BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ
  • ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ
  •  ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ
  • ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ
  • ಬುಕ್ಕಾಪಟ್ಟಣ ಗ್ರಾಮ ಸ್ವಚ್ಛತೆಯಲ್ಲಿ ಮರೀಚಿಕೆ
  • ೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ
  • ದುರಸ್ತಿ ವೇಳೆ ಬಯಲಾದ ಮಹಾ ನಿರ್ಲಕ್ಷ
  • ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಬರಿಮಲೆ ಯಾತ್ರೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದಬ್ಬಾಳಿಕೆ, ದಮನಕಾರಿ ನೀತಿ ಸಲ್ಲದು-ಕೆ.ದೊರೈರಾಜ್
Trending

ದಬ್ಬಾಳಿಕೆ, ದಮನಕಾರಿ ನೀತಿ ಸಲ್ಲದು-ಕೆ.ದೊರೈರಾಜ್

By News Desk BenkiyabaleUpdated:December 11, 2019 6:49 pm

 ತುಮಕೂರು:

      ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಮುಂದಾಗದ ರಾಜ್ಯ ಸರ್ಕಾರ ದಬ್ಬಾಳಿಕೆ, ದಮನಕಾರಿ ನೀತಿ ಅನುಸರಿಸುತ್ತಿರುವುದು ಬಿಡಬೇಕು ಎಂದು ಪಿಯುಜಿಎಲ್ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ದೊರೈರಾಜ್ ಹೇಳಿದ್ದಾರೆ.

      ತುಮಕೂರಿನ ಅಮಾನಿಕೆರೆಯಲ್ಲಿ ಅಂಗನವಾಡಿ ನೌಕರರ ಸಂಘ ಸಿಐಟಿಉ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಭಾಗವಾಗಿ ನಡೆಸುತ್ತಿರುವ ಧರಣಿನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಂಗನವಾಡಿ
ಕಾರ್ಯಕರ್ತೆಯರು 1975ರಿಂದ ಮಕ್ಕಳ ಪೋಷಣೆ ಮತ್ತು ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಬೇಡಿಕೆಗಳು ಸರಿಯಾಗಿವೆ. ಹಾಗಾಗಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

      ಮಾತೃದೇವೋಭವ ಎನ್ನುವವರು ಅಂಗನವಾಡಿ ಕಾರ್ಯಕರ್ತೆಯರನ್ನು ಕಡೆಗಣಿಸಿದ್ದಾರೆ. ಅಂಗನವಾಡಿಗಳನ್ನ ರಾಜ್ಯ ಸರ್ಕಾರ ದಮನ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಅಂಗನವಾಡಿಗಳನ್ನು ಬಲಿಷ್ಠಗೊಳಿಸಲು ಪ್ರಯತ್ನಿಸಬೇಕು. ಅಂಗನವಾಡಿಗಳನ್ನು ಮುಚ್ಚಿದರೆ ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬೀಳುತ್ತದೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಪಾದಯಾತ್ರೆ ನಡೆಸಲು ಮುಂದಾಗಿದ್ದರೆ ಅದಕ್ಕೆ ಸರ್ಕಾರ ಅವಕಾಶ ನೀಡಿಲ್ಲ. ಇದು ಸಮರ್ಥನೀಯವಲ್ಲ. ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಇದುವರೆಗೆ ಅಂಗನವಾಡಿಗಳಲ್ಲಿ ಶಿಕ್ಷಣ ಪಡೆದಿರುವ ಪೋಷಕರೊಂದಿಗೆ ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ. ಪಿಯುಸಿಎಲ್ ಮತ್ತುಜನಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆಗೆ ಬೆಂಬಲ ನೀಡುತ್ತದೆ. ಮುಂದೆಯೂ ಕೂಡ ನಿಮ್ಮೊಂದಿಗೆ ಇರಲಿದ್ದೇವೆ ಎಂದು ತಿಳಿಸಿದರು.

