ತುಮಕೂರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್ ಪರಸ್ಪರ ಉಜ್ಜಿಕೊಂಡು ಪರಿಣಾಮ ದೇವರ ದರ್ಶನಕ್ಕೆಂದು ಬಂದ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಕೆಎಸ್ ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಸೆಪ್ಟೆAಬರ್ ೧೫ರಂದು ಬೆಳಗ್ಗೆ ೯.೩೦ರ ಸುಮಾರಿನಲ್ಲಿ ಘಟನೆ ಸಂಭವಿಸಿದ್ದು, ಮೃತರನ್ನು ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿಯ ಪಂಕಜ ಮತ್ತು ಪುಟ್ಟತಾಯಮ್ಮ ಎಂದು ಗುರುತಿಸಲಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿಯ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಲು ಆರು ಮಂದಿ ಮಹಿಳೆಯರು ಇಂದು ಬೆಳಗ್ಗೆ ತುಮಕೂರು ಬಸ್ ನಿಲ್ದಾಣಕ್ಕೆ ಬಂದಿಳಿದು ಗೊರವನಹಳ್ಳಿಗೆ ಹೋಗಲು ಬಸ್ ಹತ್ತುವ ವೇಳೆ ಈ ಘಟನೆ ನಡೆದಿದೆ.
ಪುಟ್ ಬೋರ್ಡನಲ್ಲಿದ್ದಾಗಲೇ ಮಹಿಳೆಯರು ಹತ್ತಿದ ಬಸ್ ಹಿಮ್ಮುಖವಾಗಿ ಚಲಿಸಿದೆ. ಆಗ ಇನ್ನೊಂದು ಬಸ್ ಅಲ್ಲಿಗೆ ಬಂದಿದೆ. ಈ ಸಂದರ್ಭದಲ್ಲಿ ಒಂದಕ್ಕೊAದು ಬಸ್ ಉಜ್ಜಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
(Visited 1 times, 1 visits today)