BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
  • ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ
  • ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ
  • ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್
  • ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಆಚರಣೆ
  • ನಾಡಕಚೇರಿಗಳಲ್ಲಿ ಕಂದಾಯ ವಿಷಯ ಕುರಿತ ಅರ್ಜಿಗಳ ಪರಿಹಾರಕ್ಕೆ ವಿಶೇಷ ಕ್ರಮ: ಡಿಸಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸರ್ಕಾರದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಸಂಸದರ ಸಲಹೆ
Trending

ಸರ್ಕಾರದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಸಂಸದರ ಸಲಹೆ

By News Desk BenkiyabaleUpdated:August 31, 2019 7:04 pm

ತುಮಕೂರು :

      ಸ್ಮಾರ್ಟ್‍ಸಿಟಿ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಹಣವನ್ನು ಸಾರ್ವಜನಿಕವಾಗಿ ಸದುಪಯೋಗವಾಗುವಂತೆ ಅಧಿಕಾರಿಗಳು ಬಳಸಬೇಕು ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.

      ನಗರದ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಸ್ಕಿಲ್ ಪಾರ್ಕ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಅಧಿಕಾರಿಗಳು ವ್ಯರ್ಥಮಾಡದೇ ನಗರದ ಅಭಿವೃದ್ಧಿಗೆ ಸದುಪಯೋಗಪಡಿಸಿ ತುಮಕೂರು ನಗರದ ಚಿತ್ರಣವನ್ನು ಬದಲಾಯಿಸಿ ಉತ್ತಮ ನಗರವನ್ನಾಗಿ ನಿರ್ಮಿಸಬೇಕು ಎಂದು ಅವರು ಹೇಳಿದರು.

      ಈ ಹಿಂದೆ ಐದು ವರ್ಷಗಳ ಕಾಲ ಸಂಸತ್‍ನ ಸದಸ್ಯನಾಗಿದ್ದಾಗ ತುಮಕೂರು ನಗರವನ್ನು ಇಂಡಸ್ಟ್ರಿಯಲ್ ಹಬ್ ಮಾಡಬೇಕೆಂಬ ಹಂಬಲವಿತ್ತು. ಆದರೆ ಅದು ಆಗ ಕೈಗೂಡಲಿಲ್ಲ. ತುಮಕೂರು ನಗರ ಬೆಂಗಳೂರಿಗೆ ಮುಖ್ಯದ್ವಾರವಾಗಿದ್ದು, ಕೈಗಾರಿಕೀಕರಣದ ಕೇಂದ್ರೀಯ ಸ್ಥಾನವನ್ನಾಗಿ ಮಾರ್ಪಾಡು ಮಾಡಬೇಕು. ವಿದೇಶಿಯರಿಗೆ 100 ಎಕರೆ ಜಮೀನು ಕೊಟ್ಟು ಅವಕಾಶ ನೀಡುವುದಕ್ಕಿಂತ ಸ್ಥಳೀಯರನ್ನು ಗುರ್ತಿಸಿ 2 ಅಥವಾ 5 ಎಕರೆ ಜಮೀನು ಕೊಟ್ಟು ತರಬೇತಿ ನೀಡಿ ತಂತ್ರಜ್ಞಾನ ಬಳಸುವಂತೆ ಮಾಡಿದರೆ ನಮ್ಮ ಜಿಲ್ಲೆಯ ಮಧ್ಯಮ ವರ್ಗದವರು ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.

      ಇಂದು ರೈತ ತಾನು ಬೆಳೆಯುವ ಬೆಳೆಗಳ ರೋಗಗಳ ಬಗ್ಗೆ ಅರಿವಿಲ್ಲದೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಆದರೆ ಈ ರೀತಿಯಾಗದಂತೆ ಬೆಳೆಗಳಿಗೆ ಹರಡುವ ರೋಗಗಳ ಬಗ್ಗೆ ಅವುಗಳನ್ನು ನಿವಾರಿಸುವ ಸೂಕ್ತ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ರೈತರೇ ಬೆಳೆಯ ರೋಗಗಳನ್ನು ಪತ್ತೆಹಚ್ಚಿ ಔಷಧಿ ಸಿಂಪಡಣೆ ಮಾಡುವಂತೆ ತರಬೇತಿ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

      ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಬಗೆಹರಿದಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿರುವ ಜಿಲ್ಲೆ ಇದ್ದರೆ ಅದು ತುಮಕೂರು ಮಾತ್ರ. ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಜೊತೆಗೆ ಎತ್ತಿನಹೊಳೆ ಕೂಡ ಸೇರಿಕೊಳ್ಳಲಿದೆ. ಒಂದು ದಿನವೂ ನಿಲ್ಲಿಸದೇ ಇದೇ ಡಿಸೆಂಬರ್ 31ರವರೆಗೆ ನೀರು ಬಿಡಬೇಕೆಂಬ ಕಟ್ಟುನಿಟ್ಟಿನ ಆಜ್ಞೆ ಇದೆ. ಅದೆ ಪ್ರಕಾರವಾಗಿ ನೀರು ಬಂದರೆ ನಮ್ಮ ಕೆರೆಗಳೆಲ್ಲವೂ ತುಂಬುತ್ತವೆ ಎಂದು ಹೇಳಿದರು.

