಯವ್ಯಯ ಅಂದಾಜು ಮೇಲಿನ ಭಾಷಣ ಮಾಡುತ್ತಾ, ಪಾಲಿಕೆಯು ತನ್ನ ಆರ್ಥಿಕ ಇತಿಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಆಯವ್ಯಯ ಅಂದಾಜು ತಯಾರಿಸಿದ್ದು, ಒಟ್ಟು ರೂ. 415.94ಲಕ್ಷಗಳ ಉಳಿತಾಯ ಬಜೆಟ್ ಮಂಡಿಸಲು ಸಂತಸವಾಗುತ್ತಿದೆ ಎಂದು ನುಡಿದರು.
2022-23ನೇ ಸಾಲಿಗೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು ರೂ. 20811.15 ಲಕ್ಷಗಳ ಒಟ್ಟು ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ಸ್ವಂತ ಸಂಪನ್ಮೂಲ ರೂ. 7266.15 ಲಕ್ಷಗಳು ಹಾಗೂ ಸರ್ಕಾರದ ಅನುದಾನಗಳಿಂದ 13545.00ಲಕ್ಷ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಆಸ್ತಿ ತೆರಿಗೆಯಿಂದ 4000 ಲಕ್ಷ, ದಂಡದ ರೂಪದಲ್ಲಿ 300ಲಕ್ಷ, ಆಸ್ತಿ ಹಕ್ಕು ಬದಲಾವಣೆ 75ಲಕ್ಷ, ಘನತ್ಯಾಜ್ಯ ಉಪಕರ 300ಲಕ್ಷ, ಜಾಹೀರಾತು ತೆರಿಗೆ 15ಲಕ್ಷ, ಅಧಿಬಾರ ಶುಲ್ಕ 50ಲಕ್ಷ, ಉದ್ದಿಮೆ ಪರವಾನಿಗೆ 200 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ 100ಲಕ್ಷ, ಅಭಿವೃದ್ಧಿ ಮತ್ತು ಸುಧಾರಣಾ ಶುಲ್ಕ 60 ಲಕ್ಷ, ಕೆರೆಗಳ ಪುನರುಜ್ಜೀವನ ಶುಲ್ಕ 25ಲಕ್ಷ, ಕುಡಿಯುವ ನೀರಿನ ಶುಲ್ಕ 1200ಲಕ್ಷ, ಒಳಚರಂಡಿ ಶುಲ್ಕ 100ಲಕ್ಷ, ಒಳಚರಂಡಿ ಹೊಸ ಸಂಪರ್ಕ 150 ಲಕ್ಷ, ಒಳಚರಂಡಿ ಸಕ್ರಮ 25 ಲಕ್ಷ, ಅಂಗಡಿ ಕಟ್ಟಡಗಳ ಬಾಡಿಗೆ 200 ಲಕ್ಷ, ವಾಹನ ನಿಲುಗಡೆ ಶುಲ್ಕ 15ಲಕ್ಷ, ಬಸ್ ನಿಲುವಳಿ ಶುಲ್ಕ 5 ಲಕ್ಷ, ರಸ್ತೆ ಕಡಿತ ಶುಲ್ಕ 100ಲಕ್ಷ ಮತ್ತು ಮಾರುಕಟ್ಟೆ ಶುಲ್ಕಗಳಿಂದ ಪ್ರಸಕ್ತ ಸಾಲಿನಲ್ಲಿ ಪಾಲಿಕೆಗೆ 10 ಲಕ್ಷ, ಬ್ಯಾಂಕುಗಳಿಂದ ಬಡ್ಡಿ 100 ಲಕ್ಷ, ಇತರೆ ಸ್ವೀಕೃತಿಗಳು 126.15ಲಕ್ಷ ಸೇರಿದಂತೆ ಒಟ್ಟು ರೂ. 7266.15ಲಕ್ಷಗಳ ಆದಾಯ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.

