BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತೀವ್ರ ಬರ: ಸರ್ಕಾರವೇ ರೈತರ ವಿಮಾ ಹಣ ಭರಿಸಲಿ: ವಿಜಯೇಂದ್ರ ಆಗ್ರಹ
  • ಕಾವೇರಿ: ರಾಜ್ಯಕ್ಕೆ ಪದೇ ಪದೆ ಅನ್ಯಾಯ: ವಿಜಯಸೇನೆ ಆಕ್ರೋಶ
  • ಶಿಕ್ಷಣ ಮತ್ತು ಧಾರ್ಮಿಕ ಚಿಂತನೆಗಳು ಸಮಾಜದ ಎರಡು ಕಣ್ಣುಗಳಿದ್ದಂತೆ
  • ರೈಲುಗಳು ನಮ್ಮ ಜೀವನಾಡಿಗಳಾಗಿವೆ
  • ಶಾಸಕ ಟಿ.ಬಿ. ಜಯಚಂದ್ರ ರಾಜೀನಾಮೆ ಸುಳಿವು
  • ಆರ್ಥಿಕ ಸಾಕ್ಷರತಾ ಶಿಬಿರ ಯಶಸ್ವಿ
  • ೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ
  • ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ!!
Trending

ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ!!

By News Desk BenkiyabaleUpdated:February 10, 2020 6:43 pm

ತುಮಕೂರು :

      ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಸದಸ್ಯರು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ಜ್ಯೋತಿಗಣೇಶ್ ಅವರಿಗೆ ಮನವಿ ಸಲ್ಲಿಸಿದರು.

      ತುಮಕೂರು ನಗರದಲ್ಲಿ ಈಗಾಗಲೇ 130 ಅನುದಾನ ರಹಿತ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳ ಹತ್ತಿರದಲ್ಲಿಯೇ ಮತ್ತೊಂದು ಪ್ರಿಸ್ಕೂಲ್ ಶಾಲೆಯನ್ನು ತೆರೆಯಲು ಡಿಡಿಪಿಐ ಹಾಗೂ ಬಿಇಒ ಅನುಮತಿ ನೀಡುತ್ತಿರುವುದು ಸರಿಯಲ್ಲ, ಕಾರ್ಪೋರೇಟ್ ಶಾಲೆಗಳ ವ್ಯಾಮೋಹದಲ್ಲಿ ಅಧಿಕಾರಿಗಳು ಸ್ಥಳೀಯ ಶಾಲಾ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಹಾಲನೂರು ಎಸ್.ಲೇಪಾಕ್ಷಿ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕುವಂತೆ ಕಳೆದ ಜೂನ್‍ನಲ್ಲಿಯೇ ಡಿಡಿಪಿಐ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಿದರು, ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ, ಕಾನೂನು ಉಲ್ಲಂಘಿಸಿ ಇಂತಹ ಶಾಲೆಗಳು ಕಾರ್ಯನಿರ್ವಹಿಸಲು ಅಧಿಕಾರಿಗಳೇ ಅನುವು ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

      ತುಮಕೂರು ನಗರದಲ್ಲಿಯೇ ಹೈದ್ರಾಬಾದ್, ಬಾಂಬೆ ಮೂಲದ ಶಿಕ್ಷಣ ಸಂಸ್ಥೆಗಳ ದಾಂಧಲೆ ಹೆಚ್ಚಿದ್ದು, ಎಂಟು ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ದಾಖಲಾತಿಯನ್ನು ಮಾಡಿಕೊಳ್ಳುತ್ತಿವೆ, ಪ್ರಿಸ್ಕೂಲ್ ಹೆಸರಿನಲ್ಲಿ ಮೂಲಸೌಕರ್ಯವಿಲ್ಲದ ಕಡೆಯೂ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ವೃತ್ತಿಪರತೆ ಇಲ್ಲದ ಶಿಕ್ಷಕರನ್ನು ಈ ಶಾಲೆಗಳು ನೇಮಿಸಿಕೊಳ್ಳುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಇಂದು ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಚೈತನ್ಯ ಟೆಕ್ನೋ, ಪೋದಾರ್, ಶೇಷಾದ್ರಿಪುರಂ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಅನುಮತಿ ಇಲ್ಲದೆ ತರಗತಿಗಳನ್ನು ನಡೆಸುತ್ತಿದ್ದು, ಡಿಡಿಪಿಐ ಕ್ರಮ ಕೈಗೊಳ್ಳದೇ ಹೋದರೆ ಕಚೇರಿಗೆ ಬೀಗ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

      ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀನಿವಾಸ್ ಅವರು ಮಾತನಾಡಿ ಅಧಿಕಾರಿಗಳ ಧೋರಣೆಯಿಂದಾಗಿ ಯಾರು ಬೇಕಾದರೂ ಅನಧಿಕೃತವಾಗಿ ಪ್ರೀ ಸ್ಕೂಲ್ ಪ್ರಾರಂಭ ಮಾಡಬಹುದಾಗಿದೆ, ಶಿಕ್ಷಣ ಇಲಾಖೆಯ ಷರತ್ತುಗಳನ್ನು ಉಲ್ಲಂಘಿಸಿ ಪ್ರಿಸ್ಕೂಲ್ ಪ್ರಾರಂಭ ಮಾಡುತ್ತಿದ್ದು, ಇಂಟಿಗ್ರೇಟೆಡ್ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸ್ಥಳೀಯ ಖಾಸಗಿ ಶಾಲೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

      ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಅಡಿಯಲ್ಲಿ ದಾಖಲಾಗಿರುವ ಮಕ್ಕಳ ಅನುದಾನವನ್ನು ಶಿಕ್ಷಣ ಇಲಾಖೆ ಕಳೆದ ವರ್ಷದಿಂದಲೂ ನೀಡಿಲ್ಲ, ಶೇ.80ರಷ್ಟು ಕಡತವನ್ನು ವಾಪಾಸ್ ಮಾಡಲಾಗಿದೆ, ಮಾರ್ಚ್ ತಿಂಗಳೊಳಗೆ ಮೊದಲ ಹಂತದ ಅನುದಾನ ಬಿಡುಗಡೆಯಾದರೆ ಸರ್ಕಾರದಿಂದ ಅನುದಾನವನ್ನು ಪಡೆಯುವುದಕ್ಕೆ ತೊಂದರೆಯಾಗಲಿದ್ದು, ಡಿಡಿಪಿಐ ಕಚೇರಿಯಿಂದ ಮನಸೋಇಚ್ಛೆ ಶಾಲೆಗೆ ಭೇಟಿ ತೊಂದರೆ ನೀಡುತ್ತಿದ್ದಾರೆ, ಅನುದಾನರಹಿತ ಶಾಲೆಗಳ ಆಡಳಿತಕ್ಕೆ ತೊಂದರೆ ನೀಡುತ್ತಿದ್ದು, ಕಾನೂನುಬದ್ಧವಾಗಿ ನಡೆಸಲು ಅವಕಾಶವನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಅವರು, ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಬೇಡಿಕೆ ಹಳೆಯ ವಿಚಾರವಾಗಿದ್ದು, ಆಂಧ್ರ ಮೂಲದ ಶಾಲೆಗಳು ನಾಯಿ ಕೊಡೆಗಳಂತೆ ಪ್ರಾರಂಭವಾಗುತ್ತಿದ್ದು, ಶಿಕ್ಷಣವನ್ನು ವ್ಯಾಪಾರಿಕರಣ ಮಾಡಲು ಮುಂದಾಗುತ್ತಿದ್ದು, ಅಧಿಕಾರಿಗಳು ಅನುಮತಿ ಇಲ್ಲದ ಶಾಲೆಗಳನ್ನು ಮುಚ್ಚಿಸಲು ಕ್ರಮವಹಿಸಬೇಕು ಎಂದು ಡಿಡಿಪಿಐ ಕಾಮಾಕ್ಷಮ್ಮ ಹಾಗೂ ಬಿಇಒ ರಂಗಧಾಮಪ್ಪ ಅವರಿಗೆ ಸೂಚಿಸಿದರು.

