ತುಮಕೂರು:

      ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಿದ್ದತೆ ನಡೆಸಿದ್ದು ಅಂತಿಮವಾಗಿ ಜ್ಯಾತ್ಯಾತಿತ ಜನತಾದಳ ತಮ್ಮ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಿದೆ.

      ಸಿ.ಬಿ.ಸುರೇಶ್ ಬಾಬು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಕಣಕ್ಕಿಳಿಸುವುದಾಗಿ ಜಾತ್ಯಾತೀತ ಜನತಾದಳದ ವರಿಷ್ಠರು ತೀರ್ಮಾನಿಸಿದ್ದು ಬಹಳ ದಿನಗಳಿಂದ ಗೊಂದಲದಲ್ಲಿದ್ದ ಎರಡೂ ಪಕ್ಷಗಳ ಮತದಾರರು ನಿರಾಳರಾಗಿದ್ದಾರೆ.

      ಹಾಲಿ ಕಾಂಗ್ರೆಸ್ ಪಕ್ಷದ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಮತ್ತೆ ಅಭ್ಯರ್ಥಿಯಾಗಬಹುದೆಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಜೆಡಿಎಸ್ ತನ್ನ ಪಕ್ಷದ ಹಿತದೃಷ್ಟಿಯಿಂದ ಸ್ಥಾನ ಬಿಟ್ಟುಕೊಡದೇ ಪಟ್ಟು ಹಿಡಿದು ತನ್ನದಾಗಿಸಿಕೊಂಡಿದೆ.

      ಬಹಳ ವರ್ಷಗಳ ನಂತರ ಅಂದರೆ ಕುರುಬ ಸಮುದಾಯದ ಸಿಎನ್ ಬಾಸ್ಕರಪ್ಪನವರ ನಂತರ ಸುರೇಶ್ ಬಾಬು ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿ ಮಾಡುವ ಸಾದ್ಯತೆಯಿದೆ.

      ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮೂರು ಭಾರಿ ಶಾಸಕರಾಗಿದ್ದ ಇವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು ಜೆಡಿಎಸ್ ಪಕ್ಷದ ರಾಜ್ಯ ಭೂತ್ ಕಮಿಟಿ ಅಧ್ಯಕ್ಷರಾಗಿದ್ದ ಸಿ.ಬಿ.ಸುರೇಶ್ ಬಾಬು ರವರು ಅಭ್ಯರ್ಥಿಯಾಗುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

(Visited 2,880 times, 1 visits today)