2022-23ನೇ ಸಾಲಿನ ಪಾಲಿಕೆಯ ಅಂದಾಜು ನಿರೀಕ್ಷಿತ ವೆಚ್ಚಗಳು :

ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಭತ್ಯೆಗಾಗಿ 1875ಲಕ್ಷ, ವಾಹನ ಇತ್ಯಾದಿ ವೆಚ್ಚ 195ಲಕ್ಷ, ಹೊರಗುತ್ತಿಗೆ ಮಾನವ ಸಂಪನ್ಮೂಲ 100ಲಕ್ಷ, ಗಣಕೀಕೃತ ಮತ್ತು ಕಾಗದರಹಿತ ಕಚೇರಿ 60 ಲಕ್ಷ, ಮನರಂಜನೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ 20.25ಲಕ್ಷ, ರಾಷ್ಟ್ರೀಯ ಹಬ್ಬ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ 45ಲಕ್ಷ, ಪ್ರಕೃತಿ ವಿಕೋಪ/ಆಕಸ್ಮಿಕ ಸಹಾಯಧನಕ್ಕೆ 50ಲಕ್ಷ, ವಿಪತ್ತು ನಿರ್ವಹಣಾ ತಂಡಕ್ಕೆ 10ಲಕ್ಷ, ವಕೀಲರ ಶುಲ್ಕ 120ಲಕ್ಷ, ವಾರ್ಡ್ ಕಮಿಟಿ ರಚನೆ 14ಲಕ್ಷ, ಕೌನ್ಸಿಲ್ ಶಾಖೆಗಾಗಿ 780ಲಕ್ಷ, ಪಾಲಿಕೆಯ ಸದಸ್ಯರ ಅಧ್ಯಯನ ಪ್ರವಾಸ 30ಲಕ್ಷ, ವಾಣಿಜ್ಯ ಸಂಕೀರ್ಣ ನಿರ್ಮಾಣ ನಿರ್ವಹಣೆ 40ಲಕ್ಷ, ಜನಗಣತಿ 65ಲಕ್ಷ, ಮಹಾಪೌರರು ಮತ್ತು ಉಪಮಹಾಪೌರರ ವಿವೇಚನಾ ಅನುದಾನ 150ಲಕ್ಷ, ರಸ್ತೆ ಮತ್ತು ಚರಂಡಿ ನಿರ್ವಹಣೆ, ವೃತ್ತಗಳ ಅಭಿವೃದ್ಧಿಗೆ 4671ಲಕ್ಷ, ಭೂಸ್ವಾಧೀನಕ್ಕಾಗಿ 1000ಲಕ್ಷ, ಸಾರ್ವಜನಿಕ ಬೀದಿ ದೀಪ ವ್ಯವಸ್ಥೆಗಾಗಿ 1632ಲಕ್ಷ, ಸಾರ್ವಜನಿಕ ಆರೋಗ್ಯಕ್ಕಾಗಿ 104ಲಕ್ಷ, ಸಮುದಾಯ ಶೌಚಾಲಯ ನಿರ್ಮಾಣ ನಿರ್ವಹಣೆಗಾಗಿ 100ಲಕ್ಷ, ವೈಯಕ್ತಿಕ ಶೌಚಾಲಯ 50 ಲಕ್ಷ, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಿಷನ್ 5ಲಕ್ಷ ಮತ್ತು ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ 200ಲಕ್ಷ, ಕಾರ್ಮಿಕರು ಹಾಗೂ ಪತ್ರಕರ್ತರಿಗೆ ಆರೋಗ್ಯ ಕೇಂದ್ರ ಸ್ಥಾಪನೆಗಾಗಿ 20ಲಕ್ಷ, ಸಾರ್ವಜನಿಕ ಸ್ಮಶಾನ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 250ಲಕ್ಷ, ವೈಜ್ಞಾನಿಕ ಕಸ ವಿಲೇವಾರಿ 3862ಲಕ್ಷ, ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಗಾಗಿ 100ಲಕ್ಷ, ನೀರು ಸರಬರಾಜಿಗಾಗಿ 3562ಲಕ್ಷ, ಒಳಚರಂಡಿ ನಿರ್ಮಾಣ ಮತ್ತು ನಿರ್ವಹಣೆ 765ಲಕ್ಷ, ಉದ್ಯಾನವನ ನಿರ್ವಹಣೆಗಾಗಿ 480ಲಕ್ಷ, ಸಾರ್ವಜನಿಕ ಮೂಲಭೂತ ಆಸ್ತಿ ನಿರ್ವಹಣೆಗಾಗಿ 1225ಲಕ್ಷ, ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗಾಗಿ 294.24ಲಕ್ಷ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 88.52ಲಕ್ಷ, ದಿವ್ಯಾಂಗ ಚೇತನರಿಗೆ 61.05ಲಕ್ಷ, ಕ್ರೀಡಾ ಚಟುವಟಿಕೆಗಳಿಗೆ 7.63ಲಕ್ಷ, ದೀನದಯಾಳ್ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನಕ್ಕಾಗಿ ಒಟ್ಟು 75ಲಕ್ಷ, ಅಂಗನವಾಡಿ ಕೇಂದ್ರಗಳ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ 25ಲಕ್ಷ ಕಾಯ್ದಿರಿಸಲಾಗಿದ್ದು, 2022-23ನೇ ಸಾಲಿನ ಆಯ-ವ್ಯಯದಲ್ಲಿ ವಿವಿಧ ಲೆಕ್ಕ ಶೀರ್ಷಿಕೆಯಡಿ ಆರ್ಥಿಕ ಇತಿ ಮಿತಿಗೆ ಒಳಪಟ್ಟು ಕ್ರಿಯಾ ಯೋಜನೆಯನ್ನು ತಯಾರಿಸಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಸಭೆಯಲ್ಲಿ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

