BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ
  • ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಅಭಿಯಾನದ ಉದ್ದೇಶ
  • ಗಣಿತಕ್ಕೆ ತಂತ್ರಜ್ಞಾನದ ಸ್ಪರ್ಶ; ಸಂಕೀರ್ಣ ಸಮಸ್ಯೆಗಳಿಗೂ ಸುಲಭ ಪರಿಹಾರ
  • ಕೆಪಿಎಸ್ ಮ್ಯಾಗ್ನೆಟ್ ಯೋಜನೆ: ನಾಡಿನ ಜನತೆಗೆ ದ್ರೋಹ
  • ಸ್ಲಂಗಳಲ್ಲಿ ವಾಸಿಸುವ 1,257 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
  • ಮಾನವನ ಕೆಲಸಕ್ಕೆ ಹೊಸ ವೇಗ ನೀಡಲಿವೆ ಎಐ ಆಧಾರಿತ ರೋಬೋಟ್‍ಗಳು
  • ಇತಿಹಾಸ ಮರೆತರೆ ಸಂಸ್ಕೃತಿ, ಪರಂಪರೆಯ ಅಸ್ತಿತ್ವಕ್ಕೇ ಧಕ್ಕೆ
  • ಒನಕೆ ಓಬವ್ವ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರೈತರ ಪರವಾಗಿ ಕೆಲಸ ಮಾಡಿ, ಇಲ್ಲವಾದರೇ ಜೋಕೆ : ಶಾಸಕರ ಎಚ್ಚರಿಕೆ
Trending

ರೈತರ ಪರವಾಗಿ ಕೆಲಸ ಮಾಡಿ, ಇಲ್ಲವಾದರೇ ಜೋಕೆ : ಶಾಸಕರ ಎಚ್ಚರಿಕೆ

By News Desk BenkiyabaleUpdated:April 20, 2021 7:00 pm

ಕೊರಟಗೆರೆ:

      ಎತ್ತಿನಹೊಳೆ ಅಧಿಕಾರಿ ವರ್ಗ ರೈತರ ಪರವಾಗಿ ನಿಲ್ಲಬೇಕು. ಗುತ್ತಿಗೆದಾರರ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸ ಬೇಕು. ರೈತರಿಗೆ ಪರಿಹಾರ ನೀಡದೇ ಈಗಾಗಲೇ ಅವರ ಜಮೀನಿನಲ್ಲಿ ಪೈಪ್‍ಲೈನ್ ಅಳವಡಿಸಿದ್ದೀರಾ. ಬಡ ರೈತರಿಗೆ ಅನ್ಯಾಯ ಮಾಡಿದರೇ ಸುಮ್ಮನಿರೋಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.

      ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಯಲುಸೀಮೆ ಪ್ರದೇಶವಾದ ನಮ್ಮ ಕೊರಟಗೆರೆ, ಮಧುಗಿರಿ, ಪಾವಗಡ ಸೇರಿದಂತೆ ತುಮಕೂರು ಜಿಲ್ಲೆಗೆ ನೀರು ಬರುತ್ತಿರುವ ಒಳ್ಳೆಯ ಕೆಲಸಕ್ಕೆ ಅಡ್ಡಿ ಆಗಬಾರದು ಎನ್ನುವ ಉದ್ದೇಶದಿಂದ ಸುಮ್ಮನಿದ್ದೇವೆ. ನಮ್ಮ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳುತ್ತೀರಾ. ತುಮಕೂರು ಜಿಲ್ಲೆಯ ಶಾಸಕರು ಮತ್ತು ಸಂಸದರನ್ನು ಗಣನೆಗೆ ತೆಗೆದುಕೊಳ್ಳದಿದ್ದರೇ ತಕ್ಕ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಕೆಂಡಾಮಂಡಲ ಆದರು.
ಕೊರೊನಾ ರೋಗದಿಂದ ಜನಸಾಮಾನ್ಯರ ಜೀವನ ಸಂಪೂರ್ಣ ಕುಗ್ಗಿದೆ. ಇಂತಹ ಸಮಯದಲ್ಲಿ ಸರಕಾರಿ ಅಧಿಕಾರಿವರ್ಗ ಬೇಕಾಬಿಟ್ಟಿ ಕೆಲಸ ಮಾಡಿದರೆ ನಿಮ್ಮ ಆಟ ನಡಿಯೋದಿಲ್ಲ. ನಿಮ್ಮೆಲ್ಲರ ವಿರುದ್ದ ಸರಕಾರಕ್ಕೆ ವರದಿ ಕಳಿಸುತ್ತೇನೆ. ಜನಸಾಮಾನ್ಯರ ಕೆಲಸ ಮಾಡಿದರೆ ನಾನು ಎಂದಿಗೂ ನಿಮ್ಮೊಂದಿಗೆ ಇರುತ್ತೇನೆ. ನನ್ನ ಒಳ್ಳೆಯತನ ನಿಮಗೆ ದುರಪಯೋಗ ಆಗದಿರಲಿ ಎಂದು ಎಚ್ಚರಿಕೆ ನೀಡಿದರು.