      ಶೈಕ್ಷಣಿಕ ನಗರಿ ತುಮಕೂರು ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು, ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕಬೇಕು, ಹೊರರಾಜ್ಯಗಳ ಶಾಲೆಗಳನ್ನು ತೆರಯುವುದಕ್ಕೆ ಅವಕಾಶ ನೀಡಿದರೆ, ಕನ್ನಡಿಗರ ಸ್ಥಳೀಯ ಶಾಲೆಗಳನ್ನು ಉಳಿಸಲು ತೊಂದರೆಯಾಗಲಿದೆ, ಲಕ್ಷಗಟ್ಟಲೆ ಶುಲ್ಕವನ್ನು ವಸೂಲಿ ಮಾಡುತ್ತಿರುವ ಶಾಲೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.

      ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀತರಾಂ ಅವರು ಮಾತನಾಡಿ ಅಧಿಕಾರಿಗಳು ಶಾಲೆಗೆ ಅನುಮತಿ ಕೊಡುವ ಮುಂಚೆ ಪರಿಶೀಲನೆ ನಡೆಸಬೇಕು, ಅವಶ್ಯಕತೆ ಇಲ್ಲದೆ ಕಡೆ ತರಗತಿಗಳನ್ನು ನಡೆಸಲು ಅನುಮತಿ ಕೊಡಬಾರದು ಇದರಿಂದ ಉಳಿದ ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಅನುಮತಿ ನೀಡಬಾರದು ಒತ್ತಾಯಿಸಿದರು.

      ಪ್ರತಿಭಟನೆಯಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ಲ್ಯಾನ್ಸಿಪಾಯಸ್, ನಯಾಜ್ ಅಹ್ಮದ್, ಶ್ರೀನಿವಾಸ್, ಪ್ರಕಾಶ್, ರಹಮತ್ ಅಲಿ, ಚಂದ್ರಣ್ಣ, ದೇವೇಗೌಡ, ಅರುಣ್‍ಕುಮಾರ್, ಲೋಕೇಶ್, ಪಾಲಾಕ್ಷಯ್ಯ, ಮುಮ್ತಾಜ್ ಬೇಗಂ, ಶರ್ಮಿಳಾ, ರೇಖಾ ಬಾಬು, ಅಶ್ವಿನಿ, ಸೇರಿದಂತೆ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಆಡಳಿತ ಮಂಡಳಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

(Visited 8 times, 1 visits today)
Previous Articleಫೆ.12ರಿಂದ ಫೆ.26ರವರೆಗೆ ಸಿದ್ದಗಂಗಾ ಮಠದಲ್ಲಿ ಕೃಷಿ ಮತ್ತು ವಸ್ತು ಪ್ರದರ್ಶನ!!
Next Article ಸಿದ್ದಲಿಂಗೇಶ್ವರಸ್ವಾಮಿ ಜಾತ್ರಾ ಅಂಗವಾಗಿ ಶ್ರೀಗಳಿಂದ ಭಿಕ್ಷಾಟನೆ!!
News Desk Benkiyabale

