ತುಮಕೂರು:

      ಹೇಮಾವತಿ ನೀರಿನ ಹಂಚಿಕೆ ವಿಚಾರದಲ್ಲಿ ದೇವೇಗೌಡರ ಕುಟುಂಬ ಪ್ರಾಣ ಹೋಗುವವರೆಗೂ ತುಮಕೂರು ಜಿಲ್ಲೆಗೆ ದ್ರೋಹ ಮಾಡಲ್ಲ, ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಮ್ಮ ಕುಟುಂಬದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ವಾಗ್ದಾಳಿ ಮಾಡಿದರು.

      ಅವರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಬೃಹತ್ ಬಹಿರಂಗ ಸಮಾವೇಶ ಹಾಗು ಮೈತ್ರಿ ಪಕ್ಷದ ಅಭ್ಯರ್ಥಿ ಪರವಾಗಿ ಆಯೋಜಿತವಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.

      ಕಾವೇರಿ ನ್ಯಾಯಾಧಿಕರಣದಲ್ಲಿ ತುಮಕೂರು ಜಿಲ್ಲೆಗೆ 25.31 ಟಿ ಎಂ ಸಿ ನೀರು ಹಂಚಿಕೆಯಾಗಿದೆ ಆದರೆ ಈ ಭಾರಿ 25.47 ಟಿ ಎಂ ಸಿ ಹೆಚ್ಚುವರಿ ನೀರು ತುಮಕೂರು ಜಿಲ್ಲೆಗೆ ಹರಿದಿದೆ,ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರ ಬಗ್ಗೆ ಅನಗತ್ಯ ಅಪಪ್ರಚಾರ ಮಾಡುವ ಬಿಜೆಪಿ ನಾಯಕರಿಗೆ ಭಗವಂತ ತಕ್ಕ ಪಾಠ ಕಲಿಸುತ್ತಾನೆ ಎಂದರು.

       ದೇವೇಗೌಡರು ತುಮಕೂರಿನಲ್ಲಿ ಸ್ಪರ್ದಿಸಿರುವುದು ದೇವರ ಆಟ,ಹಾರಂಗಿ,ಯಗಚಿ ಜಲಾಶಯ ನಿರ್ಮಾಣವಾಗುವುದಕ್ಕೆ ದೇವೇಗೌಡರೇ ಕಾರಣ,ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಿಲ್ಲ ಎಂಬ ಕಾರಣಕ್ಕೆ ಹೆಗಡೆ ಸರ್ಕಾರದಲ್ಲಿ ನೀರಾವರಿ ಮಂತ್ರಿಗಳಾಗಿದ್ದ ದೇವೇಗೌಡರು ನನ್ನ ರೈತರಿಗೆ ನ್ಯಾಯ ದೊರಕಿಸದ ಮೇಲೆ ನನಗೆ ನೀರಾವರಿ ಖಾತೆಯೇ ಬೇಡ ಎಂದು ತಮ್ಮ ಸ್ತಾನಕ್ಕೆ ರಾಜೀನಾಮೆ ನೀಡಿದ್ದರು, ನಮ್ಮ ಪಕ್ಷಕ್ಕೆ ತುಮಕೂರು ಜಿಲ್ಲೆ ಶಕ್ತಿ ತುಂಬಿದೆ ಎಲ್ಲಾ ವಿಚಾರಗಳಲ್ಲೂ ಹಾಸನ ಜಿಲ್ಲೆಗಿಂತ ತುಮಕೂರು ಜಿಲ್ಲೆಗೆ ದೇವೇಗೌಡರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ,ದೇವೇಗೌಡರು ಮುಖ್ಯಮಂತ್ರಿಗಳಾಗಿ ಉತ್ತರ ಕರ್ನಾಟಕದ ಭಾಗಕ್ಕೆ ನೀರಾವರಿಗೆ ಕೊಡುಗೆ ನೀಡದಿದ್ದರೆ ಉತ್ತರ ಕರ್ನಾಟಕದ ಪರಿಸ್ತಿತಿ ಏನಾಗುತ್ತಿತ್ತು ಎಂದು ಠೀಕಾಕಾರರು ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

