ತುಮಕೂರು:

      ನಗರದ ಸಿದ್ದಗಂಗಾ ಮಠದಲ್ಲಿ ಜ.31 ರಂದು ನಡೆಯಲಿರುವ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ,ಶ್ರೀ ಶಿವಕುಮಾರಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಒಂದು ಲಾರಿ ಹಾಗು ಒಂದು ಟೆಂಪೋ ಎರಡು ಲೋಡ್ ಅಕ್ಕಿ ಸಮರ್ಪಿಸಿದರು.

      ಜಿಲ್ಲೆಯ ಮೂಲೆ ಮೂಲೆಗಳಿಂದ ಭಕ್ತರು ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಧವಸ ಧಾನ್ಯ ಅರ್ಪಿಸುತ್ತಿದ್ದಾರೆ ,ಶ್ರೀ ಮಠದ ಪರಮಭಕ್ತರಾಗಿರುವ ಮಾಜಿ ಸಚಿವ ಸಿ ಚನ್ನಿಗಪ್ಪ ಅವರ ಕುಂಟುಂಬ ಮೊದಲಿನಿಂದಲೂ ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮಂಗಳವಾರ ಕುಟುಂಬದ ಪರವಾಗಿ ಶಾಸಕ ಡಿ ಸಿ ಗೌರೀಶಂಕರ್ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಸಮ್ಮುಖದಲ್ಲಿ ಶ್ರೀ ಮಠಕ್ಕೆ ಅಕ್ಕಿ ಸಮರ್ಪಿಸಿದರು.

      ಶ್ರೀ ಮಠಕ್ಕೆ ಆಗಮಿಸಿದ ಶಾಸಕ ಡಿ ಸಿ ಗೌರೀಶಂಕರ್ ಸಿದ್ದಗಂಗಾಶ್ರೀಗಳ ಆಶೀರ್ವಾದ ಪಡೆದು ಪುಣ್ಯಸ್ಮರಣೆ ಕಾರ್ಯಕ್ರಮದ ಸಿದ್ದತೆಗಳ ಕುರಿತಾಗಿ ಶ್ರೀಗಳ ಜೊತೆ ಸಮಾಲೋಚಿಸಿದರು. 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದಗಂಗಾ ಮಠದ ಒಡನಾಟ ಸಾಮಾನ್ಯ ಭಕ್ತನಿಂದ ಹಿಡಿದು ರಾಜಕಾರಣಿಗಳು ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರು ಗೊಂದಲದ ಸನ್ನಿವೇಶ ಉಂಟು ಮಾಡದೆ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿ ಪರಮಪೂಜ್ಯರ ಗದ್ದುಗೆ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರಲ್ಲದೆ,ಸಿದ್ದಗಂಗಾ ಶ್ರೀಗಳಾದ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಕಾಲಘಟ್ಟದಲ್ಲಿ ಬದುಕಿರುವ ನಾವೇ ಪುಣ್ಯ ವಂತರು,ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ 8 ರಿಂದ10 ಲಕ್ಷ ಜನ ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇದೆ, ನಮ್ಮ ಉಸಿರಿರುವವರೆಗೂ ಶ್ರೀ ಮಠದ ಸೇವೆ ಮುಂದುವರೆಸುತ್ತೇವೆ ಎಂದರು.

      ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್ ,ಜೆಡಿಎಸ್ ಮುಖಂಡರಾದ ವೈ ಟಿ ನಾಗರಾಜು,ಕೆಂಪರಾಜು,ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ,ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್,ಮಹಿಳಾ ಘಟಕದ ಅಧ್ಯಕ್ಷೆ ಗೌರಕ್ಕ ಹಾಗು ಜೆಡಿಎಸ್ ಮುಖಂಡರು ಉಪಸ್ತಿತರಿದ್ದರು.

(Visited 29 times, 1 visits today)