ತುಮಕೂರು : ಜುಲೈ ೧ ಎಂದಕೂಡಲೇ ಕನ್ನಡ ಪತ್ರಿಕಾ ದಿನ ನೆನಪಾಗುತ್ತದೆ. ಅದನ್ನು ಆಚರಿಸುವುದು, ಸ್ಮರಿಸುವುದು ಎಲ್ಲ ಪತ್ರರ‍್ತ ರ‍್ತವ್ಯ. ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದದ ಆಸ್ತಿಯಾಗಬೇಕು ಎಂದು ತುಮಕೂರು ವಿವಿಕುಲಪತಿಗಳಾದ ಪ್ರೊ. ವೆಂಕಟೇಶ್ವರಲು ಕರೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯ ದಲ್ಲಿ ಮಂಗಳವಾರದಂದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ತುಮಕೂರು ಜಿಲ್ಲಾ ಕರ‍್ಯನಿರತ ಪತ್ರರ‍್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳ ಮುದ್ರಣ ಮಾಧ್ಯಮದ ರ‍್ಚಸ್ಸು ಕಡಿಮೆ ಆಗ್ತಾಯಿದೆ. ಡಿಜಿಟಲೀಕರಣಕ್ಕೆ ಮಾರುಹೋಗ್ತಾ ಇದೆ. ಆದರೆ ಮುದ್ರಣ ಪತ್ರಿಕೋದ್ಯಮ ಇತಿಹಾಸವನ್ನು ತಿಳಿಯುವುದು ಮುಖ್ಯ ಎಂದರು.
ಪತ್ರಿಕೆಗಳಿಂದ ಜ್ಞಾನ, ಅಭಿವೃದ್ದಿ, ಸಮಾಜದ ಬದಲಾವಣೆಗೂ ಪತ್ರಿಕೆಗಳ ಪಾತ್ರ ಮುಖ್ಯವಾದದ್ದು. ಒಂದು ಪತ್ರಿಕೆಯಿಂದ ರಾಜಕೀಯವನ್ನು ಬದಲಾಯಿಸುವ ಶಕ್ತಿ ಇದೆ ಎಂದರು.
ಪತ್ರಿಕೆಗಳನ್ನು ಓದುವ ಮತ್ತು ಬರೆಯುವ ಕೌಶಲ್ಯಗಳನ್ನು ಬೆಳೆಸಿಕೊಳ್ಳ ಬೇಕು. ಓದುವ ಅವ್ಯಾಸವನ್ನು ವಿದ್ಯರ‍್ಥಿ ಜೀವನದಲ್ಲೇ ಬೆಳೆಸಿಕೊಳ್ಳಬೇಕು. ಅದರಿಂದ ಜ್ಞಾನ ಭಂಡಾರ ಹೆಚ್ಚಾಗುತ್ತದೆ. ಡಿಜಿಟಲೀಕರಣ ದಿಂದ ಜಡ್ಜ್ ಮಾಡುವುದನ್ನೇ ಮರೆತು ಬಿಟ್ಟಿದ್ದೇವೆ ಎಂದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕರಾದ ಡಾ. ಸಿಬಂತಿ ಪದ್ಮನಾಭ ಕೆ. ವಿ ಅವರು ಪ್ರಸ್ತಾವಿಕವಾಗಿ ಮಾತನಾಡಿ
ಕನ್ನಡ ಪತ್ರಿಕೋದ್ಯಮಕ್ಕೆ ೧೮೨ ರ‍್ಷಗಳ ಇತಿಹಾಸವಿದೆ. ಸಾಹಿತ್ಯ ಬೇರೆಯಲ್ಲ ಪ್ರಕೋದ್ಯಮ ಬೇರೆಯಲ್ಲ ಎಂದು ತಿಳಿಸಿದರು.
ಕರ‍್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಿರಿಯ ವಿದ್ವಾಂಸಕರಾದ ಡಾ.ಪದ್ಮಪ್ರಸಾದ್ ಮಾತನಾಡಿ ಸುದ್ದಿ ತಯಾರಾಕರು ಮತ್ತು ಸುದ್ದಿ ಅನ್ವೇಷಕರ ನಡುವಣ ಕೆಲಸ ಮಾಡುವ ಒಂದು ದೊಡ್ಡ ಸಮೂಹವೇ ಪತ್ರಿಕೋದ್ಯಮ ಕ್ಕೆ ಜೀವಾಳ.
ಸೋಶಿಯಲ್ ಮಾಧ್ಯಮದಿಂದ ಅನಗತ್ಯವಾದ ಸ್ರ‍್ಧೆ ಉಂಟಾಗಿದೆ. ದಿನ ನಿತ್ಯ ಬರುವ ಬ್ರೇಕಿಂಗ್ ನ್ಯೂಸ್ ಗಳಿಂದ ಸಮಾಜದ ದಿಕ್ಕು ಬದಲಾಗುತ್ತಿದೆ.. ಆದರೆ ಮಾಧ್ಯಮಕ್ಷೇತ್ರ ಕೆಲಸ ಮಾಡಬೇಕಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ಮಾಧ್ಯಮ ಎಂದರೆ ಮನರಂಜನೆ, ಸುದ್ದಿ, ಮಾಹಿತಿಯನ್ನು ನೀಡುವುದು ಎಂದರು.