      ನಮ್ಮ ಪಕ್ಷ ಎಂದಿಗೂ ಕುಟುಂಬ ರಾಜಕಾರನ ಮಾಡಿಲ್ಲ,ಹಳ್ಳಿ ಮಕ್ಕಳು ತಂದೆ ತಾಯಂದಿರಿಂದ ಜೆಡಿಎಸ್ ಪಕ್ಷ ಬೆಳೆದಿದ ಈ ಪಕ್ಷದ ಉಳಿವಿಗಾಗಿ ಎಲ್ಲಾ ತ್ಯಾಗಕ್ಕು ಸಿದ್ದರಿದ್ದೇವೆ , ಬಿಜೆಪಿ ನಾಯಕರು ನಮ್ಮ ತಾಯಿಯ ಹೆಸರನ್ನು ಬೀದಿಗೆ ತಂದರು,ಇವರಿಗೆ ಹಿಂದೂ ಸಂಸ್ಕøತಿಯ ಪರಿಚಯವೇ ಇಲ್ಲ,ನಾನು ಅನಿವಾರ್ಯವಾಗಿ ರಾಜಕೀಯಕ್ಕೆ ಬಂದೆ ಅಂದಿನಿಂದ ಇಂದಿನವರೆಗೂ ಜನಸೇವೆ ಮಾಡುತ್ತಿದ್ದೇನೆ , ನಾನು ಮುಖ್ಯಮಂತ್ರಿಯಾಗಿ 10 ತಿಂಗಳಾಗಿದೆ ಇಲ್ಲಿಯರೆಗೂ ಯಾರಿಗಾದರೂ ಮೋಸಮಾಡಿದ್ದೀನ ಎಂದು ಪ್ರಶ್ನಿಸಿದರು.

      ಸಾಲ ಮನ್ನಾ ವಿಚಾರವಾಗಿ ಕೆಲವರು ಅನಗತ್ಯ ಠೀಕೆ ಮಾಡುತ್ತಾರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಘೋಷಣೆ ಮಾಡಿದ್ದ 8000 ಕೋಟಿ ಸಾಲ ಮನ್ನಾಮಾಡಲು 1 ವರ್ಷ ಕಾಲ ಹಿಡಿಯಿತು ಮೈತ್ರಿ ಸರ್ಕಾರ ಬಂದ ಮೇಲೆಯೂ ಸಹ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಸಾಲ ಮನ್ನಾ ಪೈಕಿ 3000 ಕೋಡಿ ಬಾಕಿ ಇತ್ತು ಅದನ್ನ ಭರಿಸಿದ್ದೇವೆ ,45000 ಕೋಟಿ ಸಾಲ ಮನ್ನಾ ಮಾಡುವುದು ಸುಲಭದ ಮಾತಲ್ಲ, ಸಾಲ ಮನ್ನಾ ಘೋಷಣೆ ಮಾಡಿದ 10 ತಿಂಗಳಲ್ಲಿ 11170 ಕೋಟಿ ಸಾಲಮನ್ನಾ ಹಣ ರೈತರ ಖಾತೆಗೆ ಜಮೆ ಮಾಡಲಾಗಿದೆ,ತುಮಕೂರು ಜಿಲ್ಲೆಗೆ 300 ಕೋಟಿ ಹಣಬಿಡುಗಡೆಯಾಗಿದೆ ಎಂದರು.

      ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವಂತೆ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಮನವಿ ಮಾಡಿದ್ದಾರೆ ಈ ಕ್ಷೇತ್ರವನ್ನು ಖಂಡಿತ ದತ್ತು ಪಡೆದು ಅಭಿವೃದ್ದಿಪಡಿಸುತ್ತೇನೆ ಎಂದರು.

      ತೆಂಗು ಬೆಳೆಗಾರರ ಅಭಿವೃದ್ದಗೆ ಬಜೆಟ್ ನಲ್ಲಿ 180 ಕೋಟಿ ಅನುದಾನ ಮೀಸಲಿಟ್ಟು ತೆಂಗು ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ 20000 ಸಬ್ಸಿಡಿ ನೀಡಲಾಗುತ್ತಿದೆ,ಗೃಹಲಕ್ಷ್ಮಿ ಯೋಜನೆ ಜಾರಲಾಗಿದೆ,ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಹೆಚ್ಚಿಸಲಾಗಿದೆ,ಇಸ್ರೇಲ್ ಮಾದರಿಯಲ್ಲಿ ಕೃಷಿ ಹಾಗು ತೋಟಗಾರಕಾ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೊಳ್ಳುವ ತಂತ್ರಜಾÐನ ಜಾರಿಗೆ ತರಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.

