ಆಸ್ತಿ ವಿಚಾರದಲ್ಲಿ ಘರ್ಷಣೆ : ಮಗನಿಂದಲೇ ತಂದೆಯ ಹತ್ಯೆ

ಗುಬ್ಬಿ:

     ಆಸ್ತಿ ವಿಚಾರದಲ್ಲಿ ಉಂಟಾದ ಘರ್ಷಣೆ ಮಗನಿಂದಲೇ ತಂದೆ ಹತ್ಯೆಯಾಗುವ ಮೂಲಕ ಅಂತ್ಯಗೊಂಡ ದುರ್ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

     ತಾಲ್ಲೂಕಿನ ಕಸಬ ಹೋಬಳಿ ಗೋಳೇನಹಳ್ಳಿ ಗ್ರಾಮದ ಮೂಲದ ನರಸೇಗೌಡ(54) ಹತ್ಯೆಯಾದ ವ್ಯಕ್ತಿ. ಎಲ್‍ಐಸಿ ಏಜಂಟ್ ಆಗಿದ್ದ ಮೃತ ನರಸೇಗೌಡ ಕಳೆದ ಮೂರ್ನಾಲ್ಕು ವರ್ಷದಿಂದ ಕುಟುಂಬದಿಂದ ಬೇರ್ಪಟ್ಟು ಬಾಡಿಗೆ ರೂಮ್‍ನಲ್ಲಿ ವಾಸವಾಗಿದ್ದರು. ಪತ್ನಿ ಮತ್ತು ಮಕ್ಕಳು ತುಮಕೂರು ನಗರದಲ್ಲಿ ವಾಸವಿದ್ದರು. ಕೌಟುಂಬಿಕ ಕಲಹದಿಂದ ದೂರವಿದ್ದ ಮೃತರೊಟ್ಟಿಗೆ ಆಸ್ತಿ ವಿವಾದ ಮಕ್ಕಳ ಮನಸ್ತಾಪಕ್ಕೆ ಕಾರಣವಾಗಿತ್ತು. ಕೆಲ ತಿಂಗಳಿಂದ ಆಸ್ತಿ ವಿಚಾರದಲ್ಲಿ ಉಂಟಾದ ಗಲಾಟೆ ತಾರಕಕ್ಕೇರಿ ಮಗ ಮುನಿಸ್ವಾಮಿ(23) ತನ್ನ ತಂದೆ ನರಸೇಗೌಡ ಅವರ ರೂಂಗೆ ಬಂದು ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರ ಹತ್ಯೆವೆಸಗಿದ್ದಾನೆ. ನಂತರ ಪೊಲೀಸರಿಗೆ ಪೋನ್ ಕರೆ ಮಾಡಿ ತಾನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಪಿಐ ರಾಮಕೃಷ್ಣಯ್ಯ ಅವರ ತಂಡ ಪಟ್ಟಣದ ಹೊರವಲಯದಲ್ಲಿ ಹೆದ್ದಾರಿ ಬಳಿ ಆರೋಪಿ ಮುನಿಸ್ವಾಮಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 7 times, 1 visits today)

Related posts

Leave a Comment