ಪತ್ರರ‍್ತರಾದವರಿಗೆ ಸೂಕ್ಷ್ಮತೆ, ಕೌಶಲ್ಯ, ಬಹುಜ್ಞತೆ ಮತ್ತು ತಂತ್ರಜ್ಞಾನಗಳ ಬಗ್ಗೆ ಅರಿವಿರಬೇಕು. ಇವೆಲ್ಲವನ್ನೂ ಪತ್ರಿಕೋದ್ಯಮ ವಿದ್ಯರ‍್ಥಿಗಳು ಅಳವಡಿಸಿಕೊಳ್ಳುವಿದು ಬಹುಮುಖ್ಯ ಎಂದರು.
ಉತ್ತಮ ಪತ್ರರ‍್ತ ರಾಗಬೇಕು ಎಂದರೆ ಪ್ರಚಲಿತ ವಿದ್ಯಾಮಾನಗಳ ಜೊತೆಗೆ ದೇಶದ ವಿಚಾರಗಳು, ವ್ಯವಹಾರಿಕಾ ಜ್ಞಾನ, ರಾಜಕೀಯ ವಿಚಾರಗಳು, ಹೆಚ್ಚು ಹೆಚ್ಚು ಓದು ಮತ್ತೆ ಬರವಣಿಗೆ ಬಹುಮುಖ್ಯವಾದಾದದ್ದು ಎಂದರು.ಪತ್ರರ‍್ತನಿಗೆಬಿ ಅಕ್ಷರ ಜ್ಞಾನದ ಬಗ್ಗೆ ಅರಿವು ಅಗತ್ಯ. ಪುಸ್ತಕ, ವಿರ‍್ಶೆಗಳು, ಕಾದಂಬರಿಗಳು, ಸಾಹಿತ್ಯವನ್ನು ಓದಿದಾಗ ಮಾತ್ರ ಅಕ್ಷರ ಜ್ಞಾನ ಹೆಚ್ಚಾಗಲು ಸಾಧ್ಯ. ಬರವಣಿಗೆ ಕೂಡ ಸುಧಾರಿಸಿಕೊಳ್ಳುತ್ತದೆ ಎಂದರು.
ಕುಲಸಚಿವರಾದ ಎಂ. ಕೊಟ್ರೇಶ್ ರವರು ಮಾತನಾಡಿ ಪತ್ರಿಕೋದ್ಯಮ ಕೇವಲ ಓದಲು ಬರೆಯಲು ಮಾತ್ರವಲ್ಲ, ಭಾಷೆಯನ್ನು ಕಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಕನ್ನಡ ದಿನಪತ್ರಿಕೆಗಳನ್ನು ಓದಿ ಕನ್ನಡ ಕಲಿತವರು ಉಂಟು ಎಂದು ತಿಳಿಸಿದರು.ಜಿಲ್ಲಾ ಕರ‍್ಯನಿರತ ಪತ್ರರ‍್ತ ಸಂಘದ ಅಧ್ಯಕ್ಷರಾದ ಚಿ.ನಿ. ಪುರುಷೋತಮ್ ಮಾತನಾಡಿ ಪತ್ರಿಕೆಗಳಲ್ಲಿ ಕೆಲಸ ಮಾಡುವುದು ಎಂದರೆ ಸುಲಭದ ಕೆಲಸವಲ್ಲ. ಸುಳ್ಳುಸುದ್ದಿಗಳನ್ನು ಬರೆಯುವುದನ್ನು ನಿಲ್ಲಿಸಿ ಸತ್ಯ ಬರೆಯುವುದನ್ನು ಕಲಿಯಬೇಕು. ಸಮಾಜವನ್ನು ತಿದ್ದುವ ಕೆಲಸವಾಗಲಿ. ಹೊಸತನವನ್ನು ರೂಡಿಸಿಕೊಳ್ಳಬೇಕು. ಪತ್ರಿಕೆ ಮತ್ತು ಪುಸ್ತವನ್ನು ಓದುವ ಅವ್ಯಾಸವನ್ನು ರೂಡಿಸಿಕೊಳ್ಳುವಂತೆ ಮಾಡಬೇಕು ಎಂದು ಕರೆ ನೀಡಿದರು.
ಕರ‍್ಯಕ್ರಮದಲ್ಲಿ ತುಮಕೂರು ವಿವಿಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ದಾಕ್ಷಾಯಿಣಿ, ಜಿಲ್ಲಾ ಕರ‍್ಯನಿರತ ಪತ್ರರ‍್ತ ಸಂಘದ ಪ್ರಧಾನ ಕರ‍್ಯರ‍್ಶಿಗಳಾದ ಟಿ. ಇ ರಘುರಾಮ್, ಹಲವು ಪತ್ರರ‍್ತರು, ವಿದ್ಯರ‍್ಥಿಗಳು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.