Related Posts

ತೀವ್ರ ಬರ: ಸರ್ಕಾರವೇ ರೈತರ ವಿಮಾ ಹಣ ಭರಿಸಲಿ: ವಿಜಯೇಂದ್ರ ಆಗ್ರಹ

August 04, 2026 9:55 pm news

ಕಾವೇರಿ: ರಾಜ್ಯಕ್ಕೆ ಪದೇ ಪದೆ ಅನ್ಯಾಯ: ವಿಜಯಸೇನೆ ಆಕ್ರೋಶ

August 04, 2026 9:38 pm news

ಶಿಕ್ಷಣ ಮತ್ತು ಧಾರ್ಮಿಕ ಚಿಂತನೆಗಳು ಸಮಾಜದ ಎರಡು ಕಣ್ಣುಗಳಿದ್ದಂತೆ

August 04, 2026 9:37 pm news
ತಾಜಾ ಸುದ್ಧಿಗಳು
news

ತೀವ್ರ ಬರ: ಸರ್ಕಾರವೇ ರೈತರ ವಿಮಾ ಹಣ ಭರಿಸಲಿ: ವಿಜಯೇಂದ್ರ ಆಗ್ರಹ

August 04, 2026 9:55 pm
news

ಕಾವೇರಿ: ರಾಜ್ಯಕ್ಕೆ ಪದೇ ಪದೆ ಅನ್ಯಾಯ: ವಿಜಯಸೇನೆ ಆಕ್ರೋಶ

August 04, 2026 9:38 pm
news

ಶಿಕ್ಷಣ ಮತ್ತು ಧಾರ್ಮಿಕ ಚಿಂತನೆಗಳು ಸಮಾಜದ ಎರಡು ಕಣ್ಣುಗಳಿದ್ದಂತೆ

August 04, 2026 9:37 pm
news

ರೈಲುಗಳು ನಮ್ಮ ಜೀವನಾಡಿಗಳಾಗಿವೆ

August 04, 2026 9:35 pm
news

ಶಾಸಕ ಟಿ.ಬಿ. ಜಯಚಂದ್ರ ರಾಜೀನಾಮೆ ಸುಳಿವು

August 04, 2026 9:33 pm
news

ಆರ್ಥಿಕ ಸಾಕ್ಷರತಾ ಶಿಬಿರ ಯಶಸ್ವಿ

August 04, 2026 9:32 pm
Our Youtube Channel
Our Picks

ತೀವ್ರ ಬರ: ಸರ್ಕಾರವೇ ರೈತರ ವಿಮಾ ಹಣ ಭರಿಸಲಿ: ವಿಜಯೇಂದ್ರ ಆಗ್ರಹ

August 04, 2026 9:55 pm

ಕಾವೇರಿ: ರಾಜ್ಯಕ್ಕೆ ಪದೇ ಪದೆ ಅನ್ಯಾಯ: ವಿಜಯಸೇನೆ ಆಕ್ರೋಶ

August 04, 2026 9:38 pm

ಶಿಕ್ಷಣ ಮತ್ತು ಧಾರ್ಮಿಕ ಚಿಂತನೆಗಳು ಸಮಾಜದ ಎರಡು ಕಣ್ಣುಗಳಿದ್ದಂತೆ

August 04, 2026 9:37 pm

ರೈಲುಗಳು ನಮ್ಮ ಜೀವನಾಡಿಗಳಾಗಿವೆ

August 04, 2026 9:35 pm

ಶಾಸಕ ಟಿ.ಬಿ. ಜಯಚಂದ್ರ ರಾಜೀನಾಮೆ ಸುಳಿವು

August 04, 2026 9:33 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತೀವ್ರ ಬರ: ಸರ್ಕಾರವೇ ರೈತರ ವಿಮಾ ಹಣ ಭರಿಸಲಿ: ವಿಜಯೇಂದ್ರ ಆಗ್ರಹ

By News Desk BenkiyabaleAugust 04, 2026 9:55 pm

ತುಮಕೂರು: ಮಳೆ ಇಲ್ಲದೆ ರಾಜ್ಯದಲ್ಲಿ ತೀವ್ರ ಬರಗಾರ ಪರಿಸ್ಥಿತಿ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಫಸಲ್ ಬೀಮಾ ಯೋಜನೆಯ ವಿಮಾ ಯೋಜನೆಗೆ…

ಕಾವೇರಿ: ರಾಜ್ಯಕ್ಕೆ ಪದೇ ಪದೆ ಅನ್ಯಾಯ: ವಿಜಯಸೇನೆ ಆಕ್ರೋಶ

August 04, 2026 9:38 pm

ಶಿಕ್ಷಣ ಮತ್ತು ಧಾರ್ಮಿಕ ಚಿಂತನೆಗಳು ಸಮಾಜದ ಎರಡು ಕಣ್ಣುಗಳಿದ್ದಂತೆ

August 04, 2026 9:37 pm

ರೈಲುಗಳು ನಮ್ಮ ಜೀವನಾಡಿಗಳಾಗಿವೆ

August 04, 2026 9:35 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.