(Visited 66 times, 1 visits today)
Palike tumkur ಪಾಲಿಕೆ ಬಜೆಟ್
Previous Articleಕಣ್ಣಿನ ಆಪರೇಷನ್ ನೆಪವೊಡ್ಡಿ ವೃದ್ಧೆಯೊಬ್ಬರ ಒಡವೆ ದೋಚಿ ಪರಾರಿ
Next Article ಕೌಶಲ್ಯಾಭಿವೃದ್ದಿ ತರಬೇತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿ
News Desk Benkiyabale

Related Posts

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm news
ತಾಜಾ ಸುದ್ಧಿಗಳು
news

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm
news

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm
news

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm
news

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm
news

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
news

ವಿಶೇಷ ರೋಜ್ಗಾರ್ ದಿನಾಚರಣೆಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಸಮಗ್ರ ಮಾಹಿತಿ

August 08, 2026 4:26 pm
Our Youtube Channel
Our Picks

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

August 08, 2026 5:13 pm

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm

ಅತ್ಯಾಚಾರ ಕೊಲೆ ಪ್ರಕರಣ ದಿನ: ಅಭಯ ದಿನವನ್ನಾಗಿ ಆಚರಣೆ

August 08, 2026 4:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಹೆದ್ದಾರಿಯಲ್ಲಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

By News Desk BenkiyabaleAugust 08, 2026 5:13 pm

ತುಮಕೂರು: ಕೇಂದ್ರ ಸರಕಾರ ಸುಮಾರು ೩೦೦೦ ಕೋಟಿ ರೂಖರ್ಚು ಮಾಡುತ್ತಿರುವ ರಾಷ್ಟಿçÃಯ ಹೆದ್ದಾರಿ ೨೦೬ರಲ್ಲಿ ತಿಪಟೂರು ಸಮೀಪದ ಅಯ್ಯನ ಭಾವಿ…

ರಾಯಚೂರು ಬಿಎಸ್‌ಪಿ ಮುಖಂಡನ ಕೊಲೆ ಪ್ರಕರಣ

August 08, 2026 5:11 pm

ಯಲಿಯೂರು ದಲಿತರಿಗೆ ಅಂಬೇಡ್ಕರ್ ಭವನಕ್ಕೆಂದು ಮೀಸಲಿರಿಸಿದ್ದ ಜಾಗ: ಎರಡು ಸಮುದಾಯಗಳ ನಡುವೆ ವೈಮನಸ್ಸು

August 08, 2026 5:09 pm

ಹುಳಿಯಾರು ಪ.ಪಂ ತುರ್ತು ಸಭೆಯಲ್ಲಿ ಕಾವೇರಿದ ಚರ್ಚೆ

August 08, 2026 4:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.