BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ
  • ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ
  • ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ
  • ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ
  • ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ
  • ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ
  • ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ
  • ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗ್ರಾಮೀಣ ಭಾಗದಲ್ಲಿ ಸೋಂಕಿನ ಪ್ರಮಾಣ ಇಳಿಸಲು ಜಿಲ್ಲಾಡಳಿತಕ್ಕೆ ಸಿಎಂ ಸೂಚನೆ
Trending

ಗ್ರಾಮೀಣ ಭಾಗದಲ್ಲಿ ಸೋಂಕಿನ ಪ್ರಮಾಣ ಇಳಿಸಲು ಜಿಲ್ಲಾಡಳಿತಕ್ಕೆ ಸಿಎಂ ಸೂಚನೆ

By News Desk BenkiyabaleUpdated:May 28, 2021 6:51 pm

ತುಮಕೂರು : 

      ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಹರಡುತ್ತಿರುವ ಕೋವಿಡ್19 ಎರಡನೇ ಅಲೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಹಳ್ಳಿಗಳ ಕೋವಿಡ್ ನಿರ್ವಹಣೆಗೆ ಗ್ರಾಮ ಪಂಚಾಯ್ತಿ ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೋವಿಡ್-19 ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವ್ ಪ್ರಮಾಣದ ಇಳಿಕೆಗೂ ಸೂಚನೆ ನೀಡಿದರು.

      ಕೋವಿಡ್ 19 ಎರಡನೇ ಅಲೆ ರಾಜ್ಯವನ್ನು ತೀವ್ರವಾಗಿ ಬಾಧಿಸಿದೆ. ಬೆಂಗಳೂರಿನ ನೆರೆಯ ಜಿಲ್ಲೆಯಾದ ತುಮಕೂರಿನಲ್ಲಿಯೂ ಪರಿಸ್ಥಿತಿ ಗಂಭೀರವಾಗಿತ್ತು. ಸಮರ್ಪಕ ನಿರ್ವಹಣೆಯಿಂದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಸುಧಾರಣೆ ಕಂಡುಬಂದಿದೆ ಎಂದರು.

       ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಮಾಹೆಯಲ್ಲಿ 18,749 ಕೋವಿಡ್ ಪ್ರಕರಣ ದೃಢವಾಗಿದ್ದು, 131 ಮಂದಿ ಮೃತಪಟ್ಟಿದ್ದಾರೆ. ಅದೇ ರೀತಿ ಮೇ ಮಾಹೆಯಲ್ಲಿ 48,643 ಪ್ರಕರಣಗಳು ದೃಢಪಟ್ಟಿದ್ದು, 314 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಏಪ್ರಿಲ್ ತಿಂಗಳಿಗಿಂತಲೂ ಮೇ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಮರಣದ ಸಂಖ್ಯೆ ಹೆಚ್ಚಾಗಿದ್ದು, ಜನರ ಜೀವ ಉಳಿಸಲು ಸಹ ಆದ್ಯತೆ ನೀಡಬೇಕಾಗಿದೆ ಎಂದು ನಿರ್ದೇಶಿಸಿದರು.

     ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಸತತ ಪ್ರಯತ್ನ ನಡೆಸಿದ್ದರ ಫಲವಾಗಿ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವುದು ಸಮಾಧಾನ ತಂದಿದೆ. ಆರಂಭದಲ್ಲಿ ಶೇ.45ರಷ್ಟಿದ್ದ ಸೋಂಕಿನ ಪ್ರಮಾಣ ಹಂತ ಹಂತವಾಗಿ ಇಳಿಕೆಯಾಗಿ ಪ್ರಸ್ತುತ ಶೇ.25ಕ್ಕೆ ಇಳಿದಿದೆ. ಪೂರ್ಣ ಪ್ರಮಾಣದಲ್ಲಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. . ಸಂಘಟಿತ, ಸಾಮೂಹಿಕ ಪ್ರಯತ್ನದಿಂದ ಇದನ್ನು ಸಾಧಿಸಬೇಕು ಎಂದು ನಿರ್ದೇಶಿಸಿದರು.

      ಕೋವಿಡ್ ಪರೀಕ್ಷೆಗಳನ್ನೂ ಹೆಚ್ಚಾಗಿ  ನಡೆಸಬೇಕಾಗಿದೆ. ಇದಕ್ಕಾಗಿ ನಿನ್ನೆಯμÉ್ಟೀ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಶಿರಾ ತಾಲೂಕಿನಲ್ಲಿ ಮುಂದಿನ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಪರೀಕ್ಷಾ ವರದಿಗಳನ್ನು ಬೇಗನೆ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

       ಜಿಲ್ಲೆಯಲ್ಲಿ ಈವರೆಗೂ 415776 ಮಂದಿಗೆ ಮೊದಲ ಡೋಸ್ ಹಾಗೂ 1,13,781 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಮೊದಲನೇ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ನೀಡಲು ಆದ್ಯತೆ ನೀಡಬೇಕುಮ. ಲಭ್ಯತೆ ಆಧಾರದಲ್ಲಿ ಎಲ್ಲಾ ಅರ್ಹರಿಗೂ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 566 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್‍ಗಳು ಲಭ್ಯವಿದ್ದು, 300 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಗಳನ್ನು ಹಂಚಿಕೆ ಮಾಡಲು ಬಾಕಿ ಇರುತ್ತದೆ. ಬಾಕಿ ಇರುವ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್‍ಗಳು ಕೂಡಲೇ ಹಂಚಿಕೆ ಮಾಡಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

      ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು, ಉದ್ಯಮಿಗಳ ನೆರವಿನೊಂದಿಗೆ ಸೋಂಕು ನಿಯಂತ್ರಿಸಬೇಕು. ಗ್ರಾಮೀಣ ಜನರಿಗೆ ಸೋಂಕು ತಗುಲಿದಾಗ ಹೋಂ ಐಸೋಲೇಷಗೆ ಅವರ ಮನೆಯಲ್ಲಿ ಹೆಚ್ಚಿನ ಅನುಕೂಲತೆಗಳು ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಹೆಚ್ಚಿನ ಹೆಜ್ಜೆಯಿಡಬೇಕು. ಜಿಲ್ಲೆಯಲ್ಲಿ ಇಲ್ಲಿವರೆಗೂ ಕೋವಿಡ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ, ಮುಂದೆಯೂ ನಿರ್ವಹಿಸುವಿರಿ ಎಂಬ ವಿಶ್ವಾಸ ನನಗಿದೆ. ಸರ್ಕಾರ ನಿಮ್ಮೊಂದಿಗಿದೆ. ನಿಮಗೆ ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕೋವಿಡ್-19 ಎರಡನೇ ಅಲೆ ಆರಂಭದಲ್ಲಿ ಜಿಲ್ಲೆಯಲ್ಲಿ 29ಸಾವಿರ ಸೋಂಕಿನ ಪ್ರಕರಣಗಳು ಕಂಡುಬರುತ್ತಿತ್ತು. ಈಗ 15ಸಾವಿರಕ್ಕೆ ಇಳಿದಿದೆ. ಶೇ.47%ರಷ್ಟಿದ್ದ ಸೋಂಕಿನ ಪ್ರಮಾಣ ಶೇ.25ಕ್ಕೆ ಇಳಿದಿದೆ. ಇಡೀ ರಾಜ್ಯದಲ್ಲಿ ಎಲ್ಲರಿಗಿಂತಲೂ ಮೊದಲು ಕೊರೋನಾ ಆರೈಕೆ ಕೇಂದ್ರ ಪ್ರಾರಂಭಿಸಿ ಸೋಂಕಿನ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಂದಾಗಿ ನಿಯಂತ್ರಕ್ಕೆ ಬಂದಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

      ಜಿಲ್ಲಾಸ್ಪತ್ರೆಯಲ್ಲಿ 285 ಕೋವಿಡ್ ಹಾಸಿಗೆಗಳು ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ 50 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಿದೆ. ಕ್ವಾರಿ, ಕ್ರಷರ್ ಸೇರಿದಂತೆ ಅನೇಕ ದಾನಿಗಳ ನೆರವಿನಿಂದ 300 ಆಮ್ಲಜನಕ ಸಾಂದ್ರಕಗಳು ಲಭ್ಯವಿದ್ದು, ಜಿಲ್ಲೆಯಲ್ಲಿರುವ 150 ಪಿಎಚ್ ಸಿ(ನಗರ ಮತ್ತು ಗ್ರಾಮೀಣ) ಗಳಲ್ಲಿಯೂ 5-10 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಶ್ರೀದೇವಿ, ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿಯೂ ಆಮ್ಲಜನಕದ ಅಗತ್ಯಕ್ಕೆ ಅನುಗುಣವಾಗಿ ಹಾಸಿಗೆಗಳನ್ನು ಬಳಸಿಕೊಳ್ಳಲಾಗಿದೆ. ಸಿದ್ಧಗಂಗಾ ಆಸ್ಪತ್ರೆಯಿಂದಲೂ ಸರ್ಕಾರದ ಆದೇಶದನ್ವಯ ಹಾಸಿಗೆಗಳನ್ನು ಪಡೆಯಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತದ ಸೂಕ್ತ ನಿರ್ವಹಣೆಯಿಂದಾಗಿ ಆಮ್ಲಜನಕದ ಕೊರತೆ ನಡುವೆಯೂ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

(Visited 2 times, 1 visits today)
Previous Articleಪಡಿತರಕ್ಕಾಗಿ ಮುಂಜಾನೆಯಿಂದಲೇ ಮೈಲುದ್ದದ ಸಾಲು
Next Article ತುಮಕೂರು : ಕೋವಿಡ್ ಜಾಗೃತಿ ಅಭಿಯಾನ
News Desk Benkiyabale

Related Posts

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm news

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm news

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm news
ತಾಜಾ ಸುದ್ಧಿಗಳು

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm
news

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm
news

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm
news

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm
news

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
news

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm
Our Youtube Channel
Our Picks

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

By News Desk BenkiyabaleSeptember 25, 2026 6:07 pm

ತುಮಕೂರು: ಲೇಖಕಿ ವಿವೇಕ ಕೆ.ವಿ. ಅವರು ರಚಿಸಿರುವ ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕಥಾ ಸಂಕಲನವು ಸೆಪ್ಟೆಂಬರ್ ೨೭ರಂದು ಬೆಳಿಗ್ಗೆ…

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.