     ನಮ್ಮ ಜಿಲ್ಲೆ ಚಿಕ್ಕದು, ಜನಸಂಖ್ಯೆ ಕಡಿಮೆ ಇದೆ ಎಂದು ತುಂಬಾ ಶ್ರಮಪಟ್ಟು ನಾನು ಜಿಲ್ಲೆಯನ್ನು ಸ್ಮಾರ್ಟ್‍ಸಿಟಿಗೆ ಸೇರಿಸಿದೆ. ನಗರಪಾಲಿಕೆಯ ಆಯುಕ್ತರು ಕಟ್ಟುನಿಟ್ಟಿನಿಂದ ಕೆಲಸ ಮಾಡುತ್ತಿದ್ದು, ತುಮಕೂರು ನಗರವನ್ನು ಸ್ಮಾರ್ಟ್‍ಸಿಟಿ ಮಾಡಲು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ನಾವು ಅವರಿಗೆ ಪ್ರೋತ್ಸಾಹ ನೀಡಬೇಕು. ನಾನು ಸಹ ಕೇಂದ್ರದಿಂದ ಆಗಬೇಕಾಗಿರುವ ಸಹಾಯವನ್ನು ಮಾಡುತ್ತೇನೆ ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ಸದಾ ನನ್ನ ಪ್ರೋತ್ಸಾಹವಿದೆ.

      ನಗರೀಕರಣ ಒಬ್ಬರಿಂದ ಆಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕರೂ ಸಹ ಇದರಲ್ಲಿ ತೊಡಗಿಕೊಳ್ಳಬೇಕು ಎಂದರಲ್ಲದೆ, ಗಿಡಮರಗಳನ್ನು ಕಡಿಯದಂತೆ ಜನರಿಗೆ ಅರಿವು ಮೂಡಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಗಿಡಮರಗಳನ್ನು ಬೆಳೆಸಬೇಕು. ವಾರ್ಡ್‍ಗಳಲ್ಲಿ ಭಾನುವಾರದಂದು ಗಿಡ-ಮರಗಳನ್ನು ನೆಡುವ ಕೆಲಸ ಮಾಡೋಣ. 3 ವರ್ಷ ನಾವು ಗಿಡ ನೆಟ್ಟು ನೋಡಿಕೊಂಡರೆ ಅದು 300 ವರ್ಷ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.

     ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಯಾವ ಊರಿಗೆ ಹೋದರೂ ಒಂದು ಪಾರ್ಕ್ ಮಾಡಿ ಎಂದು ಹೇಳುತ್ತಿದ್ದರು. ಅವರ ಕಾಲದಲ್ಲಿ ಮಾಡಿದಂತಹ ಪಾರ್ಕ್‍ಗಳು, ಬಡಾವಣೆಗಳನ್ನು ಇಂದು ಯಾರು ಮಾಡಲು ಸಾಧ್ಯವಿಲ್ಲ ಅವರಿಗೆ ಒಂದು ದೃಷ್ಠಿಕೋನ ಇತ್ತು ಎಂದು ಅವರು ಹೇಳಿದರು.

      ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಸ್ಕಿಲ್ ಎಂಬ ಪದ ಇಂದು ಒಂದು ಫ್ಯಾಷನ್ ವರ್ಡ್ ಆಗಿದೆ. ಕೇವಲ ಹೆಸರಿಗೆ ಮಾತ್ರ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಯಕ್ರಮಗಳನ್ನು ಮಾಡಿ ಕೈ ಬಿಡುವ ಕೆಲಸವಾಗುತ್ತಿದೆ. ಅದನ್ನು ಫಾಲೋ ಅಪ್ ಮಾಡುವ ಕೆಲಸವನ್ನು ಯಾರು ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

