ಕೊರಟಗೆರ:

      ಭಾರತ ದೇಶದ ಸಮಗ್ರ ಅಭಿವೃದ್ದಿ ಮತ್ತು ಬಡವರ ರಕ್ಷಣೆಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಕುರುಬ ಸಮುದಾಯ ಮತ್ತೋಮ್ಮೆ ಬೆಂಬಲಸಿ ತುಮಕೂರು ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜುಗೆ ಮತ ನೀಡಬೇಕು ಎಂದು ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮನವಿ ಮಾಡಿದರು.

      ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಬಿಜೆಪಿ ಯುವ ಮೋರ್ಚದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಕುರುಬ ಸಮುದಾಯದ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

      ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹಂಚುವ ವಿಚಾರದಲ್ಲಿ ಮಾಜಿ ಪ್ರದಾನಿ ದೇವೇಗೌಡರು ತಾರತಮ್ಮ ಮಾಡಿದ್ದಾರೆ. ದೇವೇಗೌಡರು ಕುರುಬ ಸಮುದಾಯದ ವಿರೋದಿ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಹೆಜ್ಜೆ ಹೆಜ್ಜೆಗೂ ತುಳಿದುಕೊಂಡು ಬಂದಿದ್ದಾರೆ. ಜಾತಿಯ ಮೂಲಕ ರಾಜಕಾರಣ ಮಾಡುವ ಮಾಜಿ ಪ್ರಧಾನಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸೂಚನೆ ನೀಡಿದರು.

      ಕೊರಟಗೆರೆ ಯುವ ಮೋರ್ಚದ ಮುಖಂಡ ಸ್ವಾಮಿ ಮಾತನಾಡಿ ನರೇಂದ್ರ ಮೋದಿ ಭಾರತ ದೇಶವನ್ನು ವಿಶ್ವನಾಯಕ ಮಾಡುವ ಸಂಕಲ್ಪ ಮಾಡುತ್ತೀದ್ದಾರೆ. ನರೇಂದ್ರ ಮೋದಿ ಎಂಬ ಶಕ್ತಿಯನ್ನು ಎದುರಿಸಲು ಆಗದೇ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷ ಸೇರಿದಂತೆ ರಾಷ್ಟ್ರದ 21ಪಕ್ಷಗಳು ಒಂದಾಗಿ ಮೋದಿಯನ್ನು ಕೆಳಗಿಸುವ ಹುನ್ನಾರ ಮಾಡುತ್ತೀದ್ದಾರೆ. ರಾಷ್ಟ್ರದ ಯುವ ಮತದಾರರು ನರೇಂದ್ರ ಮೋದಿಯ ಪರವಾಗಿ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತೀದ್ದಾರೆ ಎಂದು ತಿಳಿಸಿದರು.

      ತುಮಕೂರು ಜಿಲ್ಲೆಯ ಮತದಾರರು ಕುಟುಂಬ ರಾಜಕಾರಣವನ್ನು ಕೊನೆಯಾಗಿಸುವ ಸಂಕಲ್ಪವನ್ನು ಈಗಾಗಲೇ ಮಾಡಿದ್ದಾರೆ. ಹಾಲಿ ಸಂಸದರಿಗೆ ಟಿಕೇಟ್ ನೀಡದೇ ಕೈಕೊಟ್ಟ ಕಾಂಗ್ರೇಸ್ ಪಕ್ಷವನ್ನು ಮಾಜಿ ಪ್ರದಾನಿ ದೇವೇಗೌಡರೇ ತುಮಕೂರು ಮುಕ್ತ ಮಾಡಿದ್ದಾರೆ. ಮುದ್ದಹನುಮೇಗೌಡರಿಗೆ ಟಿಕೇಟ್ ತಪ್ಪಿಸಿದ ದೇವೇಗೌಡರಿಗೆ ಮತದಾರರು ಚುನಾವಣೆಯಲ್ಲಿ ಶಾಶ್ವತವಾಗಿ ಮನೆಗೆ ಕಳುಹಿಸುತ್ತಾರೆ. ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಬಸವರಾಜು ಗೆಲವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

       ಕಾರ್ಯಕ್ರಮದಲ್ಲಿ ಕಾಳಿದಾಸ ವಿದ್ಯಾವರ್ದಕ ಸಂಘದ ಅಧ್ಯಕ್ಷ ಮಂಜುನಾಥ, ಜಿಲ್ಲಾ ಯುವಮೋರ್ಚ ಪ್ರದಾನ ಕಾರ್ಯದರ್ಶಿ ರುದ್ರೇಶ್, ಕುರುಬ ಸಮುದಾಯದ ಮುಖಂಡರಾದ ಪುಟ್ಟರಾಜು, ತಿಮ್ಮಜ್ಜ, ಶಿವರುದ್ರಪ್ಪ, ರಾಜೇಶ್, ಸಿದ್ದಲಿಂಗು, ಮಂಜುನಾಥ, ಶಿವಕುಮಾರ್, ಮಲ್ಲಿಕಾರ್ಜುನ್, ನಾಗೇಶ್, ನಾಗಾರ್ಜುನ, ಮಹೇಶ್, ರಂಗರಾಜು, ಪ್ರಕಾಶ್, ರಂಗಧಾಮಯ್ಯ, ಕೆಂಚಣ್ಣ, ಪವನಕುಮಾರ್ ಸೇರಿದಂತೆ ಇತರರು ಇದ್ದರು.

 

(Visited 26 times, 1 visits today)