BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’
  • ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ
  • ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ
  • ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ
  • ಹತ್ತು ವರ್ಷಗಳಿಂದ ಈಡೇರದ ಬೇಡಿಕೆ
  • ಕೆಮಿಕಲ್ ಮೇವು ತಿಂದ ೬೨ ಕುರಿಗಳು ಸ್ಥಳದಲ್ಲಿಯೇ ಸಾವು
  • ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ
  • ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು
ಇತರೆ ಸುದ್ಧಿಗಳು

ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು

By News Desk BenkiyabaleUpdated:March 30, 2023 4:54 pm

ತುಮಕೂರು


ಚುನಾವಣಾ ಅಕ್ರಮಗಳ ಆರೋಪದಡಿ ತುಮಕೂರು ಗ್ರಾಮಾಂತರ ಶಾಸಕ
ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಈ ಕುರಿತಂತೆ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಕಲಬುರ್ಗಿ ಪೀಠದಿಂದ ಪ್ರಕಟಿಸಿದೆ.
ಚುನಾವಣೆ ವೇಳೆ ಮತದಾರರಿಗೆ ಇನ್ಸೂರೆನ್ಸ್ ಪಾಲಿಸಿಯ ಆಮಿಷ ನೀಡಿ ಜಯಗಳಿಸಿದ್ದ ಆರೋಪ ಗೌರಿಶಂಕರ್ ಮೇಲಿತ್ತು. ಗೌರಿಶಂಕರ್ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಅರ್ಜಿ ಸಲ್ಲಿಸಿದ್ದರು.
32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ವಿತರಿಸಿದ್ದಾರೆ. 2018ರ ಚುನಾವಣೆಯಲ್ಲಿ ನಕಲಿ ಬಾಂಡ್ ಆಮಿಷ ಒಡ್ಡಿ ಅಕ್ರಮವಾಗಿ ಗೆದ್ದಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗಿತ್ತು.
ಬಿ.ಸುರೇಶ್ ಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು. ಇನ್ನು ತೀರ್ಪು ಹೊರಬೀಳುತ್ತಲೇ ಗೌರಿಶಂಕರ್ ಪರ ವಕೀಲ ಆರ್.ಹೇಮಂತ್ ರಾಜ್, ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ತೀರ್ಪಿಗೆ ತಡೆ ನೀಡಬೇಕು ಎಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.
ನ್ಯಾಯಾಲಯ ಶಾಸಕ ಆಯ್ಕೆಯನ್ನು ಅಸಿಂಧುಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಗೌರಿಶಂಕರ್ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹರಾಗಬಹುದು. ಈಗಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಬೇಕು ಎಂದ ಅವರು ತೀರ್ಪನ್ನು ಪ್ರಶ್ನಿಸಿ 30 ದಿನಗಳಲ್ಲಿ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಬೇಕಾಗಿದೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ ‘2018 ರ ಎಂಎಲ್‍ಎ ಚುನಾವಣೆಯಲ್ಲಿ ಈಗಿನ ಶಾಸಕರು ಸುಮಾರು 16 ಸಾವಿರ ಮಕ್ಕಳಿಗೆ ಪಾಲಿಸಿ ಇನಶೂರೆನ್ಸ್ ಬಾಂಡ್ ವಿತರಣೆ ಮಾಡಿದ್ರು. ಅದು ನಕಲಿ ಬಾಂಡ್ ನೀಡಿ ಆಮಿಷವೊಡ್ಡಿ ಮತದಾರರನ್ನ ಸೆಳೆಯುವ ಕೆಲಸ ಮಾಡಿದ್ರು. ನಕಲಿ ಬಾಂಡ್‍ಗಳನ್ನ ವಿತರಣೆ ಮಾಡುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಅಕ್ರಮ ಎಸಗಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ರು, ಕಳೆದ 2018 ರ ಮೇ 12 ಕ್ಕೆ ಚುನಾವಣೆ ಇತ್ತು. ಮೇ 8 ಕ್ಕೆ ನಕಲಿ ಬಾಂಡ್ ರದ್ದು ಮಾಡ್ತಾರೆ. ಇದಾದ ಬಳಕ ಹಿರೇಹಳ್ಳಿ ಮಹೇಶ್ ಹಾಗೂ ಶಾರದಮ್ಮ ಎಂಬುವವರು ಸುದ್ದಿಗೊಷ್ಠಿ ನಡೆಸಿ ಇದು ಒರಿಜಿನಲ್ ಬಾಂಡ್, ನಕಲಿ ಅಲ್ಲಾ ಎಂದು ಹೇಳುತ್ತಾರೆ. ಗೂಳೂರಿನ ಜಿಲ್ಲಾ ಪಂಚಾಯ್ತಿ ಸದಸ್ಯ ಪಾಲನೆತ್ರಯ್ಯ ಎಂಬಾತ ಬಾಂಡ್ ಗಳನ್ನ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿಳ್ತಾರೆ. ಚುನಾವಣಾ ಅಕ್ರಮ ನಡೆಸಿದ್ರೆ 45 ದಿನದ ಒಳಗೆ, ಚುನಾವಣಾ ಆಯೋಗಕ್ಕೆ ನಾವು ತಕರಾರು ಅರ್ಜಿ ಸಲ್ಲಿಸಬೇಕು. ನಾವು ಆ ತಕರಾರು ಅರ್ಜಿ ಸಲ್ಲಿಸಿದ್ದೆವು.
ತಿಂಗಳಲ್ಲಿ ತಿರ್ಪು ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಇಷ್ಟು ದಿನ ಸಮಯ ಹಿಡಿತು.
ಇದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಹೈಕೋರ್ಟ್ ರಿಜೆಕ್ಟ್ ಮಾಡಿ ತನಿಖೆಗೆ ಸಹಕರಿಸುವಂತೆ ನಮಗೆ ಮಾಹಿತಿ ಕೊಡ್ತು. ಕರೋನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳ ಕಾಲ ಕೋರ್ಟ್ ಮುಚ್ಚಿತ್ತು. ಹೀಗಾಗಿ ತಿರ್ಪು ಬರಲು ತಡವಾಯ್ತು. ಇವತ್ತು ನಕಲಿ ಬಾಂಡ್ ಕೇಸ್ ಬಗ್ಗೆ ತೀರ್ಪು ಬಂದಿದೆ. ಗೌರಿಶಂಕರ್ ಅವರನ್ನ ಶಾಸಕ ಸ್ಥಾನದಿಂದ ಅನರ್ಹ ಮಾಡೋಕು ಅಂತ ನ್ಯಾಯಾಲಯ ತಿರ್ಪು ನೀಡಿದ್ದು ನಾನು ಅದನ್ನ ಸ್ವಾಗತ ಮಾಡ್ತಿನಿ. ಇವತ್ತು ರಾಮನವಮಿ ದಿನವೇ ತಿರ್ಪು ಬಂದಿದೆ. ಸತ್ಯಕ್ಕೆ ಜಯ ಸಿಕ್ಕಿದೆ. ಅಕ್ರಮ ಎಸಗಿ ಚುನಾವಣೆ ನಡೆಸಬಾರದು ಎಂಬ ಸಂದೇಶವನ್ನ ಕೊಟ್ಟಿದೆ. ಈಗ ಅವರಿಗೆ ಒಂದು ತಿಂಗಳ ಕಾಲ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಗೌರಿಶಂಕರ್ ಜೊತೆ ಇನ್ನು ಐದು ಜನ ಅನರ್ಹರಾಗಿದ್ದಾರೆ. ಹಿರೇಹಳ್ಳಿ ಮಹೇಶ್, ರೇಣುಕಮ್ಮ, ಪಾಲನೇತ್ರಯ್ಯ. ಸೇರಿದಂತೆ ಐದು ಜನ ಅನರ್ಹರಾಗಿದ್ದಾರೆ. ಇವತ್ತಿನಿಂದಲೇ ಅವರ ಸ್ಥಾನ ಅನರ್ಹ ಆಗುತ್ತೆ. ತಪ್ಪು ಮಾಡಿದ್ರೆ ಪ್ರತಿಯೊಬ್ಬರಿಗೂ ಶಿಕ್ಷೆ ಆಗುತ್ತೆ ಅನ್ನೋದಿಕ್ಕೆ ಇದೊಂದು ಐತಿಹಾಸಿಕ ತಿರ್ಪು ಸಾಕ್ಷಿ’’ ಎಂದು ಹೇಳಿದ್ದಾರೆ.