      ಕೊರೊನಾ ರೋಗ ಮತ್ತು ಅಂಕಿ ಅಂಶದ ಬಗ್ಗೆ ತಪ್ಪು ನೀಡಬೇಡಿ. ಜನಸಾಮಾನ್ಯರಿಗೆ ಸರಿಯಾದ ಮಾಹಿತಿಯನ್ನು ನೀಡಿ. ಸರಕಾರದ ಮಾರ್ಗಸೂಚಿ ಪಾಲಿಸದೆ ಮುಂಜಾಗ್ರತೆ ಕ್ರಮಗಳ ಬಗ್ಗೆ ತಯಾರಿ ಮಾಡಿಕೊಳ್ಳದೆ ಇರುವ ಆರೋಗ್ಯ ಇಲಾಖೆ ಟಿಎಚ್‍ಓಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದ ದೊಡ್ಡರಂಗಮ್ಮನಿಂದ ಮತ್ತೆ ಹಿಂಪಡೆದಿರುವ ಕಿರಿಯ ಸಹಾಯಕ ನಿರ್ದೆಶಕ ನಾಗರಾಜು ಮೇಲೆ ಕ್ರಮ ಏಕೆ ಕೈಗೊಂಡಿಲ್ಲ ಎಂದು ಹಿರಿಯ ಸಹಾಯಕಿ ನಿರ್ದೆಶಕಿಗೆ ಪ್ರಶ್ನಿಸಿದರು. ಕರ್ತವ್ಯ ಲೋಪ ಮತ್ತು ಅನುಧಾನ ದುರುಪಯೋಗದ ಬಗ್ಗೆ ತನಿಖೆ ನಡೆಸುವಂತೆ ಸರಕಾರದ ಕಾರ್ಯದರ್ಶಿ ಮತ್ತು ತೋಟಗಾರಿಕೆ ಇಲಾಖೆಗೆ ಪತ್ರ ಬರೆಯುವಂತೆ ತಾಪಂ ಇಓಗೆ ಸೂಚಿಸಿದರು.
ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ ಎತ್ತಿನಹೊಳೆ ಅಧಿಕಾರಿವರ್ಗ ಬಡರೈತರ ಜೀವನದಲ್ಲಿ ಆಟ ಆಡಬಾರದು. ಸರಕಾರದ ಆದೇಶ ಇಲ್ಲದೆ ಸ್ವಾದೀನ ಮಾಡಿಕೊಂಡ ರೈತರ ಜಮೀನುಗಳಿಗೆ ಪರಿಹಾರ ಧನವನ್ನು ನೀಡಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಜಿಪಂ ಎಇಇ ಮಂಜುನಾಥ್‍ಗೆ ಸೂಚಿಸಿದರು.

     ತ್ರೈಮಾಸಿಕ ಸಭೆಯಲ್ಲಿ ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಇಒ ಶಿವಪ್ರಕಾಶ್, ಟಿಹೆಚ್‍ಓ ವಿಜಯಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಜಿಪಂ ಎಇಇ ಮಂಜುನಾಥ್, ಕೃಷಿ ಅಧಿಕಾರಿ ನಾಗರಾಜು, ರೇಷ್ಮೆ ಇಲಾಖೆ ಅಧಿಕಾರಿ ಲಕ್ಷ್ಮೀನರಸಿಪ್ಪ, ನರೇಗಾ ಸಹಾಯಕ ನಿರ್ದೇಶಕ ನಾಗರಾಜು, ಸಿಡಿಪಿಒ ಅಂಬಿಕಾ ಸೇರಿದಂತೆ ಇತರರು ಇದ್ದರು.