      ಪ್ರಜಾಪ್ರಭುತ್ವ ಮಾದರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇಂತಹ ಹೋರಾಟಗಳನ್ನು ಹತ್ತಿಕ್ಕುವ ಮೂಲಕ ಬಡವರ ಮಕ್ಕಳ ಶಿಕ್ಷಣ ಹಕ್ಕನ್ನು ಮೊಟುಕುಗೊಳಿಸದಂತೆ ಆಗುತ್ತದೆ. ಮಹಿಳೆಯರ ಸಬಲೀಕರಣದ ಮಾತನಾಡುವ ಸರ್ಕಾರ ಈ ರೀತಿ ಹತ್ತಿಕ್ಕುವುದು ಸಹನೀಯವಲ್ಲ ಎಂದು ಕಿಡಿಕಾರಿದರು.

      ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ ಮಾತನಾಡಿ, ಸರ್ಕಾರ ಅಂಗನವಾಡಿ ತಾಯಂದಿರ ನೆರವಿಗೆ ಬರಬೇಕು. ಅಂಗನವಾಡಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಅವರು ಕೇಳುತ್ತಿರುವ ಬೇಡಿಕೆಗಳು ನ್ಯಾಯಯುತವಾಗಿವೆ. ಕೂಡಲೇ ಅಂಗನವಾಡಿ ನೌಕರರ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

      ಅಂಗನವಾಡಿ ಕಾರ್ಯಕರ್ತೆಯರು ರಾತ್ರಿಯೆಲ್ಲ ಇಲ್ಲೇ ಕಾಲಕಳೆದಿದ್ದಾರೆ. ಅವರ ನೋವು, ಕಷ್ಟಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅವರ ನೆರವಿಗೆ ಬರಬೇಕು. ಅಂಗನವಾಡಿ ತಾಯಂದಿರು ಸಾಕಷ್ಟು ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಾಮಾಣಿಕವಾಗಿ ದುಡಿಯುತ್ತ ಮಕ್ಕಳನ್ನು ತಿದ್ದುವ ತಾಯಂದಿರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ, ಎನ್.ಕೆ.ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಮೊದಲಾದವರು ಉಪಸ್ಥಿತರಿದ್ದರು.

(Visited 17 times, 1 visits today)
Previous Articleಈರುಳ್ಳಿ ಬೆಲೆ ನಿಯಂತ್ರಣಕ್ಕೆ ಒತ್ತಾಯಿಸಿ ಸಿಪಿಎಂ, ಸಿಐಟಿಯು ಪ್ರತಿಭಟನೆ
Next Article ಜಿಎಸ್‍ಟಿ ನಿಯಮ ಸರಳೀಕರಣಕ್ಕೆ ಆಗ್ರಹ!
News Desk Benkiyabale

Related Posts

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm news

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm news

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm news
ತಾಜಾ ಸುದ್ಧಿಗಳು

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm

ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ

June 17, 2026 5:23 pm

ಬುಕ್ಕಾಪಟ್ಟಣ ಗ್ರಾಮ ಸ್ವಚ್ಛತೆಯಲ್ಲಿ ಮರೀಚಿಕೆ

June 17, 2026 5:21 pm

೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ

June 16, 2026 5:29 pm
Our Youtube Channel
Our Picks

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

June 17, 2026 5:31 pm

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm

ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ

June 17, 2026 5:23 pm

ಬುಕ್ಕಾಪಟ್ಟಣ ಗ್ರಾಮ ಸ್ವಚ್ಛತೆಯಲ್ಲಿ ಮರೀಚಿಕೆ

June 17, 2026 5:21 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಇ-ಪೌತಿ ಖಾತಾ ಆಂದೋಲನ ೨: ರೈತರಿಂದ ಅರ್ಜಿಗಳ ಸ್ವೀಕಾರ

By News Desk BenkiyabaleJune 17, 2026 5:31 pm

ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬುಧವಾರ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮ ಹಾಗೂ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮ…

ಭೂಮಿಯ ಫಲವತ್ತತೆ ನಾಶ ಮಾಡುವ ರಸಗೊಬ್ಬರ ನಿಯಂತ್ರಿಸಿ

June 17, 2026 5:29 pm

 ಮರು ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ

June 17, 2026 5:26 pm

ಪ.ಪಂ ಇನ್ಮುಂದೆ ಸಮಯ ಪಾಲನೆ ಕಡ್ಡಾಯ

June 17, 2026 5:23 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.