(Visited 1 times, 1 visits today)
tumakur tumkur
Previous Articleವ್ಯಾಕರಣವನ್ನು ಮೀರಿದ ಭಾಷೆ ಕುಮಾರವ್ಯಾಸನದ್ದು
Next Article ಕೈ ಹಿಡಿದ ಗುಬ್ಬಿ ಶ್ರೀನಿವಾಸ್
News Desk Benkiyabale

Related Posts

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm news

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm news

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm news
ತಾಜಾ ಸುದ್ಧಿಗಳು

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm

ಹತ್ತು ವರ್ಷಗಳಿಂದ ಈಡೇರದ ಬೇಡಿಕೆ

July 17, 2026 5:01 pm

ಕೆಮಿಕಲ್ ಮೇವು ತಿಂದ ೬೨ ಕುರಿಗಳು ಸ್ಥಳದಲ್ಲಿಯೇ ಸಾವು

July 17, 2026 4:59 pm
Our Youtube Channel
Our Picks

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

July 17, 2026 5:21 pm

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm

ಹತ್ತು ವರ್ಷಗಳಿಂದ ಈಡೇರದ ಬೇಡಿಕೆ

July 17, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

By News Desk BenkiyabaleJuly 17, 2026 5:21 pm

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವನ್ನು ರಾಷ್ಟçಮಟ್ಟದಲ್ಲಿ ಕೀರ್ತಿಯ ಶಿಖರಕ್ಕೆ ಏರಿಸಿರುವ ಪ್ರೊ. ಎಂ. ವೆಂಕಟೇಶ್ವರಲು ಅವರ ಕಾರ್ಯ ವೈಖರಿ ಹೆಮ್ಮೆಯ ವಿಚಾರ.…

ಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ

July 17, 2026 5:19 pm

ತಾಲ್ಲೂಕಿನಲ್ಲಿ ಭವನ ನಿರ್ಮಾಣಕ್ಕೆ ಸದಸ್ಯರ ಒಕ್ಕೊರಲ ಮನವಿ

July 17, 2026 5:18 pm

ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ಕೆಲಸ ಮಾಡಿ

July 17, 2026 5:26 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.