BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ
  • ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು
  • ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ
  • ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್
  • ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ
  • ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್
  • ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತಾಲ್ಲೂಕು ಕಚೇರಿಗೆ ಬೀಗ ಜಡಿದು ರೈತರಿಂದ ಪ್ರತಿಭಟನೆ
Trending

ತಾಲ್ಲೂಕು ಕಚೇರಿಗೆ ಬೀಗ ಜಡಿದು ರೈತರಿಂದ ಪ್ರತಿಭಟನೆ

By News Desk BenkiyabaleUpdated:July 09, 2019 6:45 pm

ಕುಣಿಗಲ್ :

      ರೈತರಿಗೆ ರಾಗಿ ಖರೀದಿಯಲ್ಲಿ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದಾಗ ಪ್ರತಿಭಟನೆಯನ್ನ ಕೈಬಿಡಿ ರೈತರ ಹಣ ಸಂದಾಯ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ತಿಂಗಳಾದರೂ ಇನ್ನೂ ರೈತರ ರಾಗಿ ದುಡ್ಡು ನೀಡಿಲ್ಲ ಎಂದು ಆರೋಪಿಸಿ ರೈತ ಸಂಘ ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆಯಿತು.

      ಮಹಿಳೆಯರು ಸೇರಿದಂತೆ ಹಲವು ರೈತರು ತಮ್ಮ ಜಮೀನಿನಲ್ಲಿ ರಾಗಿ ಬೆಳೆದು ಖರೀದಿ ಕೇಂದ್ರಕ್ಕೆ ಸುಮಾರು 1087 ರೈತರಿಂದ ಪಡೆದಿದ್ದು ಇದರಲ್ಲಿ 391 ರೈತರಿಗೆ ಮಾತ್ರ ನೀಡಿದ್ದರೂ ಇನ್ನೂ ಹಣ ನೀಡಿಲ್ಲ ಎಂಬ ಅವರ ದೂರಿನ ಮೇರೆಗೆ ಜಿಲ್ಲಾ ಹಸಿರು ಸೇನೆಯ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗುವ ಮೂಲಕ ತಾಲ್ಲೂಕು ಕಚೇರಿ ಮುಂದಿನ ಗೇಟಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಡಿಸಿದರು.

      ರೈತರಿಂದ ರಾಗಿ ಖರೀದಿಸಿದ ಅಧಿಕಾರಿಗಳು ರಶೀದಿಯನ್ನು ನೀಡದೆ ಖಾಲಿ ಚೀಟಿಯಲ್ಲಿ ಬರೆದುಕೊಟ್ಟು ಅದಕ್ಕೆ ಸಹಿ ಮಾಡದೆ ನಕಲಿ ರಸೀತಿಯನ್ನು ನೀಡಿ ಯಾಮಾರಿಸಿದ್ದಾರೆ. ಈ ಹಗರಣದಲ್ಲಿ ಕೇವಲ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ಮಾತ್ರವಲ್ಲ ಇಲಾಖೆಯ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಪಾದಿಸಿದರು. ಕೂಡಲೇ ರೈತರಿಗೆ ರಾಗಿ ಮಾರಾಟದ ಹಣ ನೀಡದಿದ್ದರೆ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಧರಣಿ ನಡೆಸಿದರು.

      ರೈತ ಸಂಘದ ಜಿಲ್ಲಾ ಅಧ್ಯಕ್ಷ ಆನಂದ್‍ಪಟೇಲ್ ಸ್ಥಳದಲ್ಲಿ ತಹಸೀಲ್ದಾರ್ ಇರದ ಕಾರಣ ದೂರವಾಣಿಯಲ್ಲಿ ಮಾತನಾಡಿದ ಅವರಿಗೆ ನೀವು ಹೇಳಿದಂತೆ ನಡೆದುಕೊಂಡಿಲ್ಲ. ರೈತರ ಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡಿ ಜನಪ್ರತಿನಿಧಿಗಳ ಕೈಗೊಂಬೆಯಾಗಬೇಡಿ. ನೀವೆ ಹೇಳಿದಂತೆ ಮೊದಲು ನಮ್ಮ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ನೀಡಿ ಅಲ್ಲಿಯವರೆಗೆ ಪ್ರತಿಭಟನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ನಂತರ ತಹಸೀಲ್ದಾರ್ ಕೆಲವೆ ಗಂಟೆಯಲ್ಲಿ ಬರುತ್ತೇನೆ ಎಂದು ಹೇಳಿ ಪ್ರತಿಭಟನೆ ಕೈಬಿಡಿ ಎಂದು ಕೇಳಿದರೂ ಪ್ರತಿಭಟನಾಕಾರರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲಾ ಎಂದು ಹಠಹಿಡಿದು ಪ್ರತಿಭಟನೆ ಮುಂದುವರೆಸಿದರು. ನಂತರ ಸಂಜೆ ತಹಸೀಲ್ದಾರ್ ಆಗಮಿಸಿ ರೈತರನ್ನ ಮನವೊಲಿಸಿ ಗುರುವಾರ ಉಳಿದ ಎಲ್ಲಾ ರೈತರಿಗೂ ಹಣಕೊಡುವ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

      ಪ್ರತಿಭಟನೆಯಲ್ಲಿ ಹಿತ್ತಲಹಳ್ಳಿ, ರಂಗೇಗೌಡನ ಪಾಳ್ಯ, ಚಂದನಹಳ್ಳಿ ಗ್ರಾಮ ತಿಮ್ಮಮ್ಮ, ನರಸಮ್ಮ, ಗೀತಮ್ಮ ಸೇರಿದಂತೆ ರೈತಸಂಘದ ತಾಲ್ಲೂಕು ಅಧ್ಯಕ್ಷ ಅನಿಲ್, ಕಾರ್ಯದರ್ಶಿ ವೆಂಕಟೇಶ್, ಕೃಷ್ಣಪ್ಪ, ಕುಮಾರ್, ಗಂಗಾಧರ್, ಭಾಗವಹಿಸಿದ್ದರು.

(Visited 13 times, 1 visits today)
Previous Articleಮೈತ್ರಿ ಸರ್ಕಾರ ಕೆಡವಲು ಬಿಜೆಪಿ ಷಡ್ಯಂತ್ರ’ – ಜಿಲ್ಲಾ ಕಾಂಗ್ರೆಸ್
Next Article ಸಭೆಗೆ ಸುಳ್ಳು ಮಾಹಿತಿ ನೀಡಿದರೆ ಕಠಿಣ ಕ್ರಮ!
News Desk Benkiyabale

Related Posts

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

October 17, 2026 6:00 pm news

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm news
ತಾಜಾ ಸುದ್ಧಿಗಳು
news

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

October 17, 2026 6:00 pm
news

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm
news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
news

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
Our Youtube Channel
Our Picks

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

October 17, 2026 6:00 pm

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ

By News Desk BenkiyabaleOctober 17, 2026 6:00 pm

ತುಮಕೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಭಾಷೆಯ ಮೇಲಿನ ಹಿಡಿತ ಮತ್ತು ಪರಿಣಾಮಕಾರಿ ಬರವಣಿಗೆಯ ಕೌಶಲ ಅತ್ಯಂತ ಅಗತ್ಯ. ನಿರಂತರ ಅಧ್ಯಯನ,…

ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು

October 17, 2026 5:58 pm

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.