ತುಮಕೂರು:

        ತುಮಕೂರು ಟೌನ್‍ಹಾಲ್ ಸರ್ಕಲ್ ಬಳಿಯ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚಿತ್ರಕಲಾ ಪರಿಷತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಚಿತ್ರಕಲಾ ಶಿಕ್ಷಕರಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

      ಕಾರ್ಯಕ್ರಮವನ್ನು ಶ್ರೀ ಬೂಬಾಲನ್, ಆಯುಕ್ತರು, ಮಹಾನಗರ ಪಾಲಿಕೆ ಇವರು ಸ್ವತಃ ಚಿತ್ರವನ್ನು ಬಿಡಿಸುವುದರ ಮುಖಾಂತರ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಚಿತ್ರಕಲೆಯು ಸಾರ್ವಜನಿಕರ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಸಂದೇಶಗಳನ್ನು ತಲುಪಿಸುವ ಉತ್ತಮ ಸಾಧನವಾಗಿದ್ದು, ಅದಕ್ಕೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ 2019ರ ಲೋಕಸಭಾ ಚುನಾವಣೆಯಲ್ಲಿ ಚಿತ್ರಕಲಾ ಕಲಾವಿದರು ತಮ್ಮ ಕುಂಚಗಳಲ್ಲಿ ಅರಳಿಸುವ ಚುನಾವಣಾ ಮಹತ್ವವನ್ನು ಸಾರುವ ಚಿತ್ರಕಲೆಯು ಹಲವಾರು ಜನರನ್ನು ತಲುಪಿ, ಆ ಮೂಲಕ ಅವರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕಾರ್ಯವನ್ನು ಮಾಡಲಿದ್ದು, ಕಲಾವಿದರು ತಮ್ಮ ಯೋಚನಾ ಶಕ್ತಿಯನ್ನು ಉಪಯೋಗಿಸಿಕೊಂಡು ಸಂದೇಶ ಸಾರುವ ಸುಂದರ ಚಿತ್ರಗಳನ್ನು ರಚಿಸಬೇಕೆಂದು ಕೋರುತ್ತಾ ಅವರಿಗೆ ಶುಭ ಹಾರೈಸಿದರು.

      ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರಾದ ಶ್ರೀಮತಿ. ವಾಸಂತಿ ಉಪ್ಪಾರ್‍ರವರು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿರುವ ವಿನೂತನವಾದ ಈ ಕಾರ್ಯಕ್ರಮದಲ್ಲಿ ಕಲಾವಿದರು “ಆಮಿಷವಿಲ್ಲದ ಮತದಾನ”, “ಸಮಾಜದ ಎಲ್ಲಾ ಸ್ಥರದ ಜನರ ಚುನಾವಣೆಯಲ್ಲಿ ಭಾಗವಹಿಸುವಿಕೆ” “ವಿಕಲಚೇತನರಿಗೆ ಮತದಾನಕ್ಕಾಗಿ ಒದಗಿಸಿರುವ ವಿಶೇಷ ಸೌಲಭ್ಯಗಳು”, ಗರ್ಭಿಣಿ, ಬಾಣಂತಿ, ವಿಕಲಚೇತನರಿಗೆ ಹಾಗೂ ತೃತೀಯ ಲಿಂಗಗಳಿಗೆ ಮತದಾನ ಮಾಡಲು ನೀಡಲಾಗಿರುವ ಆದ್ಯತೆ ಹಾಗೂ ಆಮಿಷ ತೋರುವ ಜನರ ವಿರುದ್ಧ ಅ-ಗಿIಉIಐ ಆ್ಯಪ್ ಮುಖಾಂತರ ದೂರು ದಾಖಲಿಸುವ ಸಂದೇಶಗಳನ್ನು ಸಾರುವ ಚಿತ್ರಗಳನ್ನು ಬಿಡಿಸಬೇಕೆಂದು ಸ್ಪರ್ಧೆಯ ನಿಯಮಗಳನ್ನು ತಿಳಿಸಿದರು.

      ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರಕಲಾ ಪರಿಷತ್‍ನ ಶ್ರೀ ರಮೇಶ್‍ರವರು ಮಾತನಾಡಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಕಲಾವಿದರನ್ನು ದೇಶದ ಹಿತಕ್ಕಾಗಿ ಚುನಾವಣೆಯ ಮಹತ್ವ ಸಾರುವ ಸಂದೇಶಗಳನ್ನು ಎಲ್ಲೆಡೆ ಪ್ರಚಾರ ಪಡಿಸಲು ಚಿತ್ರ ಕಲಾವಿದರನ್ನು ಬಳಸಿಕೊಳ್ಳುತ್ತಿರುವುದು ತಮಗೆ ಹೆಮ್ಮೆಯ ಹಾಗೂ ಗೌರವ ತರುವ ವಿಷಯವಾಗಿದ್ದು, ಈ ಅಧಿಕಾರವನ್ನು ಕೇವಲ ಬಹುಮಾನಕ್ಕಾಗಿ ಮಾತ್ರವಲ್ಲದೆ ದೇಶಾಭಿಮಾನಕ್ಕಾಗಿ ಬಳಸಿಕೊಂಡು ಉತ್ತಮ ಚಿತ್ರಪಟಗಳನ್ನು ರಚಿಸಲಾಗುವುದೆಂದು ತಿಳಿಸಿದರು

      ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶ್ರೀಮತಿ. ಶುಭಾ ಕಲ್ಯಾಣ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಹಾಗೂ ಅಧ್ಯಕ್ಷರು, ಜಿಲ್ಲಾ ಸ್ವೀಪ್ ಸಮಿತಿ ಇವರು ಮಾತನಾಡುತ್ತ ಎಲ್ಲಾ ಕಲಾವಿದರು ಒಬ್ಬರಿಗಿಂತ ಒಬ್ಬರು ಉತ್ತಮವಾದ ಹಾಗೂ ಅರ್ಥಗರ್ಭಿತ ಸಂದೇಶಗಳನ್ನು ಚಿತ್ರಿಸಿದ್ದು, ಎಲ್ಲಾ ಚಿತ್ರಗಳು ಉತ್ಕøಷ್ಟವಾಗಿವೆ ಎಂದು ಎಲ್ಲಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.

      ಪ್ರಥಮ ಬಹುಮಾನ – ಶ್ರೀ ಓಂಕಾರ್, ದ್ವೀತಿಯ ಬಹುಮಾನ – ಎಸ್.ವಿ. ಆನಂದ್, ತೃತೀಯ ಬಹುಮಾನ – ಶ್ರೀಮತಿ. ಹೇಮ ಪಿ. ಹಾಗೂ ಸಮಾಧಾನಕರ ಬಹುಮಾನಗಳನ್ನು ಶ್ರೀಮತಿ. ಹೀನಾಕೌಸರ್, ಮಂಜುಳ ಕೆ.ಸಿ, ಶ್ರೀ ರಂಗಸ್ವಾಮಿ ಜಿ.ಟಿ., ಶ್ರೀ ಜಗದೀಶ್ ಪಿ.ಜಿ ಹಾಗೂ ಶಿವಾನಂದಾರಾಧ್ಯ ಇವರು ಪಡೆದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಶ್ರೀ ಪ್ರಭು ಹೊಸೂರು, ಶ್ರೀ ಮನು ಚಕ್ರವರ್ತಿ ಕೆ.ಎನ್., ಶ್ರೀ ರವೀಶ್ ಕೆ.ಎಂ,ರವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರಾದ ಶ್ರೀ ಮಹಂಕಾಳಪ್ಪ, ಶ್ರೀ ರಾಜಶೇಖರ್, ಶ್ರೀ ರಾಜ್‍ಕುಮಾರ್, ಶ್ರೀಮತಿ. ವಾಸಂತಿ ಉಪ್ಪಾರ್, ಶ್ರೀ ದೇವರಾಜ್, ಶ್ರೀ ಶ್ರೀನಿವಾಸ್, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ|| ನಾಗೇಶ್‍ಕುಮಾರ್ ಭಾಗವಹಿಸಿದ್ದರು.

(Visited 120 times, 1 visits today)