      ಜೆಡಿಎಸ್ ಪಕ್ಷದಲ್ಲಿ ಎಲ್ಲಾ ಸಮುದಾಯದ ಮುಖಂಡರಿಗೂ ಮನ್ನಣೆ ನೀಡಲಾಗಿದೆ ಯಾರನ್ನೂ ಕಡೆಗಣಿಸಿಲ್ಲ,ತುಮಕೂರು ಜಲ್ಲೆಗೆ 5330 ಕೋಟಿ ಅನುದಾನ ಮಂಜೂರಾಗಿದೆ,ಮುಸಲ್ಮಾನ್ ಬಂಧುಗಳಿಗೆ 2180 ಕೋಟಿ ಹಣ ಹಂಚಿಕೆ ಮಾಡಿದೇವೆ ,ಮುಸಲ್ಮಾನ್ ಬಂಧುಗಳಿಗೆ ಬಜೆಟ್ ನಲ್ಲಿ ನಯಾಪೈಸೆ ಅನುದಾನ ಕಡಿತ ಮಾಡಿಲ್ಲ,ಬೀದಿ ವ್ಯಾಪಾರಿಗಳಿಗೆ 10000ರೂ ವರೆಗೆ ಬಡ್ಡಿರಹಿತ ಸಾಲ ನೀಡಿದ್ದೇವೆ ,ಜಾತಿ ಪ್ರಶ್ನೆ ಇಲ್ಲ ಹೆಚ್ಚು ದಾಖಲೆ ಮತಗಳಿಂದ ದೇವೇಗೌಡರನ್ನು ಗೆಲ್ಲಿಸುವಂತೆ ಮನವಿ ಮಡಿದರು.

      ಸಚಿವ ಎಸ್ ಆರ್ ಶ್ರೀನಿವಾಸ್ ಮಾತನಾಡಿ ಬಿಜೆಪಿ ಅಭ್ಯರ್ತಿ ಬಸವರಾಜು ನೇತ್ರಾವತಿ ನದಿ ತಿರುವು ಯೋಜನೆಯಲ್ಲಿ 15 ಕೋಟಿ ನುಂಗಿದ್ದಾರೆ,ಇವರು ಕಾಲಿಟ್ಟಲ್ಲೆಲ್ಲಾ ಜನ ಭಸ್ಮವಾಗುತ್ತಾರೆ,4 ಭಾರಿ ಶಾಸಕರಾಗಿದ್ದ ಸೊಗಡುಶಿವಣ್ಣ ಅವರನ್ನು ಮುಲೆಗುಂಪು ಮಾಡಿ ಈಗ ದೇವೇಗೌಡರ ಮೇಲೆ ಆರೋಪ ಮಾಡುತ್ತಾನೆ, ಎಳನೀರು ಪ್ಯಾಕ್ಟರಿ ಮಾಡುತ್ತೇನೆಂದು ದಲಿತರ ಜಮೀನು ನುಂಗಿ ಷೇರು ಕೊಡುತ್ತೇನೆಂದು ಬಡ ಜನರಿಂದ ಹಣ ಲೂಟಿ ಹೊಡೆದು ಕಾಲೇಜು ಕಟ್ಟಿ ಐಶಾರಾಮಿ ಜೀವನ ಮಾಡುತ್ತಿದ್ದಾರೆ ,ಇವರಪ್ಪನ ಜಮೀನಿನಲ್ಲಿ ಹುರಳಿಕಾಳು,ರಾಗಿ ಬೆಳೆದು ಕಾಲೇಜು ಕಟ್ಟಿಲ್ಲ ಎಂದು ಬಸವರಾಜು ವಿರುದ್ದ ಏಕವಚನದಲ್ಲಿ ಹರಿಹಾಯ್ದರು.

      ಮೋದಿ ದೊಡ್ಡ ಮನೆಹಾಳ ,ಇವರ ಕ್ಯಾಬಿನೆಟ್ ನಲ್ಲಿರುವವರೆಲ್ಲರೂ ತಿಕ್ಕಲರು ಸಂವಿಧಾನ ಬದಲಾಯಿಸುತ್ತೇವೆ ಎಂದು ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕೊಡುತ್ತಾರೆ ಎಂದು ಏಕವಚನದಲ್ಲಿ ಹರಿಹಾಯ್ದರು.

      ಶಾಸಕ ಡಿಸಿ ಗೌರೀಶಂಕರ್ ಮಾತನಾಡಿ ಸಂವಿದಾನದ ಆಶಯಗಳನ್ನು ಅನುಷ್ಟಾನಗೋಳಿಸಿರುವ ದೇವೇಗೌಡರು ಅಭ್ಯರ್ಥಿಗಳಾಗಿರುವುದು ನಮ್ಮ ಪುಣ್ಯ,ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಮ್ಮ ಕ್ಷೇತ್ರಕ್ಕೆ 300 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ ,ಮಹಾನ್ ನಾಯಕರನ್ನು ಸೃಷ್ಟಿಸಿದ ದೇವೇಗೌಡರಿಗೆ ಹೆಚ್ಚು ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರಲ್ಲದೆ,ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಲೀಡ್ ತಂದುಕೊಡುವುದಾಗಿಭರವಸೆ ನಿಡಿದರು.

 

(Visited 25 times, 1 visits today)