(Visited 2 times, 1 visits today)
Previous Articleಗ್ರಾಮಗಳಿಗೆ ಕೋವಿಡ್-19 ವ್ಯಾಪಿಸದಂತೆ ಕ್ರಮಕೈಗೊಳ್ಳಿ; ಡಿಸಿ
Next Article ತುಮಕೂರು : ಮಾಲ್-ಚಿತ್ರಮಂದಿರ-ವಾಣಿಜ್ಯ ಮಳಿಗೆಗಳಿಗೆ ಡಿಸಿ, ಎಸ್ಪಿ ಧಿಡೀರ್ ಭೇಟಿ
News Desk Benkiyabale

Related Posts

ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ

November 07, 2026 5:44 pm news

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಅಭಿಯಾನದ ಉದ್ದೇಶ

November 07, 2026 5:42 pm news

ಗಣಿತಕ್ಕೆ ತಂತ್ರಜ್ಞಾನದ ಸ್ಪರ್ಶ; ಸಂಕೀರ್ಣ ಸಮಸ್ಯೆಗಳಿಗೂ ಸುಲಭ ಪರಿಹಾರ

November 07, 2026 5:40 pm news
ತಾಜಾ ಸುದ್ಧಿಗಳು
news

ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ

November 07, 2026 5:44 pm
news

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಅಭಿಯಾನದ ಉದ್ದೇಶ

November 07, 2026 5:42 pm
news

ಗಣಿತಕ್ಕೆ ತಂತ್ರಜ್ಞಾನದ ಸ್ಪರ್ಶ; ಸಂಕೀರ್ಣ ಸಮಸ್ಯೆಗಳಿಗೂ ಸುಲಭ ಪರಿಹಾರ

November 07, 2026 5:40 pm
news

ಕೆಪಿಎಸ್ ಮ್ಯಾಗ್ನೆಟ್ ಯೋಜನೆ: ನಾಡಿನ ಜನತೆಗೆ ದ್ರೋಹ

November 07, 2026 5:39 pm
news

ಸ್ಲಂಗಳಲ್ಲಿ ವಾಸಿಸುವ 1,257 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

November 07, 2026 5:37 pm
news

ಮಾನವನ ಕೆಲಸಕ್ಕೆ ಹೊಸ ವೇಗ ನೀಡಲಿವೆ ಎಐ ಆಧಾರಿತ ರೋಬೋಟ್‍ಗಳು

November 06, 2026 9:58 pm
Our Youtube Channel
Our Picks

ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ

November 07, 2026 5:44 pm

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಅಭಿಯಾನದ ಉದ್ದೇಶ

November 07, 2026 5:42 pm

ಗಣಿತಕ್ಕೆ ತಂತ್ರಜ್ಞಾನದ ಸ್ಪರ್ಶ; ಸಂಕೀರ್ಣ ಸಮಸ್ಯೆಗಳಿಗೂ ಸುಲಭ ಪರಿಹಾರ

November 07, 2026 5:40 pm

ಕೆಪಿಎಸ್ ಮ್ಯಾಗ್ನೆಟ್ ಯೋಜನೆ: ನಾಡಿನ ಜನತೆಗೆ ದ್ರೋಹ

November 07, 2026 5:39 pm

ಸ್ಲಂಗಳಲ್ಲಿ ವಾಸಿಸುವ 1,257 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

November 07, 2026 5:37 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಖಾಸಗಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ

By News Desk BenkiyabaleNovember 07, 2026 5:44 pm

ತುಮಕೂರು: ತುಮಕೂರು ನಗರ ಹಾಗೂ ಸುತ್ತಮುತ್ತ ಪ್ರದೇಶಗಳಿಂದ ಸಂಚರಿಸುವ ಖಾಸಗಿ ಬಸ್ಸುಗಳ ದರ ಶೇ17 ರಿಂದ 20 ರಷ್ಟು ಹೆಚ್ಚಳ…

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಪ್ರಜಾಸೇವಾ ಅಭಿಯಾನದ ಉದ್ದೇಶ

November 07, 2026 5:42 pm

ಗಣಿತಕ್ಕೆ ತಂತ್ರಜ್ಞಾನದ ಸ್ಪರ್ಶ; ಸಂಕೀರ್ಣ ಸಮಸ್ಯೆಗಳಿಗೂ ಸುಲಭ ಪರಿಹಾರ

November 07, 2026 5:40 pm

ಕೆಪಿಎಸ್ ಮ್ಯಾಗ್ನೆಟ್ ಯೋಜನೆ: ನಾಡಿನ ಜನತೆಗೆ ದ್ರೋಹ

November 07, 2026 5:39 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.