      ಸ್ಕಿಲ್ ಪಾರ್ಕ್ ಅಡಿಯಲ್ಲಿ ನಾವು ಆಗ್ರೊಬೇಸ್ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸ್ಟಾರ್ಟ್‍ಅಪ್ ಕಂಪನಿಗೆ ಹೆಚ್ಚಿನ ಉತ್ತೇಜನ ಕೊಡಬೇಕು. ಸ್ಕಿಲ್ ಪಾರ್ಕ್‍ನಲ್ಲಿ ನಗರದ ಸಾಮಾನ್ಯ ಜನರಿಗೆ ಉಪಯೋಗವಾಗುವ ತಂತ್ರಜ್ಞಾನವನ್ನು ಬಳಸಿ, ಅವರಿಗೆ ತರಬೇತಿ ನೀಡಿ ತಂತ್ರಜ್ಞಾನವನ್ನು ಅವರೇ ಬಳಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಸರ್ಕಾರಿ ಯೋಜನೆಗಳಲ್ಲಿ ಇಂದು ಹೆಚ್ಚಿನದಾಗಿ ಕಳಪೆ ಕಾರ್ಯ ನಡೆಯುತ್ತಿದೆ ಆದರೆ ಆ ರೀತಿ ಆಗದೆ ಜಿಲ್ಲೆಯ ಮಧ್ಯಮ ವರ್ಗದ ಜನರಿಗೆ ಉದ್ಯೋಗ ನೀಡಿ ಅವರನ್ನು ಉದ್ಯೋಗಶೀಲರಾಗುವಂತೆ ಮಾಡಬೇಕು ಎಂದರು.

      ರೈತರು ಕಡಿಮೆ ಬಂಡವಾಳವನ್ನು ಹಾಕಿ ಹೆಚ್ಚಿನ ಲಾಭ ಪಡೆಯುವ ತಂತ್ರಜ್ಞಾನ ಬಳಸುವಂತೆ ಮಾಡಬೇಕು. ಯಾವುದೇ ರೀತಿಯ ಕಳಪೆ ಇಲ್ಲದೇ ಆಗ್ರೊ ಬೇಸನ್ನು ಪ್ರತ್ಯೇಕ ಸ್ಕಿಲ್ ಪಾರ್ಕ್ ಮಾಡಿ ಜಿಲ್ಲೆಯ ಜನರಿಗೆ ಉಪಯೋಗವಾಗುವಂತೆ ಮಾಡುವುದು ಸ್ಕಿಲ್ ಸಿಟಿಯ ಉದ್ದೇಶವಾಗಬೇಕು ಎಂದು ಹೇಳಿದರು.

      ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಸ್ಕಿಲ್ ಯೋಜನೆಗಳ ಬಗ್ಗೆ ಪಿಪಿಟಿ ಪ್ರದರ್ಶನ ನೀಡಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಸ್ಮಾರ್ಟ್‍ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್, ಅಭಿವೃದ್ಧಿ ರೆಸಲ್ಯೂಷನ್‍ನ ಕುಂದರಹಳ್ಳಿ ರಮೇಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 14 times, 1 visits today)
Previous Articleಬಸ್-ಆಟೋಗಳ ನಡುವೆ ಡಿಕ್ಕಿ : ಓರ್ವ ಮಹಿಳೆ ಸಾವು!
Next Article ತುಮಕೂರು: ಮತದಾರರ ಪಟ್ಟಿ ಪರಿಶೀಲನೆಗೆ ನಾಗರೀಕ ಸೇವಾ ಕೇಂದ್ರದಲ್ಲೂ ಅವಕಾಶ!!
News Desk Benkiyabale

Related Posts

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm news
ತಾಜಾ ಸುದ್ಧಿಗಳು
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
news

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm
news

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm
news

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
news

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
news

ಬೇಸ್ಮೆಂಟ್ ಸಮೇತ ಕುಸಿದು ಬಿದ್ದ ಕಾಲೇಜಿನ ಕಾಂಪೌ0ಡ್

September 30, 2026 6:04 pm
Our Youtube Channel
Our Picks

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm

ಕನಿಷ್ಠ ವೇತನ ಹೆಚ್ಚಳ ಮುಂದುವರೆಸಿ: ಆಗ್ರಹ

October 01, 2026 5:25 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

By News Desk BenkiyabaleOctober 01, 2026 5:34 pm

ತುಮಕೂರು: ಪ್ರವಾದಿ ಮುಹಮ್ಮದ್(ಸ) ರವರ ಜೀವನ ಮತ್ತು ಸಂದೇಶಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಮಾಆತೆ ಇಸ್ಲಾಮಿಕ್ ಹಿಂದ್ ಆಯೋಜಿಸಿರುವ…

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ

October 01, 2026 5:32 pm

ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ

October 01, 2026 5:29 pm

ಹರಗುರು ಚರಮೂರ್ತಿಗಳು, ಗಣ್ಯರು ಭಾಗಿ: ಆಕರ್ಷಕ ಕಲಾ ಪ್ರದರ್ಶನ

October 01, 2026 5:27 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.